ಕಲಬುರಗಿ: ಲೋಕಸಭಾ ಚುನಾವಣೆಯ (Lokasabha Elections 2024) ಬಹಿರಂಗ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ. ಇದಕ್ಕೂ ಮುನ್ನ ಅಫ್ಜಲಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಈ ಹಿಂದೆ ಆಗಿದ್ದ ತಮ್ಮ ಸೋಲಿನ ಕಹಿ ನೆನಪನ್ನು ಮತ್ತೆ ಬಿಚ್ಚಿಟ್ಟಿದ್ದಾರೆ.
ನಾನು ಅಫ್ಜಲಪುರದಿಂದ ಸೋತಿದ್ದೇನೆ ಅಲ್ಲ, ಆದರೆ ಇಲ್ಲೇ ಬಿಜೆಪಿಗೆ ಲೀಡ್ ಹೆಚ್ಚಾಗಿದೆ. ನನ್ನ ಸೋಲಿಸಲು ಅಮಿತ್ ಶಾ (Amitshah), ಮೋದಿ (Narendra Modi), ಸೂಲಿಬೆಲೆ ಎಲ್ಲರೂ ನನ್ನ ಟಾರ್ಗೆಟ್ ಮಾಡಿದ್ರು. ಆದರೆ ಅದಕ್ಕೆ ಕಲಬುರಗಿ ಜನ ಸ್ಪಂದಿಸಲ್ಲ ಅಂದುಕೊಂಡಿದ್ದೆ. ಆದರೆ ನನ್ನ ಸೋಲಾಯಿತು. ಮೋದಿ ಇಂದಿಗೂ ಅದನ್ನೇ ಪದೇ ಪದೇ ಹೇಳುತ್ತಾರೆ ಎಂದು ತಮ್ಮ ಸೋಲಿನ ಕಹಿ ನೆನಪು ಮತ್ತೆ ಬಿಚ್ಚಿಟ್ಟರು.
ನಾನು ಸಂಸದ ಹಾಗೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಕರ್ನಾಟಕ ರಾಜ್ಯದ ಜನರಿಗೆ ಅನೇಕ ಯೋಜನೆ ಕೊಟ್ಟಿದೆ. ಅದೇ ಮಾದರಿಯಲ್ಲಿ ಕೇಂದ್ರದಲ್ಲಿ ಸಹ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ವಿಶೇಷ ಸ್ಥಾನಮಾನ ಹಿನ್ನೆಲೆ ಈ ಭಾಗದ ಹಲವರಿಗೆ ಉನ್ನತ ವಿದ್ಯಾಭ್ಯಾಸ ಸಿಗುತ್ತಿದೆ. ದೇಶದಲ್ಲಿ 371 (ಜೆ) ನಮಗೆ ಬಹುಮತ ಇಲ್ಲದಿದ್ದರೂ ಜಾರಿಗೆ ತಂದಿದ್ದೇವೆ. ಮೋದಿ ಬರುತ್ತಾರೆ, ಹೋಗುತ್ತಾರೆ. ಆದರೆ ಇಲ್ಲಿ ಕೆಲಸ ಮಾಡುವವರು ನಾವು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾನು ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ, ಹೂಳಿದ್ರೆ ಮಣ್ಣು ಹಾಕೋಕೆ ಬನ್ನಿ: ಖರ್ಗೆ ಭಾವನಾತ್ಮಕ ಮಾತು
ಹಿಂದೆ ದುರ್ದೈವದಿಂದ ಏನಾಯ್ತು?, 3-4 ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿಂದೆ ಜಾಸ್ತಿ ಲೀಡ್ ಬಂದಿದೆ. ಆದರೆ ಈ ಬಾರಿ ಬಿಜೆಪಿಗೆ ಮುಖಭಂಗ ಮಾಡಿ ಮೋದಿಗೂ ಸಹ ಗೊತ್ತಾಗಲಿಲ್ಲ ಅವರ ಕೊಡುಗೆ ಏನು?, ನಾವು ಹಾಕಿದ ರೈಲ್ವೆ ಟ್ರ್ಯಾಕ್ ಅದರ ಮೇಲೆ ಎರಡು ಟ್ರೈನ್ ಬಿಟ್ಟು ಗ್ರೀನ್ ಸಿಗ್ನಲ್ ಕೊಡುತ್ತಾರೆ. ಆದರೆ ಮೋದಿ ಏನು ಮಾಡದೇ ಭಾಯಿಯೋ ಬೆಹನೋ ಅಂತಾ ಹೇಳಿ ಭಾಷಣ ಮಾಡ್ತಾರೆ. ಏರ್‍ಪೋರ್ಟ್ ಸೇರಿದಂತೆ ಎಲ್ಲವೂ ನೀವು ಮಾರಾಟ ಮಾಡುತ್ತಿದ್ದಾರೆ. ಈ ದೇಶದಲ್ಲಿ ಮೋದಿ- ಅಮಿತ್ ಶಾ ಮಾರಾಟ ಮಾಡಿದ್ರೆ ಅದಾನಿ ಹಾಗೂ ಅಂಬಾನಿ ಎಲ್ಲ ಖರೀದಿ ಮಾಡುತ್ತಿದ್ದಾರೆ. ಸದ್ಯ ದೇಶದಲ್ಲಿ ಇಬ್ಬರು ಮಾರಾಟ ಮಾಡುವವರು ಇಬ್ಬರು ತೆಗೆದುಕೊಳ್ಳುವವರದ್ದೇ ಆಗಿದೆ. ನಮ್ಮ ಗ್ಯಾರಂಟಿ ಜಯ ನೋಡಿ ಮೋದಿ ಅವರು ಸಹ ಗ್ಯಾರಂಟಿ ಜಾರಿಗೆ ತಂದಿದ್ದಾರೆ ಎಂದಿದ್ದಾರೆ.
ಮೋದಿ ಅವರ ಯಾವ ಗ್ಯಾರಂಟಿ ಸಹ ಇಲ್ಲ. ಪ್ರತಿ ವರ್ಷ 2 ಕೋಟಿ ನೌಕರಿ ಕೊಡುವುದಾಗಿ ಸುಳ್ಳು ಹೇಳಿದ್ರು. ಕಾಂಗ್ರೆಸ್ ನವರ ಕಪ್ಪು ಹಣ ತಂದು 15 ಲಕ್ಷ ಹಣ ಕೊಡುವುದಾಗಿ ಹೇಳಿದ್ರು ಕೊಟ್ರಾ?, ಸಾಲಮನ್ನಾ ಅಂದ್ರು ಸಾಲಮನ್ನಾ ಸಹ ಮಾಡಲಿಲ್ಲ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಂಗಳಸೂತ್ರ ಕಿತ್ತು ಹಾಕುತ್ತಾರೆ ಅಂತಾರೆ. ನಾವು ಬಡವರಿಗೆ ಯೋಜನೆ ಕೊಟ್ಟಿದ್ದೇವೆ. ಸೋನಿಯಾ ಅವರು ತಮ್ಮ ತಾಳಿಯನ್ನು ಕೊಟ್ಟರು, ಇಂದಿರಾಗಾಂಧಿ ಅವರ ಬಳಿ ಆಸ್ತಿ ಸೈನಿಕರಿಗಾಗಿ ಕೊಟ್ಟರು. ರಾಜೀವ್ ಗಾಂಧಿ ಕೊಲೆ ಬಳಿಕ ಅವರ ಕುಟುಂಬದವರು ಯಾರೂ ಮಂತ್ರಿ ಆಗಿಲ್ಲ. ಆದರೆ ಗಾಂಧಿ ಕುಟುಂಬ ಲೂಟಿ ಮಾಡಿದೆ, ನಮ್ಮ ಚುನಾವಣಾ ಪ್ರಣಾಳಿಕೆಯನ್ನ ಮುಸ್ಲಿಂ ಲೀಗ್ ಆಗಿದೆ ಅಂತಾರೆ. ನಾವು ಯುವಕರಿಗೆ ಉದ್ಯೋಗಗಳನ್ನು ಹೇಳಿದ್ದೇವೆ, ಏನು ಮುಸ್ಲಿಮರಿಗೆ ಕೊಟ್ವಾ?. ನಾರಿ ಶಕ್ತಿ ಏನು ಮುಸ್ಲಿಮರಿಗೆ ಮಾತ್ರ ಕೊಡುತ್ತಿದ್ದೇವಾ. ಮೋದಿ ಅವರಿಗೆ ತಿಳುವಳಿಕೆ ಕಡಿಮೆಯಾಗಿದೆ. ಹೀಗಾಗಿ ಅವರಿಗೆ ತಿಳಿ ಹೇಳುತ್ತೇನೆ ಎಂದರು.