ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

Public TV
1 Min Read
Ahmedabad Air India Plane Crash 1

ಅಹಮದಾಬಾದ್: ಎಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಅಹಮದಾಬಾದ್‌ನ (Ahmedabad) ವಿಮಾನ ನಿಲ್ದಾಣದ ಬಳಿಯ ಮೇಘಾನಿ ಜನವಸತಿ ಪ್ರದೇಶದಲ್ಲಿ ಏರ್ ಇಂಡಿಯಾ (Air India) ವಿಮಾನ ಪತನಗೊಂಡ (Plane Crash) ಪರಿಣಾಮ ವಿಮಾನದಲ್ಲಿದ್ದ 241 ಮಂದಿ ಸೇರಿದಂತೆ ಒಟ್ಟು 274 ಮಂದಿ ಮೃತಪಟ್ಟಿದ್ದಾರೆ. 100 ಕೋಟಿ ಪ್ರಯಾಣಿಕರನ್ನು ಸೇಫ್ ಲ್ಯಾಂಡ್ ಮಾಡಿ ಬ್ರ‍್ಯಾಂಡ್ ಸೃಷ್ಟಿಸಿದ್ದ ಏರ್ ಲೈನ್ಸ್‌ನಲ್ಲಿ ಏನು ತಾಂತ್ರಿಕದೋಷ ಉಂಟಾಯಿತು ಎಂಬ ಕುರಿತು ತನಿಖೆ ಆರಂಭಗೊಂಅಡಿದೆ.

ಸುರಕ್ಷತೆ, ದಕ್ಷತೆ, ಆರಾಮದಾಯಕ ಬೋಯಿಂಗ್ 787 ವಿಮಾನಕ್ಕೆ ಏನಾಯಿತು? ಸೇಫ್ ಲ್ಯಾಂಡ್‌ಗೆ ಹೆಸರುವಾಸಿಯಾಗಿದ್ದ ವಿಮಾನ ಪತನ ಆಗಿದ್ದು ಹೇಗೆ ಎಂಬ ಕುರಿತು ತನಿಖೆ ತೀವ್ರಗೊಂಡಿದೆ. ವಿಮಾನ ಪತನಕ್ಕೆ ಕಾರಣ ಏನು ಎಂಬ ಕುರಿತು ಐದು ತಂಡಗಳು ತನಿಖೆ ಆರಂಭಿಸಿವೆ.

Ahmedabad Planecrash 5

ಎಎಐಬಿ (ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ):
ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎಎಐಬಿ ದೇಶದಲ್ಲಿ ನಡೆಯುವ ವಿಮಾನ ದುರಂತಗಳ ಅಧಿಕೃತ ತನಿಖಾ ಸಂಸ್ಥೆಯಾಗಿದೆ.

ಉನ್ನತ ಮಟ್ಟದ ಸಮಿತಿ:
ಅಪಘಾತಕ್ಕೆ ನಿಖರ ಕಾರಣ ಪತ್ತೆ ಹಚ್ಚಿ, ವಿಮಾನಯಾನ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ತಂಡ ತನಿಖಾ ತಂಡಗಳ ಸಹಯೋಗದೊಂದಿದೆ ಕಾರ್ಯ ನಿರ್ವಹಿಸಲಿದೆ.

Ahmedabad Air India Plane Crash 4

ಅಮೆರಿಕ ಮತ್ತು ಬ್ರಿಟನ್ ತಂಡಗಳು:
ಅಮೆರಿಕ ಮತ್ತು ಬ್ರಿಟನ್ ತಂಡಗಳನ್ನು ಏರ್ ಇಂಡಿಯಾ ವಿಮಾನ ಪತನದ ತನಿಖೆಗೆ ನಿಯೋಜಿಸಲಾಗಿದೆ. ಅಮೆರಿಕ ಮೂಲದ ಬೋಯಿಂಗ್ ತಜ್ಞರು ಈ ತಂಡದಲ್ಲಿ ಇರಲಿದ್ದಾರೆ.

ಎನ್‌ಐಎ:
ಮತ್ತೊಂದಡೆ ರಾಷ್ಟ್ರೀಯ ತನಿಖಾ ದಳ ಕೂಡ ತನಿಖೆಗೆ ಇಳಿದಿದೆ. ವಿದ್ವಾಂಸಕ ಕೃತ್ಯ ದೃಷ್ಟಿಕೋನದಿಂದಲೂ ತನಿಖೆ ಆರಂಭಿಸಿದೆ.

ಗುಜರಾತ್ ಪೊಲೀಸ್:
ಗುಜರಾತ್ ಸರ್ಕಾರ 40 ಸದಸ್ಯರ ವಿಶೇಷ ತಂಡ ರಚಿಸಿದೆ. ಈ ತಂಡವು ನಾಗರಿಕ ವಿಮಾನಯಾನ ಸಚಿವಾಲಯದ ತನಿಖಾ ತಂಡಕ್ಕೆ ನೆರವು ನೀಡಲಿದೆ.

Share This Article