ಹುಬ್ಬಳ್ಳಿಯ (Hubli) ಕಾನೂನು ವಿಶ್ವವಿದ್ಯಾಲಯವು ಜೂನ್ 17 ರಂದು ಯುವಜನೋತ್ಸವವನ್ನು ಆಯೋಜನೆ ಮಾಡಿದೆ. ಈ ಕಾರ್ಯಕ್ರಮಕ್ಕೆ ನಟ, ಹೋರಾಟಗಾರ ಅಹಿಂಸಾ ಚೇತನ್ (Chetan Ahimsa) ಅವರನ್ನು ಅತಿಥಿಯನ್ನಾಗಿ ಆಹ್ವಾನಿಸಿದೆ. ಕರ್ನಾಟಕ ರಾಜ್ಯ ಕಾನೂನು (Law) ವಿಶ್ವವಿದ್ಯಾಲಯದ ಕುಲಪತಿ ಸಿ. ಬಸವರಾಜ ಅವರು ಇದರ ಅಧ್ಯಕ್ಷತೆಯನ್ನು ವಹಿಸಿದ್ದರೆ, ಚೇತನ್ ಮುಖ್ಯ ಅತಿಥಿ. ಇದನ್ನು ಪ್ರಶ್ನಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ABVP) ‘ಗೋ ಬ್ಯಾಕ್ ಚೇತನ್’ ಚಳವಳಿ (Protest) ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.
Advertisement
ಕಾನೂನು ಗೌರವ ಕೊಡದೇ ಇರುವಂತಹ ವ್ಯಕ್ತಿಯನ್ನು ಕಾನೂನು ವಿಶ್ವ ವಿದ್ಯಾಲಯಕ್ಕೆ (University) ಅತಿಥಿಯಾಗಿ ಕರೆಸುವುದು ಸೂಕ್ತವಲ್ಲ. ಕೂಡಲೇ ಅವರನ್ನು ಅತಿಥಿ ಯಾದಿಯಿಂದ ಕೈಬಿಡಬೇಕು. ಬಿಡದೇ ಇದ್ದರೆ ಹೋರಾಟ ಮಾಡುತ್ತೇವೆ ಎಂದು ಕುಲಪತಿಗೆ ಎಬಿವಿಪಿ ಮನವಿ ಸಲ್ಲಿಸಿದೆ. ಒಂದು ವೇಳೆ ಚೇತನ್ ಬಂದರೆ ‘ಗೋ ಬ್ಯಾಕ್’ ಚಳವಳಿಯನ್ನು ಮಾಡುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ
Advertisement
Advertisement
ಈ ಕುರಿತಂತೆ ನಟ ಚೇತನ್ ತಮ್ಮ ಪ್ರತಿಕ್ರಿಯೆಯನ್ನು ಫೇಸ್ ಬುಕ್ ನಲ್ಲಿ ಬರೆದದ್ದು, ಸಮಾನತವಾದಿಗಳಾದ ನಮ್ಮನ್ನು ವಿಚಾರಗಳ ಯುದ್ಧ ಭೂಮಿಯಲ್ಲಿ ಸಂಘ ಪರಿವಾರದವರಿಗೆ ಸೋಲಿಸಲು ಎಂದಿಗೂ ಸಾಧ್ಯವಿಲ್ಲದ ಕಾರಣ, ಅವರು ನಮ್ಮ ಧ್ವನಿಯನ್ನು ಮೌನಗೊಳಿಸಲು ಪ್ರಯತ್ನಿಸುತ್ತಾರೆ’ ಎಂದು ಬರೆದುಕೊಂಡಿದ್ದಾರೆ.
Advertisement
ಎಬಿವಿಪಿ ಮನವಿಯನ್ನು ವಿಶ್ವವಿದ್ಯಾಲಯ ಸ್ವೀಕರಿಸಿದ್ದು, ಚೇತನ್ ಅವರನ್ನು ಕಾರ್ಯಕ್ರಮದಿಂದ ಕೈ ಬಿಡುತ್ತಾರಾ ಅಥವಾ ಚೇತನ್ ಅವರಿಗೆ ಮಣೆ ಹಾಕುತ್ತಾರಾ ಎಂದು ಕಾದ ನೋಡಬೇಕು. ಆದರೆ, ಈವರೆಗೂ ಈ ಕುರಿತಂತೆ ಕುಲಪತಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.