ಮುಂಬೈ ಬೆಡಗಿ ಆರತಿ ಛಾಬ್ರಿಯಾ (Aarti Chabria) ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಬಂಪ್ ವಿಡಿಯೋ ಶೇರ್ ಮಾಡಿ ನಟಿ ಪ್ರೆಗ್ನೆನ್ಸಿ ಸುದ್ದಿ ತಿಳಿಸಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡಗೆ ದೃಷ್ಟಿ ತೆಗೆದ ಮೃಣಾಲ್ ಠಾಕೂರ್
View this post on Instagram
ಬೇಬಿ ಬಂಪ್ (Baby Bump) ನಟಿ ವಿಶೇಷ ವಿಡಿಯೋ ಶೇರ್ ಮಾಡಿದ್ದಾರೆ. ಮೊದಲ ಮಗುವಿನ ಆಗಮನಕ್ಕಾಗಿ ಎದುರು ನೋಡುತ್ತಿರುವ ವಿಚಾರ ತಿಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.
View this post on Instagram
ಬಾಲಿವುಡ್ ನಟಿ ಆರತಿ ಛಾಬ್ರಿಯಾ (Aarti Chabria) ಅವರು 2019ರಲ್ಲಿ ಆಸ್ಟ್ರೇಲಿಯಾ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿಶಾರದ್ ಬೀಡಸ್ಸಿ ಜೊತೆ ಮದುವೆಯಾಗಿದ್ದಾರೆ. ಈ ಜೋಡಿ 5 ವರ್ಷಗಳ ನಂತರ ಸಿಹಿಸುದ್ದಿ ಕೊಟ್ಟಿದ್ದಾರೆ.
ಅಂದಹಾಗೆ ನಟಿ ಆರತಿ, ಕನ್ನಡದ ಅಹಂ ಪ್ರೇಮಾಸ್ಮಿ (Aham Premasmi), ಸಂತ (Santha), ರಜನಿ (Rajani) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.