ಅಹಮದಾಬಾದ್: ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಜನ ಬಿರು ಬಿಸಿಲಿನಿಂದ ಪಾರಾಗಲು ನಾನಾ ರೀತಿ ಸರ್ಕಸ್ ಮಾಡುತ್ತಿದ್ದಾರೆ. ಹೀಗಿಯೇ ಅಹಮ್ಮದಾಬಾದ್ ನಲ್ಲಿ ಕಾರು ಮಾಲೀಕರೊಬ್ಬರು ತನ್ನ ಕಾರಿಗೆ ಸೆಗಣಿ ಸಾರುವ ಮೂಲಕ ಕೂಲ್ ಕೂಲ್ ಆಗಿರಲು ಹೊಸ ಐಡಿಯಾ ಹುಡುಕಿದ್ದಾರೆ.
ಈ ವಿಚಾರವನ್ನು ರೂಪೇಶ್ ಗೌರಂಗಾ ದಾಸ್ ಎಂಬವರು ತಮ್ಮ ಫೇಸ್‍ಬುಕ್ ನಲ್ಲಿ ಫೋಟೋ ಹಾಕಿ, ಇದೊಂದು ಒಳ್ಳೆಯ ಉಪಾಯವಾಗಿದ್ದು, ಇಂತಹದ್ದನ್ನು ನಾನು ಎಲ್ಲೂ ಕಂಡಿಲ್ಲ, ಕಾಣಲೂ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಈ ಫೋಟೋವನ್ನು ನಾನು ಅಹಮ್ಮದಾಬಾದ್‍ನಲ್ಲಿ ತೆಗೆದಿದ್ದೇನೆ. ಅಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಹೀಗಾಗಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮಾಲೀಕ ಸೆಗಣಿಯನ್ನು ತನ್ನ ಕಾರಿಗೆ ಸಾರಿದ್ದಾರೆ. ಈ ಮೂಲಕ ಕೂಲ್ ಆಗಿರಲು ಪ್ರಯತ್ನಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಗೋಡೆಗೆ ಸೆಗಣಿ ಪೇಂಟ್ – ವಿಶಿಷ್ಠ ಯೋಜನೆಗೆ ಕೈ ಹಾಕಿದ್ರು ಪುತ್ತೂರಿನ ಶಶಿಶೇಖರ ಭಟ್
ಕೇಂದ್ರ ಮುಂಬೈ ನೊಂದಾಯಿತ ಕಾರು ಇದಾಗಿದ್ದು, ರಾಮ್‍ನಿಕ್ ಲಾಲ್ ಶಾ ಕಾರು ಮಾಲೀಕ ಎಂಬುದಾಗಿ ತಿಳಿದುಬಂದಿದೆ. ರೂಪೇಶ್ ಕಾರು ಫೋಟೋ ಹಾಕುತ್ತಿದ್ದಂತೆಯೇ ಜನ ಹಲವು ಪ್ರಶ್ನೆಗಳು ಮುಂದಿಟ್ಟಿದ್ದಾರೆ. ಅಲ್ಲದೆ ಕೆಲವರು ಟೀಕಿಸಿ ಅಪಹಾಸ್ಯವನ್ನೂ ಮಾಡಿದ್ದಾರೆ.
ಗ್ರಾಮೀಣ ಭಾರತದಲ್ಲಿ ಮನೆಯಂಗಳಕ್ಕೆ ಈಗಲೂ ಸಗಣಿ ಸಾರುತ್ತಿದ್ದಾರೆ. ಈ ಮೂಲಕ ಮನೆ ಹಾಗೂ ಸುತ್ತಲುತ್ತಲು ಸ್ವಚ್ಛಗೊಳಿಸುವ ಪರಿಪಾಠವಿದೆ. ಇದರಿಂದ ಮನೆ ತಂಪಾಗಿರುತ್ತದೆ ಎಂಬುದನ್ನು ಗ್ರಾಮೀಣ ಜನರು ಅನುಭವದಿಂದ ಕಂಡುಕೊಂಡಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ಕಾರು ಮಾಲೀಕ ತಮ್ಮ ಕಾರಿಗೂ ಸಗಣಿ ಮೆತ್ತಿಸಿಕೊಂಡಿದ್ದಾರೆ. ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ