ಸಖತ್ ರುಚಿ, ಸಿಂಪಲ್ ವಿಧಾನ – ಅಹಮದಾಬಾದಿ ದಾಲ್ ವಡಾ ರೆಸಿಪಿ

Public TV
2 Min Read
Ahmedabadi Dal Vada

ದಾಲ್ ವಡಾ ಅಹಮದಾಬಾದ್‌ನ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಒಂದು. ಇದನ್ನು ಹೆಸರು ಬೇಳೆಯಿಂದ ಮಾಡಲಾಗುತ್ತದೆ. ಈ ಸ್ಟ್ರೀಟ್ ಫುಡ್ ಅತ್ಯಂತ ರುಚಿಕರವಾಗಿದ್ದು ಮಾಡೋದು ಕೂಡಾ ಅಷ್ಟೇ ಸರಳ. ಈರುಳ್ಳಿ ಹಾಗೂ ಹುರಿದ ಮೆಣಸಿನಕಾಯಿಯೊಂದಿಗೆ ಇದನ್ನು ಸವಿಯುವ ಮಜವೇ ಬೇರೆ. ಸರಳ ವಿಧಾನದಲ್ಲಿ ಮಾಡಬಹುದಾದ ದಾಲ್ ವಡಾ (Ahmedabadi Dal Vada) ರೆಸಿಪಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

Ahmedabadi Dal Vada 2

ಬೇಕಾಗುವ ಪದಾರ್ಥಗಳು:
ಹೆಸರು ಬೇಳೆ (ಹಸಿರು) – 1 ಕಪ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ತುರಿದ ಶುಂಠಿ – 1 ಟೀಸ್ಪೂನ್
ಹಿಂಗ್ – ಅರ್ಧ ಟೀಸ್ಪೂನ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಂತೆ
ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು
ಕತ್ತರಿಸಿದ ಈರುಳ್ಳಿ – 1
ಹುರಿದ ಹಸಿರು ಮೆಣಸಿನಕಾಯಿ – 2 ಇದನ್ನೂ ಓದಿ: ಸಖತ್ ರುಚಿಯಾದ ಚೀಸ್ ಕುಲ್ಚಾ ನೀವೂ ಮಾಡಿ

Ahmedabadi Dal Vada 1

ಮಾಡುವ ವಿಧಾನ:
* ಮೊದಲಿಗೆ ಹೆಸರು ಬೇಳೆಯನ್ನು ಒಂದು ಪಾತ್ರೆಗೆ ಹಾಕಿ ಸಾಕಷ್ಟು ನೀರು ಸೇರಿಸಿ 4-5 ಗಂಟೆಗಳ ಕಾಲ ನೆನೆಯಲು ಬಿಡಿ.
* ಹೆಸರು ಬೇಳೆಯನ್ನು ನೆನೆಸಿದ ಬಳಿಕ ಅದರ ಹಸಿರು ಸಿಪ್ಪೆ ಬೇರ್ಪಡುವಂತೆ ನಿಮ್ಮ ಕೈಗಳ ಸಹಾಯದಿಂದ ಉಜ್ಜಿಕೊಳ್ಳಿ. ಸುಮಾರು ಮುಕ್ಕಾಲು ಭಾಗದಷ್ಟು ಸಿಪ್ಪೆ ಬೇರ್ಪಡುವವರೆಗೆ ಉಜ್ಜುತ್ತಿರಿ.
* ಈಗ ಬೇಳೆಯನ್ನು ಮಿಕ್ಸರ್ ಜಾರ್‌ಗೆ ಹಾಕಿ, ಸ್ವಲ್ಪ ನೀರು ಸೇರಿಸಿ ನಯವಾಗಿ ದಪ್ಪಗೆ ರುಬ್ಬಿಕೊಳ್ಳಿ.
* ಈಗ ಒಂದು ಪಾತ್ರೆಗೆ ಹಿಟ್ಟನ್ನು ಹಾಕಿ, ಹಸಿರು ಮೆಣಸಿನಕಾಯಿ, ಶುಂಠಿ, ಹಿಂಗ್, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ನಿಮ್ಮ ಕೈಯಲ್ಲಿ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ಬಿಡುತ್ತಾ ವಡಾಗಳನ್ನು ಮಾಡಿ.
* ವಡಾಗಳು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ, ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಈಗ ಅಹಮದಾಬಾದಿ ದಾಲ್ ವಡಾ ಸಿದ್ಧವಾಗಿದ್ದು, ಹೆಚ್ಚಿದ ಈರುಳ್ಳಿ ಹಾಗೂ ಹುರಿದ ಮೆಣಸಿನಕಾಯಿಯೊಂದಿಗೆ ಬಿಸಿ ಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಸಮ್ಮರ್ ಸ್ಪೆಷಲ್ – ಅನನಾಸು, ತೆಂಗಿನಕಾಯಿಯ ಸ್ಮೂದಿ ಮಾಡಿ

Share This Article