ಬೆಂಗಳೂರು: ಸಚಿವ ಸಂಪುಟ ರಚನೆಮಾಡಬೇಕಾದರೆ ಎಐಸಿಸಿ ಕೆಲವು ಸೂತ್ರಗಳನ್ನು ರಚನೆ ಮಾಡಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೂತ್ರಗಳ ಪ್ರಕಾರ ಅತಿ ಶೀಘ್ರದಲ್ಲಿ ಉಳಿದ 6 ಸ್ಥಾನಗಳ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಮೊದಲ ಬಾರಿಗೆ ಸಚಿವ ಸಂಪುಟ ಸೇರ್ಪಡೆಯಾಗುವವರಿಗೆ 2 ವರ್ಷಗಳ ಕಾಲಾವಕಾಶವಿರುತ್ತದೆ. ಈ ಬಾರಿಯ ಸಚಿವ ಸ್ಥಾನ ವಂಚಿತರಿಗೆ 2 ವರ್ಷದ ಬಳಿಕ ಸಚಿವ ಸ್ಥಾನ ಕಲ್ಪಿಸಲಾಗುತ್ತದೆ. ಇವರುಗಳ ಕಾಲಾವಧಿ ಉಳಿದ 3 ವರ್ಷವಾಗಿರುತ್ತದೆ ಎಂದು ತಿಳಿಸಿದರು.
Advertisement
ಇನ್ನೊಂದು ಸೂತ್ರದ ಪ್ರಕಾರ 6 ತಿಂಗಳಿಗೊಮ್ಮೆ ಸಚಿವರ ಕಾರ್ಯವನ್ನು ಪರಿಶೀಲನೆ ಮಾಡಲಾಗುತ್ತದೆ. ಸಚಿವರು ಸರಿಯಾಗಿ ಕಾರ್ಯ ನಿರ್ವಹಣೆ ಮಾಡದಿದ್ದಲ್ಲಿ ಬದಲಾವಣೆ ಮಾಡಲಾಗುತ್ತದೆ. ಕಾಂಗ್ರೆಸ್ ನಲ್ಲಿ 2, 3, 4 ಬಾರಿ ಗೆದ್ದಿರುವ ಹಿರಿಯರಿದ್ದಾರೆ. ಹಾಗಾಗಿ ಎಲ್ಲರಿಗೂ ಅವಕಾಶವನ್ನು ಕಲ್ಪಿಸಿಕೊಡುವುದಕ್ಕಾಗಿ ಈ ರೊಟೇಶನ್ ಸೂತ್ರಗಳನ್ನು ಹೈಕಮಾಂಡ್ ನೀಡಿದೆ ಎಂದು ತಿಳಿಸಿದರು.
Advertisement
ಕುಮಾರಸ್ವಾಮಿ ಮತ್ತು ಪರಮೇಶ್ವರ್ ಅವರು ಮುಖ್ಯಮಂತ್ರಿ ಉಪಮುಖ್ಯಮಂತ್ರಿಯಾಗಿ ಮೇ 23 ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಇದಾದ ಬಳಿಕ ಜೂನ್ 6 ರಂದು 25 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ ಖಾತೆ ಹಂಚಿಕೆಯಾಗಿಲ್ಲ.