Ahmedabad Tragedy | ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ಮಧ್ಯಂತರ ಪರಿಹಾರ ಘೋಷಿಸಿದ ಏರ್‌ ಇಂಡಿಯಾ

Public TV
2 Min Read
Ahmedabad Air India Plane Crash 4

ಅಹಮದಾಬಾದ್‌: ಇಲ್ಲಿನ ಮೇಘನಿನಗರದ ಬಳಿ ನಡೆದ ವಿಮಾನ ದುರಂತದಲ್ಲಿ (Plane Crash) ಮೃತಪಟ್ಟವರ ಕುಟುಂಬಕ್ಕೆ ಏರ್‌ ಇಂಡಿಯಾ (Air India) ವಿಮಾನಯಾನ ಸಂಸ್ಥೆ ತಲಾ 25 ಲಕ್ಷ ರೂ. ಮಧ್ಯಂತರ ಪರಿಹಾರ ಘೋಷಿಸಿದೆ.

ಈಗಾಗಲೇ ಟಾಟಾ ಸಮೂಹ (Tata Group) ತಲಾ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ಏರ್‌ ಇಂಡಿಯಾ ಸಂಸ್ಥೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು

ಈ ಕುರಿತು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಕುಟುಂಬಗಳೊಂದಿಗೆ ಏರ್‌ ಇಂಡಿಯಾ ಒಟ್ಟಾಗಿ ನಿಲ್ಲುತ್ತದೆ. ಊಹಿಸಲೂ ಸಾಧ್ಯವಾಗದ ಈ ಪರಿಸ್ಥಿತಿಯಲ್ಲಿ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸಂಸ್ಥೆ ಒದಗಿಸಲಿದೆ. ಹೀಗಾಗಿ ಸಂತ್ರಸ್ತ ಕುಟುಂಬಗಳು ತಕ್ಷಣದ ಆರ್ಥಿಕತೆಗಳನ್ನು ಪೂರೈಸಲು ತಲಾ 25 ಲಕ್ಷ ರೂ. ಆರ್ಥಿಕ ನೆರವು ನೀಡಲಿದೆ ಎಂದು ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ದುರಂತಕ್ಕೂ ಮುನ್ನ ಇದೇ ವಿಮಾನ ಪ್ಯಾರಿಸ್‌ನಿಂದ ದೆಹಲಿಗೆ ಹಾರಾಟ ನಡೆಸಿತ್ತು!

Air India Bird Hit Ahmedabad Plane Crash

ಏನಾಗಿತ್ತು?
ಜೂನ್ 12ರಂದು ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಪರಿಣಾಮ ವಿಮಾನ ನಿಲ್ದಾಣದ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದಿತ್ತು. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್, ಒಬ್ಬ ಕೆನಡಾ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳು 12 ಸಿಬ್ಬಂದಿ ಇದ್ದರು. ಇದನ್ನೂ ಓದಿ: Plane Crash | ಇಂಜಿನಿಯರ್‌ ಆಗುವ ಕನಸು ಕಂಡಿದ್ದ ಆಟೋ ಚಾಲಕನ ಮಗಳ ದುರಂತ ಅಂತ್ಯ

Air India CEO Campbell Wilson

ವಿಮಾನದಲ್ಲಿದ್ದ 242 ಜನರಲ್ಲಿ ವಿಮಾನ ಸಿಬ್ಬಂದಿ ಸೇರಿ 241 ಮಂದಿ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ್ಯ ಪಾರಾಗಿದ್ದರು. ಜೊತೆಗೆ ಬಿಜೆ ಮೆಡಿಕಲ್ ಕಾಲೇಜಿನ 5 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇನ್ನೂ ಭಾರೀ ಬೆಂಕಿ ಹೊತ್ತಿಕೊಂಡ ಪರಿಣಾಮ ಅಲ್ಲಿದ್ದ 19 ಸ್ಥಳೀಯರು ಸಾವಿಗೀಡಾಗಿದ್ದರು. ಸದ್ಯ ಸಾವಿನ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು 

Share This Article