ನವದೆಹಲಿ: ಚಂದ್ರನ (Moon) ಅಂಗಳಕ್ಕೆ ಕಳುಹಿಸಿರುವ ಚಂದ್ರಯಾನ-3 (Chandrayaan-3) ಲ್ಯಾಂಡರ್ ಸೆರೆಹಿಡಿದ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.
ಚಿತ್ರಗಳಲ್ಲಿ ಚಂದ್ರನ ಮೇಲ್ಮೈನ ಕುಳಿಗಳಾದ ಅರಿಸ್ಟಾರ್ಕಸ್, ಎಡಿಂಗ್ಟನ್ ಮತ್ತು ಪೈಥಾಗರಸ್ ಸೆರೆಯಾಗಿದೆ. ಅಲ್ಲದೇ ಚಂದ್ರನ ಮೇಲಿರುವ ಕಪ್ಪು ಬಯಲು ಪ್ರದೇಶ ಓಷಿಯನಸ್ ಪ್ರೋಸೆಲ್ಲಾರಮ್ ಪ್ರದೇಶ ಕೂಡ ಸ್ಪಷ್ಟವಾಗಿ ಕಾಣಿಸುತ್ತದೆ. ಹಂಚಿಕೊಳ್ಳಲಾದ ಫೋಟೋಗಳಲ್ಲಿ ಜುಲೈ 14ರಂದು ತೆಗೆಯಲಾದ ಭೂಮಿಯ ಚಿತ್ರವೂ ಸೇರಿದೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಸಮೀಪಕ್ಕೆ Chandrayaan-3 ಬಾಹ್ಯಾಕಾಶ ನೌಕೆ – ಇಷ್ಟು ದೂರ ಹೋದ್ರೆ ಚಂದ್ರನ ಮೇಲೆ ಲ್ಯಾಂಡಿಂಗ್ ಪಕ್ಕಾ!
Advertisement
Chandrayaan-3 Mission:
???? viewed by
Lander Imager (LI) Camera
on the day of the launch
&
???? imaged by
Lander Horizontal Velocity Camera (LHVC)
a day after the Lunar Orbit Insertion
LI & LHV cameras are developed by SAC & LEOS, respectively https://t.co/tKlKjieQJS… pic.twitter.com/6QISmdsdRS
— ISRO (@isro) August 10, 2023
Advertisement
ಆಗಸ್ಟ್ 5 ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಈಗ ನೌಕೆಯು ಚಂದ್ರನ ಮೇಲೆ ಇಳಿಯಲು ಕೇವಲ ಹದಿನೈದು ದಿನಗಳು ಮಾತ್ರ ಉಳಿದಿವೆ. ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಚಂದ್ರನ ಹತ್ತಿರಕ್ಕೆ ತೆಗೆದುಕೊಂಡು ಹೋಗಲು ಮತ್ತು ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಲ್ಯಾಂಡರ್ (ವಿಕ್ರಮ್) ಅನೇಕ ತಂತ್ರಗಳನ್ನು ನಿರ್ವಹಿಸಲಿದೆ.
Advertisement
Advertisement
ಬುಧವಾರ ಚಂದ್ರನ ಮೇಲ್ಮೈನ 1437 ಕಿಮೀ ವೃತ್ತದ ಕಕ್ಷೆಯಿಂದ 174 ಕಿಮೀಗೆ ಇಳಿಸಲಾಗಿದೆ. ಚಂದ್ರನ ಮೇಲೆ ಲ್ಯಾಂಡ್ ಆಗುವುದಕ್ಕೆ ಇನ್ನು 1437 ಕಿ.ಮೀ. ಅಷ್ಟೇ ಕ್ರಮಿಸಬೇಕಿದೆ. ಮುಂದಿನ ಕಾರ್ಯಾಚರಣೆಯನ್ನು ಆಗಸ್ಟ್ 14 ರಂದು 11:30 ಮತ್ತು 12:30 ಗಂಟೆಗಳ ನಡುವೆ ನಿಗದಿಪಡಿಸಲಾಗಿದೆ. ಇದನ್ನೂ ಓದಿ: Chandrayaan-3: ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ
Web Stories