-ಕುದ್ದು ನೋವು ತೋಡುಗೊಂಡ ಬಿಜೆಪಿ ಎಮ್.ಎಲ್.ಸಿ
ಕಾರವಾರ: ಮಳೆಯ ಅಬ್ಬರದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ಅಂಕೋಲ ತಾಲೂಕಿನ ರೈತರ ಜಮೀನುಗಳು ಕೊಚ್ಚಿಹೋಗುವ ಜೊತೆಗೆ ಹಲವು ಊರುಗಳ ಸಂಪರ್ಕ ಸಹ ಇಲ್ಲವಾಗಿದೆ. ಈ ಗ್ರಾಮಗಳ ಸುತ್ತಲಿನ ಹಳ್ಳಿಯ ಜನರು ಹಾಗೂ ಅವರ ಸಮಸ್ಯೆಗಳನ್ನು ಬೋಟ್‍ನಲ್ಲಿ ನದಿ ದಾಟುವ ಮೂಲಕ ರೈತರ ಮನೆಯಂಗಳದಲ್ಲಿ ‘ಅನ್ನದಂಗಳದ ಮಾತುಕತೆ ಎಂಬ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿ ಸಮಸ್ಯೆ ಆಲಿಸಿದರು.
Advertisement
ಅಂಕೋಲ ತಾಲೂಕಿನ ಹಾಗೂ ಯಲ್ಲಾಪುರ ಗಡಿಯನ್ನು ಹಂಚಿಕೊಂಡ ಡೊಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಂತ ಕುಗ್ರಾಮ ಕೈಗಡಿಯ ಕೃಷಿಕರಾದ ರಾಮಚಂದ್ರ ಹೆಗಡೆ, ಸುಬ್ರಾಯ ಹೆಗಡೆ ಅವರ ಮನೆಯಂಗಳದಲ್ಲಿ ಇಂದು ಅನ್ನದಂಗಳದ ಮಾತುಕತೆ ಸಂಭ್ರಮ ಮನೆಮಾಡಿತ್ತು. ಗ್ರಾಮದ ಸುತ್ತಲಿನ ಹಳ್ಳಿಯ ಜನರು ಹಾಗೂ ಕುದ್ದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ದುಮ್ಮಿಕ್ಕುವ ನದಿಯಲ್ಲಿ ದೋಣಿಯ ಮೂಲಕ ಸಂಪರ್ಕ ಕಡಿತವಾಗಿರುವ ಹಳ್ಳಿಯ ಜನರೊಂದಿಗೆ ಬೆರೆತರು. ಇವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸಾತ್ ನೀಡಿದರು.
Advertisement
Advertisement
ಶೋಭಾ ಕರಂದ್ಲಾಜೆ ಕಾರ್ಯಕ್ರಮವನ್ನು ಉದ್ಘಾಟಿಸುವ ಬದಲು ಹಿಂದಿನಿಂದಲೂ ಸಾವಯವ ಕೃಷಿ ಮಾಡಿಕೊಂಡು ಬಂದ ಕೃಷಿ ದಂಪತಿಗಳಾದ ಬಾಬು ಕಂಚಾ ಸಿದ್ದಿ ಕೈಗಡಿ ಹಾಗೂ ಶ್ರೀಮತಿ ಲಕ್ಷ್ಮೀ ಬಾಬು ಸಿದ್ದಿ ರವರ ಹಸ್ತದಿಂದಲೇ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾರ್ಯಕ್ರಮಕ್ಕೆ ಉತ್ತರ ಕನ್ನಡ ಜಿಲ್ಲೆಯವರಲ್ಲದೇ ಪಕ್ಕದ ಶಿವಮೊಗ್ಗ ,ಹಾವೇರಿ, ಗದಗ, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ರೈತರು ಭಾಗವಹಿಸಿದ್ದರು. ಇದನ್ನೂ ಓದಿ: ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಶಂಕರಾಚಾರ್ಯರ ಹೆಸರಿಡುವುದು ಸೂಕ್ತ: ಶೋಭಾ
Advertisement
ಮನೆಯಂಗಳದಲ್ಲಿ ರೈತರಿಂದ ಸಚಿವರಿಗೆ ಪ್ರಶ್ನೆಗಳ ಸುರಿಮಳೆ:
ರಾಮಚಂದ್ರ ಹೆಗಡೆ, ಸುಬ್ರಾಯ ಹೆಗಡೆ ಅವರ ಮನೆಯಂಗಳದ ಚಿಕ್ಕ ವೇದಿಕೆಯಲ್ಲಿ ನೂರಾರು ಜನರು ಕೇಂದ್ರ ಸಚಿವರಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕು. ಗೋ ಆಧಾರಿತ ಉತ್ಪನ್ನಗಳಿಗೆ ಹಾಗೂ ಪಶು ಆಹಾರಗಳಿಗೆ ಜಿ.ಎಸ್.ಟಿ ಇಂದ ವಿನಾಯಿತಿ ನೀಡಿ. ಎಲ್ಲಾ ಮೂಲದ ಸಾವಯವ ಗೊಬ್ಬರಗಳಿಗೆ ಜಿ.ಎಸ್.ಟಿ ಇಂದ ವಿನಾಯಿತಿ ನೀಡಬೇಕು. ರೈತರಿಂದಲೇ ಉತ್ಪಾದಿತ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ಪಾದನಾ ಜಿ.ಎಸ್.ಟಿ ಇಂದ ವಿನಾಯಿತಿ ಕೊಡಬೇಕು. ಶ್ರೀಲಂಕಾ ದೇಶವು ರಾಸಾಯನಿಕ ಗೊಬ್ಬರ ಹಾಗೂ ವಿಷಗಳಿಗೆ ಪೂರ್ಣ ನಿಷೇಧ ಹೇರಿ ಸಾವಯವ ದೇಶ ಎಂದು ಘೋಷಿಸಿಕೊಂಡಿದೆ. ಈ ಕುರಿತು ಅಧ್ಯಯನಕ್ಕಾಗಿ ಶ್ರೀಲಂಕಾ ದೇಶಕ್ಕೆ ರೈತರನ್ನೊಳಗೊಂಡ ವಿಶೇಷ ತಂಡವನ್ನು ಅಧ್ಯಯನಕ್ಕೆ ಪ್ರವಾಸವನ್ನು ಏರ್ಪಡಿಸಬೇಕು. ಕೃಷಿಕರ ತೋಟದಲ್ಲಿ ಬಸಿಕಾಲುವೆ ಮತ್ತು ಮಣ್ಣಿನ ಏರಿ ನಿರ್ಮಾಣಕ್ಕೆ ಎನ್.ಆರ್.ಇ.ಜಿ(ನರೇಗಾ)ಯೋಜನೆಯಲ್ಲಿ ದೊಡ್ಡ ಹಿಡುವಳಿದಾರರಿಗೆ ಕನಿಷ್ಟ ಎರಡು ಹೆಕ್ಟೇರ್ ಪ್ರದೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ವಿಮೆ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಯಮಗಳನ್ನು ಲಿಖಿತಗೊಳಿಸುವಾಗ ಕಂಪ್ಯೂಟರಿನ ಅಕ್ಷರದ ಗಾತ್ರ ಹದಿನಾರಕ್ಕಿಂತ ಹೆಚ್ಚಿರುವಂತೆ ಮತ್ತು ಕೃಷಿಕರಿಗೆ/ಗ್ರಾಹಕರಿಗೆ ಮಾತೃಭಾಷೆಯಲ್ಲಿಯೇ (ಕನ್ನಡ) ನಿಯಮಾವಳಿಗಳನ್ನು ಓದುವಂತೆ(ರೂಲ್ಸ್ ಎಂಡ್ ರೆಗುಲೇಶನ್ಸ್) ನಮೂದಿಸುವಂತಾಗಬೇಕು, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು ಹವಾಮಾನ ಆಧಾರಿತವಾಗಿದ್ದು,ಈಗಿರುವ ಹೋಬಳಿ ಮಟ್ಟದ ವರದಿ ಆಧಾರದ ಬದಲು ಗ್ರಾಮವಾರು ಮಳೆ, ಬಿಸಿಲು ಮಾಪನ ಮಾಡಿ ಎಂದು ಮನವಿ ಸಲ್ಲಿಸಿದರು.
ಕೇವಲ ಮಳೆ ಹಾಗೂ ಬಿಸಿಲಲ್ಲದೇ ಬೇರೆಲ್ಲೋ ಸುರಿದ ಮಳೆಯಿಂದಾಗಿ ಬರುವ ಪ್ರವಾಹದಿಂದ ಆಗುವ ಹಾನಿಗೂ ಸಹಾ ವಿಮೆ ಜಾರಿಯಾಗುವಂತೆ ತಿದ್ದುಪಡಿ ಮಾಡಬೇಕು, ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿಗಳನ್ನು ಎಫ್.ಪಿ.ಓ (ರೈತ ಉತ್ಪಾದಕ ಸಂಸ್ಥೆ) ಎಂದು ಪರಿಗಣಿಸಿ. ಎಫ್ ಪಿ. ಓ ಮಾರ್ಗಸೂಚಿಯಲ್ಲಿ ಮಾರ್ಪಾಡುಗಳನ್ನು ಮಾಡಬೇಕು.ಸರ್ಕಾರದ ಅನುದಾನವು ಶೇಕಡಾ 60:40ರ ಅನುಪಾತದಲ್ಲಿ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಾಗಿರುತ್ತದೆ. ಅದೇ ರೀತಿ ಎಫ್.ಪಿ.ಓ ಇಂದ 40% ಭಾಗ ಹೂಡಿಕೆಯ ಜೊತೆಗೆ ಕೇಂದ್ರದ 60% ಭಾಗದ ಹೂಡಿಕೆಯ ವಿಧಾನವನ್ನು ಅನುಸರಿಸಬೇಕ ಎಂದು ಆಗ್ರಹಿಸಿದರು. ಇದನ್ನೂ ಓದಿ: ಬೋರ್ವೆಲ್ಗೆ ಬಿದ್ದು ಮಗು ಸಾವು ಪ್ರಕರಣಕ್ಕೆ ಟ್ವಿಸ್ಟ್- ತಂದೆಯಿಂದಲೇ ಕಂದಮ್ಮನ ಕೊಲೆ!
ನೋವು ತೋಡಿಕೊಂಡ ಬಿಜೆಪಿ ಎಮ್.ಎಲ್.ಸಿ:
ಬುಡಕಟ್ಟು ಜನಾಂಗದವರು ಅರಣ್ಯಭೂಮಿ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. 1970ರ ಸುಮಾರಿಗೆ ನಮ್ಮ ತಂದೆ ಏಳು ಎಕರೆ ಜಮೀನು ಹೊಂದಿದ್ದರು. ಈಗ ಅರಣ್ಯ ಕಾಯ್ದೆಯಿಂದಾಗಿ ಕೇವಲ ಐದು ಗುಂಟೆಯಲ್ಲಿ ಜೀವನ ನಡೆಸುತ್ತಿದ್ದೇವೆ’ ಎಂದು ತಮ್ಮ ಹಾಗೂ ತಮ್ಮವರ ಸಮಸ್ಯೆ ಬಗ್ಗೆ ಸಚಿವರಿಗೆ ತಿಳಿಸಿದರು. ಅರಣ್ಯ ಕಾನೂನಿನಿಂದಾಗಿ ಅರಣ್ಯವನ್ನೇ ನಂಬಿ ತಲಾ ತಲಾಂತರದಿಂದ ಕಾಡಿನಲ್ಲಿ ಜೀವನ ಸಾಗಿಸುತ್ತಿರುವವರಿಗೆ ಹಕ್ಕುಪತ್ರ ನೀಡಬೇಕು ಎಂದು ಸಚಿವರಿವೆ ಕೇಳಿಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಹೆಬ್ಬಾರ್, ಜಿಲ್ಲೆಯಲ್ಲಿ ಅರಣ್ಯಭೂಮಿ ಹಕ್ಕುಪತ್ರಕ್ಕೆ 93,855 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹಕ್ಕುಪತ್ರ ನೀಡಲು ಮೂರು ತಲೆಮಾರಿನ ದಾಖಲೆ ಸಲ್ಲಿಸಬೇಕು ಎಂದು ಅರಣ್ಯ ಹಕ್ಕು ಕಾಯ್ದೆ 2005ರಲ್ಲಿ ತಿಳಿಸಲಾಗಿದೆ. ಇದರ ಪ್ರಕಾರ 75 ವರ್ಷಗಳ ದಾಖಲೆ ನೀಡುವುದು ಸಾಧ್ಯವಾಗದೇ ಸಮಸ್ಯೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲು ದೆಹಲಿಗೆ ನಿಯೋಗ ಬರುತ್ತೇವೆ. ಇದು ಬಗೆಹರಿದರೆ ರಾಜ್ಯದ ಆರು ಜಿಲ್ಲೆಗಳ 2.39 ಲಕ್ಷ ಕುಟುಂಬಗಳಿಗೆ ಬದುಕು ಕಟ್ಟಿಕೊಡಲು ಸಾಧ್ಯ ಎಂದು ಕೇಂದ್ರ ಸಚಿವರಿಗೆ ಇಲ್ಲಿನ ಅರಣ್ಯ ಒತ್ತುವರಿದಾರರ ಸಮಸ್ಯೆ ಬಗ್ಗೆ ತಿಳಿಸಿದರು.
ಅಂಕೋಲಾ ತಾಲೂಕಿನ ಕೈಗಡಿ ಗ್ರಾಮದಲ್ಲಿ ಸಾವಯವ ಕೃಷಿ ಪರಿವಾರ & ಕೃಷಿ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ "ಅನ್ನದಂಗಳದಲ್ಲಿ ಕೃಷಿಕರೊಂದಿಗೆ ಸಂವಾದ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃಷಿಕರ ಸಮಸ್ಯೆಗಳನ್ನು ಆಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಸಚಿವರಾದ ಶ್ರೀ @ShivaramHebbar ಉಪಸ್ಥಿತರಿದ್ದರು.#SKinUttaraKannada pic.twitter.com/QAH4OKAXUn
— Shobha Karandlaje (@ShobhaBJP) September 18, 2021
ಶೋಭಾ ಕರಂದ್ಲಾಜೆ ಮಾತನಾಡಿ, ನಿಮ್ಮ ಎಲ್ಲಾ ಆಗ್ರಹಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ಅರಣ್ಯದ ಬಗ್ಗೆ ನಮ್ಮ ರಾಜ್ಯದಲ್ಲಿ ಇರುವಷ್ಟು ಕಠಿಣವಾದ ನಿಯಮಗಳು ದೇಶದ ಮತ್ತೆಲ್ಲೂ ಇಲ್ಲ, ಇದರಲ್ಲಿ ಸಾಕಷ್ಟು ಬದಲಾವಣೆ ಆಗಬೇಕು ಸಾವಯವ ಕೃಷಿ ಪ್ರಮಾಣೀಕರಣವನ್ನು ವಾಣಿಜ್ಯ ಇಲಾಖೆಯಿಂದ ತೆಗೆದು ಕೃಷಿ ಇಲಾಖೆಗೆ ಸೇರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡುತ್ತೇನೆ. ಅರಣ್ಯಭೂಮಿ ಹಕ್ಕುಪತ್ರಕ್ಕೆ 75 ವರ್ಷಗಳ ಬದಲು 15 ವರ್ಷಗಳ ದಾಖಲೆ ನೀಡುವಂತೆ ಮಾಡಲು ಸಾಧ್ಯವಾಗಲಿದೆಯಾ ಎಂದು ಪರಿಶೀಲಿಸಲಾಗುವುದು ಎಂದರು. ಇದನ್ನೂ ಓದಿ: ಬೋರ್ವೆಲ್ಗೆ ಬಿದ್ದ ಎರಡೂವರೆ ವರ್ಷದ ಮಗು ಶವವಾಗಿ ಪತ್ತೆ
ಬೇಡಿಕೆ ಇದ್ದಕಡೆ ಕೃಷಿ ಉತ್ಪನ್ನ ರಫ್ತು ಮಾಡುವಂತಾಗಬೇಕು:
ಹಲವು ದೇಶದಲ್ಲಿ ನಮ್ಮ ಕೃಷಿ ಉತ್ಪನ್ನಕ್ಕೆ ಬಹು ಬೇಡಿಕೆ ಇದೆ. ಆದರೇ ಗುಣಮಟ್ಟದ ಉತ್ಪನ್ನಗಳನ್ನು ರಫ್ತುಮಾಡುವಲ್ಲಿ ರೈತರಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ತರಬೇತಿ ನೀಡಬೇಕು, ಗುಣಮಟ್ಟ ಉತ್ಪನ್ನ ಹಾಗೂ ಬೆಳಗಳ ಬಗ್ಗೆ ರೈತರಿಗೆ ಇಲಾಖೆ ಅರಿವು ಮೂಡಿಸುವ ಅಗತ್ಯವಿದೆ. ಕೋವಿಡ್ ಸಂದರ್ಭದಲ್ಲಿ ಶ್ರೀಲಂಕಾ ದೇಶದಲ್ಲಿ ಆಹಾರ ಉತ್ಪನ್ನದ ಕೊರತೆ ಆಗಿದೆ. ನಮ್ಮ ದೇಶದಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಆಹಾರ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದರು.
ಸಾವಯವ ಉತ್ಪನ್ನದಿಂದ ತಯಾರಿಸಿದ ಊಟ ಸವಿದ ಸಚಿವೆ:
ಕೇಂದ್ರ ಸಚಿವೆ ದಿನದ ಅರ್ಥ ಭಾಗವನ್ನು ರೈತರೊಂದಿಗೆ ಕಳೆದು ಅವರ ಸಮಸ್ಯೆ ಆಲಿಸಿದರು. ಇದಲ್ಲದೇ ರಾಮಚಂದ್ರ ಹೆಗಡೆ, ಸುಬ್ರಾಯ ಹೆಗಡೆ ಹಾಗೂ ಕೆಲವು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಿದ ರೈತರ ಬೆಳೆ ಬೆಳೆದ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಮಧ್ಯಾಹ್ನದ ವೇಳೆ ಸಾಮಾನ್ಯ ಜನರಂತೆ ರೈತರೊಂದಿಗೆ ಕುಳಿತು ಸಾವಯವ ಉತ್ಪನ್ನಗಳಿಂದ ತಯಾರಿಸಿದ ಊಟವನ್ನು ಸವಿದು ಖುಷಿ ಪಟ್ಟರು.