ಮುಂಬೈ: ನಟ ಅಹಾನ್ ಶೆಟ್ಟಿ ತನ್ನ ತಂದೆ ಸುನೀಲ್ ಶೆಟ್ಟಿ ಅವರ ‘ಧಡ್ಕನ್’ ಮತ್ತು ‘ಬಾರ್ಡರ್’ ಚಿತ್ರಗಳ ರೀಮೇಕ್‍ನಲ್ಲಿ ನಟಿಸಲು ಬಯಸುವುದಾಗಿ ಹೇಳಿದ್ದಾರೆ.
2000ರಲ್ಲಿ ತೆರೆ ಕಂಡಿದ್ದ ಧಡ್ಕನ್ ಚಿತ್ರವು ತುಂಬಾ ಜನಪ್ರಿಯತೆ ಪಡೆದಿತ್ತು. ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಅಕ್ಷಯ್ ಕುಮಾರ್ ಕೂಡ ನಟಿಸಿದ್ದಾರೆ. ‘ವೂದರಿಂಗ್ ಹೈಟ್ಸ್’ ಕಾದಂಬರಿ ಆಧರಿಸಿ ಸಿನಿಮಾ ನಿರ್ದೇಶಿಸಲಾಗಿತ್ತು.
View this post on Instagram
ಬಾರ್ಡರ್, 1997 ರಲ್ಲಿ ಬಿಡುಗಡೆಯಾದ ಒಂದು ಮೆಗಾ ಹಿಟ್ ಚಿತ್ರವಾಗಿದೆ. 1971 ರ ಭಾರತ-ಪಾಕಿಸ್ತಾನ ಲೋಂಗೆವಾಲಾ ಕದನದ ಸಮಯದಲ್ಲಿ ನಡೆದ ನಿಜ ಜೀವನಾಧರಿತ ಸನ್ನಿವೇಶನಗಳನ್ನು ಸಿನಿಮಾದಲ್ಲಿ ಬಿಂಬಿಸಲಾಗಿದೆ. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್
ತಂದೆಯ ಕೆಲ ಹಿಟ್ ಚಲನಚಿತ್ರಗಳ ಕುರಿತು ಐಎಎನ್‍ಎಸ್‍ನೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅಹಾನ್, ನಾನು ನಮ್ಮ ದೇಶದ ಗಡಿಯನ್ನು ಅತಿಯಾಗಿ ಪ್ರೀತಿಸುತ್ತೇನೆ. ಹೀಗಾಗಿ ಬಾರ್ಡರ್ ಚಿತ್ರದ ರಿಮೇಕ್ ಮಾಡಲು ನಾನು ಭಾವಿಸುತ್ತೇನೆ. ನನ್ನ ತಂದೆಯ ಮತ್ತೊಂದು ರೊಮ್ಯಾಂಟಿಕ್ ಲವ್‍ಸ್ಟೋರಿ ಚಿತ್ರವಾದ ಧಡ್ಕನ್ ಚಿತ್ರದಲ್ಲಿಯೂ ನಾನು ನಟಿಸಲು ಆಸಕ್ತಿದಾಯಕನಾಗಿದ್ದೇನೆ ಎಂದರು.
View this post on Instagram
ತಮ್ಮ ಮುಂದಿನ ಚಿತ್ರಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾವು ಯೋಜಿಸಿರುವ ಕೆಲವು ಆಸಕ್ತಿದಾಯಕ ವಿಷಯಗಳು ಒಂದು ತಿಂಗಳೊಳಗೆ ಘೋಷಣೆಯಾಗಬೇಕಾಗಿದೆ. ಅದನ್ನು ಹೊರತುಪಡಿಸಿ ನಾನು ಸಾಜಿದ್ ನಾಡಿಯಾಡ್ವಾಲಾ ಅವರೊಂದಿಗೆ ನಾಲ್ಕು ಚಲನಚಿತ್ರಗಳ ಒಪ್ಪಂದವನ್ನು ಮಾಡಿಕೊಂಡಿದ್ದೇನೆ. ಆದ್ದರಿಂದ ನಾನು ಮತ್ತೆ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ
ಅಹಾನ್ ಶೆಟ್ಟಿಯು ಕಳೆದ ವರ್ಷ ತೆಲುಗಿನ ಆರ್‍ಎಕ್ಸ್ 100 ಚಿತ್ರದ ರಿಮೇಕ್ ಆದ ತಡಾಪ್ ಚಿತ್ರದಲ್ಲಿ ನಾಯಕ ನಟನಾಗಿ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾಡ್ವಾಲಾ ಅವರು ನಿರ್ದೇಶಿಸಿದ್ದಾರೆ.