ಚೆನ್ನೈ: ರಾಜಕೀಯ ಚದುರಂಗದಾಟದಲ್ಲಿ ಒಂದೇ ದಿನದಲ್ಲಿ ಅಣ್ಣಾ ಡಿಎಂಕೆ ಪಕ್ಷದ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿ ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣೀಟ್ಟಿದ್ದ ಶಶಿಕಲಾಗೆ ಒಂದರ ಮೇಲೊಂದರಂತೆ ವಿಘ್ನಗಳು ಎದುರಾಗುತ್ತಿವೆ.
ಪ್ರಮಾಣ ವಚನಕ್ಕೆ ಎಲ್ಲಾ ಸಿದ್ಧತೆ ನಡೆಸಿದ್ದ ಶಶಿಕಲಾಗೆ ರಾಜ್ಯಪಾಲರ ಗೈರು ಹಾಜರಿ ಮೊದಲ ಶಾಕ್ ನೀಡಿದರೆ, ಇತ್ತ ಮಂಗಳವಾರ ಬೆಳಗ್ಗೆ ಚೆನ್ನೈನಲ್ಲಿ ಸುದ್ದಿಗೋಷ್ಠಿ ಮಾಡಿದ ಅಣ್ಣಾ ಡಿಎಂಕೆ ಪಕ್ಷದ ಮಾಜಿ ಶಾಸಕ ಪಾಂಡಿಯಾನ್ ಜಯಾ ಸಾವು ಸಹಜ ಸಾವಲ್ಲ, ಅದು ವ್ಯವಸ್ಥಿತ ಕೊಲೆ. ಆ ಕೊಲೆಗೆ ಶಶಿಕಲಾ ನೇರಹೊಣೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Advertisement
ಸೆಪ್ಟೆಂಬರ್ 22ರಂದು ಪೋಯಸ್ ಗಾರ್ಡನ್‍ನ ಜಯಾ ನಿವಾಸದಲ್ಲಿ ಜಗಳ ನಡೆದಿತ್ತು. ಈ ಜಗಳದಲ್ಲಿ ಯಾರೋ ಒಬ್ಬರು ಜಯಲಲಿತಾರನ್ನು ತಳ್ಳಿದ್ದರು ಆಗ ಜಯಾ ಕೆಳಕ್ಕೆ ಉರುಳಿ ಬಿದ್ದಿದ್ದರು. ಬಳಿಕ ಯಾರೂ ಆಸ್ಪತ್ರೆಗೆ ದಾಖಲು ಮಾಡಿರಲಿಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
ಆಸ್ಪತ್ರೆಯಲ್ಲಿನ ಚಿಕಿತ್ಸೆ ಬಗ್ಗೆ ನಿನ್ನೆ ವೈದ್ಯರು ನೀಡಿರುವ ಹೇಳಿಕೆಗಳೆಲ್ಲಾ ಶುದ್ಧ ಸುಳ್ಳು. ಜಯಾ ಶವದ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು ಶಶಿಕಲಾ ಅವರು ನಮಗೆಲ್ಲ ಮೋಸ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೇರಲು ಬಯಸಿದ್ದಾರೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿ ವಾಗ್ದಾಳಿ ನಡೆಸಿದರು.