ನವದೆಹಲಿ: ಎಐಸಿಸಿ (AICC) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಲೇ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಹೊಸ ಸ್ಟೇರಿಂಗ್ ಕಮಿಟಿಯನ್ನು (Steering Committee) ರಚನೆ ಮಾಡಿದ್ದಾರೆ. ಕಾಂಗ್ರೆಸ್‌ನ (Congress) ಹೊಸ ಕಮಿಟಿಯಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ ದೊರಕಿದೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್‌ನ ಹೊಸ ಸಮಿತಿಯಲ್ಲಿ ಸ್ಥಾನ ದೊರಕಿದೆ. ಮಾತ್ರವಲ್ಲದೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರನ್ನೂ ಸ್ಟೇರಿಂಗ್ ಕಮಿಟಿಯ ಭಾಗವನ್ನಾಗಿ ಮಾಡಲಾಗಿದೆ.
Advertisement
Advertisement
ಸಿಡಬ್ಲ್ಯುಸಿ ಸ್ಥಾನದಲ್ಲಿ ಸ್ಟೇರಿಂಗ್ ಕಮಿಟಿ ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟು 47 ಮಂದಿಯ ಸ್ಟೇರಿಂಗ್ ಕಮಿಟಿ ರಚನೆಯಾಗಿದೆ. ಇದರಲ್ಲಿ ಕರ್ನಾಟಕದ ಹೆಚ್.ಕೆ ಪಾಟೀಲ್, ಕೆ.ಹೆಚ್ ಮುನಿಯಪ್ಪ ಹಾಗೂ ದಿನೇಶ್ ಗುಂಡೂರಾವ್ ಅವರಿಗೆ ಸ್ಥಾನ ದೊರಕಿದೆ. ಇದನ್ನೂ ಓದಿ: ಅಣ್ವಸ್ತ್ರವನ್ನು ಯಾರು ಕೂಡಾ ಆಶ್ರಯಿಸಬಾರದು: ರಷ್ಯಾಗೆ ರಾಜನಾಥ್ ಸಿಂಗ್ ಸಲಹೆ
Advertisement
ಸಂಪ್ರದಾಯದಂತೆ ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಆಯ್ಕೆಯ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗುತ್ತದೆ ಹಾಗೂ ಪಕ್ಷದ ವ್ಯವಹಾರಗಳನ್ನು ನಡೆಸಲು ಸ್ಟೇರಿಂಗ್ ಸಮಿತಿಯನ್ನು ರಚಿಸಲಾಗುತ್ತದೆ.
Advertisement
ಹೊಸ ಸಮಿತಿ ರಚನೆಯಾಗುವುದಕ್ಕೂ ಮೊದಲು ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಉಸ್ತುವಾರಿಗಳು ತಮ್ಮ ರಾಜೀನಾಮೆಯನ್ನು ನೂತನ ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಚಿವ ಸೋಮಣ್ಣ ಕಪಾಳಮೋಕ್ಷ ಕೇಸ್ – ಸಂಘಟನೆಗಳು ಕಿರುಕುಳ ನೀಡ್ತಿವೆ ಎಂದು ಪೊಲೀಸರಿಗೆ ಮಹಿಳೆ ದೂರು