Ahmedabad Plane Crash | ಮೊದಲ ಬಾರಿಗೆ ಪತಿ ನೋಡಲು ಹೊರಟಿದ್ದ ನವವಿವಾಹಿತೆ ಸಾವು

Public TV
1 Min Read
Rajasthan Married girl died plane crash

– ಆಶೀರ್ವಾದ ಮಗಳೇ ಎಂದು ಸ್ಟೇಟಸ್ ಹಾಕಿದ್ದ ಖುಷ್ಬೂ ತಂದೆ

ಗಾಂಧೀನಗರ: ವಿವಾಹದ ಬಳಿಕ ಗಂಡನ ಜೊತೆಗಿರಲು ಲಂಡನ್‌ಗೆ ಹೊರಟಿದ್ದ ನವವಿವಾಹಿತೆ ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್‌ಪುರೋಹಿತ್ ಮೃತ ಮಹಿಳೆ.ಇದನ್ನೂ ಓದಿ: ಪತನಗೊಂಡ ವಿಮಾನದಲ್ಲಿ ಮಗಳು, ಮೊಮ್ಮಗ ಇದ್ರು; ಬೆಳಿಗ್ಗೆಯಷ್ಟೇ ಅವಳ ಜೊತೆ ಮಾತಾಡಿದ್ದೆ – ಕಣ್ಣೀರಿಟ್ಟ ತಂದೆ

ಜನವರಿಯಲ್ಲಿ ಖುಷ್ಬೂ ಹಾಗೂ ಮನ್ಫೂಲ್ ಸಿಂಗ್ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಅವರ ಪತಿ ಲಂಡನ್‌ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ಹೀಗಾಗಿ ಖುಷ್ಬೂ ಲಂಡನ್‌ನಲ್ಲಿದ್ದ ಗಂಡನನ್ನು ನೋಡಲು ಹೊರಟಿದ್ದರು.

ಮಗಳನ್ನು ಏರ್‌ಪೋರ್ಟ್‌ಗೆ  ಬಿಟ್ಟು, ಆಕೆಯನ್ನು ಕಳುಹಿಸಿಕೊಟ್ಟಿದ್ದ ತಂದೆ ಮದನ್‌ ಸಿಂಗ್‌ ಅವರು, ಆಶೀರ್ವಾದ ಮಗಳೇ Going to London ಎಂದು ವಾಟ್ಸಪ್ ಸ್ಟೇಟಸ್ ಹಾಕಿ ಕಳುಹಿಸಿಕೊಟ್ಟಿದ್ದರು. ಆದರೆ ದುರದೃಷ್ಟವಶಾತ್ ವಿಮಾನ ದುರಂತದಲ್ಲಿ ಮಗಳು ಸಾವನ್ನಪ್ಪಿದ್ದಾರೆ.

ಏನಿದು ಘಟನೆ?
ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್‌ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಿದೆ. ವಿಮಾನದಲ್ಲಿದ್ದ 242 ಪ್ರಯಾಣಿಕ ಪೈಕಿ 241 ಜನ ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಮೃತ ಪ್ರಯಾಣಿಕರ ಕುಟುಂಬಕ್ಕೆ 1 ಕೋಟಿ ಪರಿಹಾರ: ಟಾಟಾ ಗ್ರೂಪ್‌ ಘೋಷಣೆ

Share This Article