ಚೆನ್ನೈ: ಎಐಡಿಎಂಕೆ ನಾಯಕರಾದ ಇ. ಪಳನಿಸ್ವಾಮಿ ಹಾಗೂ ಓ. ಪನ್ನೀರ್ ಸೆಲ್ವಂ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದ್ದು, ಕಚೇರಿಯ ಬಾಗಿಲನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿನ ಚೆನ್ನೈನಲ್ಲಿ ಎಐಎಡಿಎಂಕೆ ಕಚೇರಿ ಎದುರು ಇಂದು ಮುಂಜಾನೆ ಹೈಡ್ರಾಮವೇ ನಡೆದಿದೆ. ಇಪಿಎಸ್, ಒಪಿಎಸ್ ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಜನರಲ್ ಕೌನ್ಸಿಲ್ ಸಭೆಗೂ ಮುನ್ನ ಎಐಡಿಎಂಕೆ ನಾಯಕರಾದ ಇ. ಪಳನಿಸ್ವಾಮಿ ಮತ್ತು ಓ. ಪನ್ನೀರ್ ಸೆಲ್ವಂ ಬೆಂಬಲಿಗರ ನಡುವೆ ಪಕ್ಷದ ಪ್ರಧಾನ ಕಚೇರಿ ಬಳಿ ಘರ್ಷಣೆ ಉಂಟಾಗಿದೆ. ಅಷ್ಟೇ ಅಲ್ಲದೇ ಓ ಪನೀರ್ ಸೆಲ್ವಂ ಬೆಂಬಲಿಗರು ಎಐಎಡಿಎಂಕೆ ಕಚೇರಿಯ ಬಾಗಿಲನ್ನು ಒಡೆದಿದ್ದಾರೆ. ಒಪಿಎಸ್ ಮತ್ತು ಇಪಿಎಸ್ ಬೆಂಬಲಿಗರು ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಸುಟ್ಟು ಹಾಕಿದರು.
Advertisement
#WATCH | O Paneerselvam supporters slap slippers at E Palaniswami’s photo as they protest AIADMK’s General Council meeting in Vanagaram, Chennai pic.twitter.com/1bLqtnT7To
— ANI (@ANI) July 11, 2022
ಪಳನಿಸ್ವಾಮಿ ನೇತೃತ್ವದ ಬಣವು ನಿರ್ಣಾಯಕ ಜನರಲ್ ಕೌನ್ಸಿಲ್ ಸಭೆಯಲ್ಲಿ ಅವರನ್ನು ಸಂಘಟನೆಯ ಏಕೈಕ ನಾಯಕನನ್ನಾಗಿ ಆಯ್ಕೆ ಮಾಡಲು ಸಿದ್ಧರಾಗಿರುವ ಹಿನ್ನೆಲೆಯಲ್ಲಿ ಎಐಡಿಎಂಕೆ ಕಾರ್ಯಕರ್ತರ 2 ಗುಂಪುಗಳು ಪಕ್ಷದ ಪ್ರಧಾನ ಕಚೇರಿಯ ಹೊರಗೆ ಘರ್ಷಣೆ ನಡೆದಿದೆ. 2 ಕಡೆಯ ಕಾರ್ಯಕರ್ತರು ರಸ್ತೆಯಲ್ಲೇ ಹೊಡೆದಾಡಿಕೊಂಡ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾಯಕತ್ವದ ವಿಚಾರಕ್ಕೆ ಈ ಗಲಾಟೆ ನಡೆದಿದ್ದು, ಕಲ್ಲು, ದೊಣ್ಣೆಗಳಿಂದ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ವಿರುದ್ಧ FIR ದಾಖಲು
Advertisement
#WATCH Chennai, TN: O Paneerselvam supporters break open the door of AIADMK office, ahead of party’s general council meeting being led by E Palaniswami pic.twitter.com/A5wNwpHPgk
— ANI (@ANI) July 11, 2022
ಇಂದು ನಡೆಯುವ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಗೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನವೀಕರಿಸಲು ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ರುದ್ದುಗೊಳಿಸಲು ಪ್ರಸ್ತಾಪಿಸುವ ಸಭೆಯನ್ನು ಸ್ಥಗಿತಗೊಳಿಸುವಂತೆ ಓ ಪನ್ನೀರ ಸೆಲ್ವಂ ಮಾಡಿ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇದನ್ನೂ ಓದಿ: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೋತಬಯ ರಾಜಪಕ್ಸೆ