ಕಲಬುರಗಿ: ಇಲ್ಲಿನ ಎಪಿಎಂಸಿ (APMC) ಆವರಣದಲ್ಲಿ ಕೃಷಿ ಚಟುವಟಿಕೆ ನಡೆಸಲು ಮಳಿಗೆ ಪಡೆದು, ಕೃಷಿಯೇತರ ಚಟುವಟಿಕೆ ನಡೆಸುತ್ತಿರುವ ಅಂಗಡಿಗಳನ್ನ ತೆರವು ಮಾಡುವಂತೆ ಹೋರಾಟಗಾರರು ಕಳೆದ 69 ದಿನಗಳಿಂದ ಹೋರಾಟ ನಡೆಸ್ತಿದ್ದರು. ಎಪಿಎಂಸಿ ಮಾರುಕಟ್ಟೆಯಲ್ಲಿನ ಕಮರ್ಷಿಯಲ್ ಶಾಪ್ ದರ್ಬಾರ್ ಬಗ್ಗೆ `ಪಬ್ಲಿಕ್ ಟಿವಿ’ ಕೂಡ ವರದಿ ಬಿತ್ತರ ಮಾಡಿ ಮಾಡಿತ್ತು. ಇದೀಗ ಪಬ್ಲಿಕ್ ಟಿವಿ ವರದಿ ಮತ್ತು ಹೋರಾಟದ ಪ್ರತಿಫಲವಾಗಿ ಎಪಿಎಂಸಿಯಲ್ಲಿನ 103 ಅಂಗಡಿಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಕಲಬುರಗಿ ಎಪಿಎಂಸಿ ಮಾರುಕಟ್ಟೆಯಲ್ಲಿನ ಕಮರ್ಷಿಯಲ್ ಶಾಪ್‌ಗಳನ್ನ (Commercial Shops) ತೆರವು ಮಾಡುವಂತೆ ಕಳೆದ 69 ದಿನಗಳಿಂದ ಹೋರಾಟ ನಡೆದಿತ್ತು. ಕಮರ್ಷಿಯಲ್ ಶಾಪ್ ತೆರವು ಮಾಡಿ ಎಪಿಎಂಸಿ ಮಾರುಕಟ್ಟೆ ರೈತರಿಗೆ ಅನುಕೂಲ ಆಗುವಂತಹ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಪಬ್ಲಿಕ್ ಟಿವಿ ನಿರಂತರ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಎಪಿಎಂಸಿ ಅಧಿಕಾರಿಗಳು 103 ಕಮರ್ಷಿಯಲ್ ಶಾಪ್ ತೆರವು ಮಾಡಲು ಆಗಸ್ಟ್ 18ರ ವರೆಗೆ ಡೆಡ್‌ಲೈನ್ ನೀಡಿತ್ತು. ಇದನ್ನೂ ಓದಿ: ಕೋಲಾರದಲ್ಲಿ ಕೊಲೆ, ತಮಿಳುನಾಡಿನಲ್ಲಿ ಶವ ಪತ್ತೆ – 6 ವರ್ಷಗಳ ಬಳಿಕ ಪ್ರಕರಣ ಭೇದಿಸಿದ ಶಿಡ್ಲಘಟ್ಟ ಪೊಲೀಸ್
ಇದರಿಂದ 25 ಕಮರ್ಷಿಯಲ್ ಅಂಗಡಿ ಮಾಲೀಕರು ಈಗಾಗಲೇ ಅಂಗಡಿ ತೆರವು ಮಾಡಿಕೊಂಡು ಹೋಗಿದ್ದಾರೆ. ಇನ್ನು, 13 ಜನ ಅಂಗಡಿ ಮಾಲೀಕರು ನ್ಯಾಯಾಲಯದಿಂದ ಸ್ಟೇ ತಂದಿದ್ದು, ಹೀಗಾಗಿ ಉಳಿದ ಕಮರ್ಷಿಯಲ್ ಅಂಗಡಿಗಳಿಗೆ ಎಪಿಎಂಸಿ ಅಧಿಕಾರಿಗಳು ಬೀಗ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಕಳ್ಳತನ ಕಂಡ ಹೋಟೆಲ್ ಮಾಲೀಕನ ಹತ್ಯೆ ಕೇಸ್; ಪ್ರಮುಖ ಆರೋಪಿ ಕಾಲಿಗೆ ಗುಂಡೇಟು
ಕಲಬುರಗಿ (Kalaburagi) ಎಪಿಎಂಸಿಯಲ್ಲಿ ಒಟ್ಟು 465 ಮಳಿಗೆಗಳಿವೆ. ಎಪಿಎಂಸಿ ಅಂದಮೇಲೆ ಇಲ್ಲಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಂಗಡಿಗಳು ಮಾತ್ರ ಕಾರ್ಯನಿರ್ವಹಿಸಬೇಕು. ಆದರೆ ಇಲ್ಲಿ ಮಾತ್ರ 300ಕ್ಕೂ ಅಧಿಕ ಅನಧಿಕೃತ ಅಂದರೆ ಎಲೆಕ್ಟ್ರಿಕಲ್ ಶಾಪ್, ಟೈಯರ್ ಶಾಪ್, ಮ್ಯಾಚ್ ಬಾಕ್ಸ್ ಶಾಪ್, ಹೊಟೇಲ್ ಸೇರಿದಂತೆ ಇನ್ನಿತರ ಅಂಗಡಿಗಳು ಚಟುವಟಿಕೆ ನಡೆಸುತ್ತಿವೆ. ಇದನ್ನೂ ಓದಿ: ಸಮೀರ್‌ಗೆ ತಪ್ಪದ ಸಂಕಷ್ಟ – ಕಡೂರು ಠಾಣೆಯಲ್ಲಿ ಮತ್ತೊಂದು ದೂರು!
ಇದರಿಂದ ಕೃಷಿ ಚಟುವಟಿಕೆ ವ್ಯವಹಾರಕ್ಕೆ ದೊಡ್ಡಮಟ್ಟದ ಹೊಡೆತ ಬೀಳುತ್ತಿತ್ತು. ಹೀಗಾಗಿ ಎಪಿಎಂಸಿಯಲ್ಲಿನ ಕಮರ್ಷಿಯಲ್ ಅಂಗಡಿಗಳಿಗೆ ಅಧಿಕಾರಿಗಳು ಬೀಗ ಜಡಿಯುವ ಮಾಹಿತಿ ಬರುತ್ತಿದ್ದಂತೆ. ಅಂಗಡಿ ಮಾಲೀಕರು ಸ್ಥಳಕ್ಕೆ ಬಂದು ಅಂಗಡಿ ತೆರವಿಗೆ ಕಾಲಾವಕಾಶ ಕೋರಿದ್ದರು. ಕಲಬುರಗಿ ಚೇಂಬರ್ ಆಫ್ ಕಾಮಸ್9 ಮನವಿ ಬೆನ್ನಲ್ಲೇ ಎಪಿಎಂಸಿ ಇಲಾಖೆ ಅಧಿಕಾರಿಗಳು ಕೆಲ ದಿನಗಳ ಕಾಲ ಕಾಲಾವಕಾಶ ಕೊಟ್ಟಿದ್ದಾರೆ.
ಪದೇ ಪದೇ ಎಪಿಎಂಸಿ ಅಧಿಕಾರಿಗಳು ಕಮರ್ಷಿಯಲ್ ಅಂಗಡಿಗೆ ಸಮಯ ಕೊಡುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಸಚಿವ ಶಿವಾನಂದ್ ಪಾಟೀಲ್ ಎಪಿಎಂಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ.