ಬೆಂಗಳೂರು: ರಾಜ್ಯದಲ್ಲಿ ಈಗ ಚುನಾವಣೆಯ ಗುಂಗು. ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗ್ಲೇ ಮೂರು ಪಕ್ಷಗಳು ಭರ್ಜರಿ ಕಸರತ್ತು ನಡೆಸ್ತಿವೆ. ಅದರಲ್ಲೂ ಆಡಳಿತರೂಢ ಕಾಂಗ್ರೆಸ್‍ಗೆ ಮತ್ತೆ ಅಧಿಕಾರಕ್ಕೆ ಬರಲು ಶತಪ್ರಯತ್ನ ಮಾಡ್ತಿದೆ.
ಈ ನಿಟ್ಟಿನಲ್ಲಿ ಪಕ್ಷದ ಬಲವರ್ಧನೆಗೆಗಾಗಿ ಮೂರು ದಿನ ರಾಜ್ಯದಲ್ಲಿರೋ ಹೊಸ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ತಂಡ ಮೊದಲ ದಿನವಾದ ಇವತ್ತು ಸರಣಿ ಸಭೆ ನಡೆಸ್ತು. ಕೆಪಿಸಿಸಿ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ವೇಣುಗೋಪಾಲ್, ನಾನಿಲ್ಲಿ ಆದೇಶ ನೀಡಲು ಬಂದಿಲ್ಲ. ನಿಮ್ಮ ಜೊತೆ ಕೆಲಸ ಮಾಡಲು ಬಂದಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದಕ್ಕೂ ಲಾಬಿ ಬೇಡ ಅಂತ ಖಡಕ್ ಹೇಳಿದ್ರು.
Advertisement
ಮೊದಲ ವಾರ್ನಿಂಗ್ ಎಂಬಂತೆ ಕಚೇರಿ ಮುಂದೆ ಪಟಾಕಿ ಸಿಡಿಸಲಿಲ್ಲ. ಇನ್ನು, ಪರಮೇಶ್ವರ್ ಮಾತನಾಡಿ, ಎರಡೂ ಸ್ಥಾನಗಳನ್ನ ನಿಭಾಯಿಸಲು ನಾನು ಸಮರ್ಥ ಅಂತ ಮುನಿಯಪ್ಪಗೆ ತಿರುಗೇಟು ಕೊಟ್ರು. ಜೊತೆಗೆ ಯಾವುದೇ ಭಯ ಇಲ್ಲದೇ ಉಸ್ತುವಾರಿ ಜೊತೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ ಅಂತ ನಾಯಕರಿಗೆ ಸೂಚಿಸಿದ್ರು.
Advertisement
ಇದಾದ ಬಳಿಕ ಒಬ್ಬೊಬ್ಬರ ಜೊತೆ ಪ್ರತ್ಯೇಕವಾಗಿ ವೇಣುಗೋಪಾಲ್ ಚರ್ಚೆ ನಡೆಸಿದ್ರು. ಇನ್ನು, ಬೆಳಗ್ಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿಕೆ ಶಿವಕುಮಾರ್, ರೋಷನ್ ಬೇಗ್ ಜೊತೆ ಸಮಾಲೋಚಿಸಿದ್ರು.
Advertisement
ಈ ವೇಳೆ, ಸಿದ್ದರಾಮಯ್ಯ ಅವರನ್ನು ಡೈನಾಮಿಕ್ ಸಿಎಂ ಅಂತ ವೇಣುಗೋಪಾಲ್ ಹೊಗಳಿದ್ರು. ಇನ್ನು, ಕೆಪಿಸಿಸಿ ಕುರ್ಚಿಗೆ ನಾನು ಅರ್ಜಿ ಹಾಕಿಲ್ಲ. ನಾನು ಪಕ್ಷ ಬಿಟ್ರೆ ನನ್ನಂಥವರು ನೂರು ಜನ ಕಾಂಗ್ರೆಸ್ ಅಲ್ಲಿ ಬರ್ತಾರೆ ಅಂತ ಡಿಕೆ ಶಿವಕುಮಾರ್ ಹೇಳಿದ್ರು. ಕಾಂಗ್ರೆಸ್ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಬೇಕು ಅಂದ್ರೆ ನಾವು ಬದಲಾಗಲೇಬೇಕು ಅಂತ ರಮೇಶ್ ಕುಮಾರ್ ಸೂಚ್ಯವಾಗಿ ಹೇಳಿದ್ರು. ಈ ಮಧ್ಯೆ, ನಾಳೆ ವಿಶ್ವನಾಥ್ ಅವರನ್ನು ಭೇಟಿಯಾಗಲು ವೇಣುಗೋಪಾಲ್ ನಿರ್ಧರಿಸಿದ್ದಾರೆ.
Advertisement
ಮೊದಲ ದಿನವೇ ಶಾಕ್:
ಮೊದಲ ದಿನ ಜಿಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ ಸತತ 4 ಗಂಟೆ ಚರ್ಚಿಸಿದ ವೇಣುಗೋಪಾಲ್‍ಗೆ ಶಾಕ್ ಮೇಲೆ ಶಾಕ್ ಆಗಿದೆ. ಪಕ್ಷದ ಅಧ್ಯಕ್ಷರು ಮತ್ತು ಸಿಎಂ ಮೇಲೆ ದೂರುಗಳ ಸುರಿಮಳೆ ಬಂದಿದೆ. ಹೊಸಬರಿಗೆ ಪಕ್ಷದ ಅಧ್ಯಕ್ಷ ಪಟ್ಟ ಕಟ್ಟಿ ಮುಖ್ಯಮಂತ್ರಿಗೂ ಮೂಗುದಾರ ಹಾಕಿ ಅಂತ ಉಸ್ತುವಾರಿಗೆ ಜಿಲ್ಲಾಧ್ಯಕ್ಷರು ಹೇಳಿದ್ದಾಗಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ವೇಳೆ ವೇಣುಗೋಪಾಲ್ ಅವರು 5 ಪ್ರಶ್ನೆಗಳ ಪ್ರಶ್ನಾವಳಿ ಕೊಟ್ಟು ಪಕ್ಷ, ನಾಯಕರ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಆ ಐದು ಪ್ರಶ್ನೆಗಳು
# 1: ಪಕ್ಷದಲ್ಲಿ ಗುಂಪುಗಾರಿಕೆ ಇದೆಯೇ?
# 2: ಕೆಪಿಸಿಸಿ ಅಧ್ಯಕ್ಷ ಯಾರಾಗ್ಬೇಕು? ಏಕೆ ಆಗ್ಬೇಕು? ಹಾಗೂ ಎಂಥವರು ಬೇಕು?
# 3: ಸಿದ್ದರಾಮಯ್ಯ ಸರ್ಕಾರದ ಪಾಸಿಟಿವ್ ಅಂಶಗಳು ಹಾಗೂ ನೆಗೇಟಿವ್ ಅಂಶಗಳೇನು?
# 4: ರಾಜ್ಯ ಸರ್ಕಾರದ ಯೋಜನೆಗಳು ಜನರಿಗೆ ತಲುಪಿದೆಯಾ? ಇಲ್ಲವಾದಲ್ಲಿ ಹೇಗೆ ತಲುಪಿಸುವುದು?
# 5: ಬಿಜೆಪಿ ಮಿಷನ್ 150 ಟಾರ್ಗೆಟ್ ಅನ್ನು ಡೈವರ್ಟ್ ಮಾಡೋದು ಹೇಗೆ?