ಅಯೋಧ್ಯೆ (ರಾಮಮಂದಿರ): ಅಯೋಧ್ಯೆ ರಾಮಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆ ವಿಧಿವಿಧಾನಗಳು ಆರಂಭವಾಗಿದ್ದು, ಎರಡನೇ ದಿನಕ್ಕೆ ಕಾಲಿಟ್ಟಿದೆ. ಭಗವಾನ್ ರಾಮಲಲ್ಲಾ (Ram Lalla) ವಿಗ್ರಹವನ್ನು ಇಂದು (ಬುಧವಾರ) ರಾಮಮಂದಿರಕ್ಕೆ ತರಲಾಗುವುದು. ನಂತರ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಲಾಗುವುದು.
ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಲ್ಲಿ ಕೆತ್ತಿದ ರಾಮಲಲ್ಲಾ ಅಥವಾ ಶಿಶು ರಾಮನ ವಿಗ್ರಹವನ್ನು ಹೊತ್ತ ಮೆರವಣಿಗೆ ಇಂದು ‘ಪರಿಸರ ಪ್ರವೇಶ’ ಅಥವಾ ‘ಪ್ರವೇಶ’ಕ್ಕಾಗಿ ದೇವಸ್ಥಾನವನ್ನು ತಲುಪಲಿದೆ. ಭಕ್ತರು ಪವಿತ್ರ ಸರಯೂ ನದಿಯಿಂದ ನೀರನ್ನು ಮಡಕೆಗಳಲ್ಲಿ ಅಥವಾ ‘ಕಲಶ’ದಲ್ಲಿ ದೇವಸ್ಥಾನಕ್ಕೆ ಒಯ್ಯುತ್ತಾರೆ. ಇದನ್ನೂ ಓದಿ: ಶ್ರೀರಾಮನ ಕಟೌಟ್ಗೆ ಬ್ಲೇಡ್ನಿಂದ ಹಾನಿ – ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
Advertisement
Advertisement
ರಾಮಲಲ್ಲಾ ವಿಗ್ರಹ ಮೆರವಣಿಗೆ
ಭವ್ಯ ರಾಮಮಂದಿರದ ಸಂಕೀರ್ಣಕ್ಕೆ ವಿಗ್ರಹವನ್ನು ಕೊಂಡೊಯ್ಯಲು ನಿನ್ನೆ (ಮಂಗಳವಾರ) ರಾತ್ರಿಯಿಂದಲೇ ಸಿದ್ಧತೆ ನಡೆದಿದೆ. 150-200 ಕೆಜಿ ತೂಕದ ವಿಗ್ರಹವನ್ನು ಕ್ರೇನ್ ಸಹಾಯದಿಂದ ಮೆರವಣಿಗೆಗಾಗಿ ತಡರಾತ್ರಿ ಹೂವಿನಿಂದ ಅಲಂಕರಿಸಿದ ಟ್ರಕ್ ಮೇಲೆ ಇರಿಸಲಾಯಿತು.
Advertisement
ಇಂದು ದೇವಸ್ಥಾನ ಆವರಣ ಪ್ರವೇಶ
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ಮಧ್ಯಾಹ್ನ 1:20 ರ ಸುಮಾರಿಗೆ ವಿಗ್ರಹವು ದೇವಾಲಯದ ಆವರಣವನ್ನು ಪ್ರವೇಶಿಸುವ ಮೊದಲು ಹಲವಾರು ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ರಾಮಲಲ್ಲಾನ ವಿಗ್ರಹವನ್ನು ದೇವಾಲಯದ ಸಂಕೀರ್ಣಕ್ಕೆ ತರುವ ಮೊದಲು ಜಲ ಯಾತ್ರೆ, ತೀರ್ಥಪೂಜೆ, ಬ್ರಾಹ್ಮಣ-ಬಟುಕ್-ಕುಮಾರಿ-ಸುವಾಸಿನಿ ಪೂಜೆ, ವರ್ಧಿನಿ ಪೂಜೆ, ಕಲಾಯಾತ್ರೆ ನಡೆಸಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಪ್ರತಿದಿನ ಒಂದೊಂದು ಕೆಜಿ ಮೀಸಲು – ಶ್ರೀರಾಮನ ನೈವೇದ್ಯಕ್ಕೆ 1,265 KG ತೂಕದ ಲಡ್ಡು ಅರ್ಪಿಸಿದ ರಾಮಭಕ್ತ
Advertisement
ಮಧ್ಯಾಹ್ನ 1:20 ರ ನಂತರ ಜಲಯಾತ್ರೆ, ತೀರ್ಥ ಪೂಜೆ, ಬ್ರಾಹ್ಮಣ-ಬಟುಕ್-ಕುಮಾರಿ-ಸುವಾಸಿನಿ ಪೂಜೆ, ವರ್ಧಿನಿ ಪೂಜೆ, ಕಲಶಯಾತ್ರೆ ನಂತರ ಆವರಣದಲ್ಲಿ ಭಗವಾನ್ ಶ್ರೀರಾಮಲಲ್ಲಾನ ವಿಗ್ರಹದ ಪ್ರದಕ್ಷಿಣೆ ನಡೆಯಲಿದೆ.
ರಾಮಮಂದಿರ ಪ್ರದಕ್ಷಿಣೆ
ವಿಗ್ರಹ ಹೊತ್ತು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಲಾಗುವುದು. ನಂತರ ವಿಗ್ರಹವನ್ನು ಒಳಗೆ ಇಡಲಾಗುತ್ತದೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಗರ್ಭಗುಡಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಆರು ದಿನಗಳ ಕಾಲ ನಡೆಯುವ ಧಾರ್ಮಿಕ ವಿಧಿವಿಧಾನಗಳು ಜನವರಿ 22 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಇತರ ಗಣ್ಯರು ಭಾಗವಹಿಸುವ ಮಹಾ ಸಮರ್ಪಣೆ ಅಥವಾ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಮುಕ್ತಾಯಗೊಳ್ಳುತ್ತವೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ- ಹುಬ್ಬಳ್ಳಿಯ ಕರಸೇವಕರ ಸಂಭ್ರಮ
ಜನವರಿ 23 ರಿಂದ ರಾಮಜನ್ಮಭೂಮಿ ದೇಗುಲ ಸಾರ್ವಜನಿಕರಿಗೆ ದರ್ಶನಕ್ಕೆ ಮುಕ್ತವಾಗಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.