Bengaluru CityDistrictsKarnatakaLatestLeading NewsMain Post

ಕಾಂಗ್ರೆಸ್‌ನಿಂದ ಡ್ಯಾಮೇಜ್‌ ಕಂಟ್ರೋಲ್‌: ಖಾದರ್‌ಗೆ ಸಿಕ್ತು ದೊಡ್ಡ ಪಟ್ಟ

ಬೆಂಗಳೂರು: ವಿಧಾನಸಭೆಯ ಉಪ ನಾಯಕನ ಸ್ಥಾನಕ್ಕೆ ಕರಾವಳಿ ಭಾಗದ ಪ್ರಭಾವಿ ಶಾಸಕ ಯುಟಿ ಖಾದರ್(UT Khader) ಅವರನ್ನು ಆಯ್ಕೆ ಮಾಡಿ ಎಐಸಿಸಿ(AICC) ಅಧಿಕೃತ ಆದೇಶ ಹೊರಡಿಸಿದೆ.

ಸಿಎಂ ಇಬ್ರಾಹಿಂ ಅವರಿಂದ ಆಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಕಾಂಗ್ರೆಸ್(Congress) ಹೈಕಮಾಂಡ್ ಮುಂದಾಗಿದೆ. ಇಬ್ರಾಹಿಂ ಕಾಂಗ್ರೆಸ್ ಬಿಡುವ ಸುಳಿವು ಕೊಟ್ಟ ಬೆನ್ನಲ್ಲೆ ಅಲ್ಪಸಂಖ್ಯಾತರ ಮನವೊಲಿಸಲು ಮುಂದಾಗಿರುವ ಕಾಂಗ್ರೆಸ್, ವಿಧಾನಸಭೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮಣೆ ಹಾಕಿದೆ. ಇದನ್ನೂ ಓದಿ: ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು: ಸಿದ್ದರಾಮಯ್ಯ

ವಿಧಾನಸಭೆ ಉಪ ನಾಯಕನ ಸ್ಥಾನಕ್ಕೆ ಯುಟಿ ಖಾದರ್ ಆಯ್ಕೆ ಮಾಡುವ ಮೂಲಕ ಅಲ್ಪಸಂಖ್ಯಾತರ ಮನವೊಲಿಕೆಗೆ ಮುಂದಾಗಿದೆ. ಇತ್ತು ತಮ್ಮ ಆಪ್ತನಿಗೆ ಸ್ಥಾನ ಕೊಡಿಸುವುದರಲ್ಲಿ ಸಿದ್ದರಾಮಯ್ಯ(Siddaramaiah) ಮತ್ತೆ ಯಶಸ್ವಿಯಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಭಾವ ಮತ್ತೆ ತೋರಿಸಿದ್ದಾರೆ. ಇದನ್ನೂ ಓದಿ: ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ: ಡಿಕೆಶಿ

ಯು.ಟಿ ಖಾದರ್ ಮಂಗಳೂರು ಕ್ಷೇತ್ರದ ಶಾಸಕರಾಗಿದ್ದು, 2018ರ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿಯಲ್ಲಿ ಗೆದ್ದಿರುವ ಏಕೈಕ ಕಾಂಗ್ರೆಸ್ ಜನ ಪ್ರತಿನಿಧಿಯಾಗಿದ್ದಾರೆ. 2013ರ ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವರಾಗಿದ್ದರು.

ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಖಾದರ್‌ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

Leave a Reply

Your email address will not be published.

Back to top button