ನವದೆಹಲಿ: ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ (Live-In Partner) ಮಹಿಳೆಯೊಬ್ಬಳು (Woman) ಶವವಾಗಿ ಪತ್ತೆಯಾದ ಘಟನೆ ದೆಹಲಿಯ (Newdelhi) ಮಂಗೋಲ್‍ಪುರ ಕಲನ್ ಗ್ರಾಮದಲ್ಲಿ ನಡೆದಿದೆ.
ಮಂಗೋಲ್‍ಪುರ ಕಲನ್ ಗ್ರಾಮದ ಮನೆಯೊಂದರ 2ನೇ ಮಹಡಿಯಲ್ಲಿ 36 ವರ್ಷದ ಮಹಿಳೆಯ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಹಿಳೆ ಉತ್ತರ ಪ್ರದೇಶದ ಆಗ್ರಾ ನಿವಾಸಿಯಾಗಿದ್ದು, ಆಕೆ ಆಗ್ರಾ ಮೂಲದ ವ್ಯಕ್ತಿಯೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದಳು.
Advertisement
Advertisement
ಈ ಇಬ್ಬರು ಒಟ್ಟಾಗಿ ಇರುವುದನ್ನು ಮನೆ ಮಾಲೀಕರು ಅನೇಕ ಬಾರಿ ನೋಡಿದ್ದರು. ಆದರೆ ನಿನ್ನೆ ಮನೆಯ ಬಾಗಿಲು ಅರ್ಧ ತೆಗೆದಿರುವುದನ್ನು ಗಮನಿಸಿದ ಮನೆ ಮಾಲೀಕ ಒಳಗೆ ಹೋಗಿ ನೋಡಿದ್ದಾರೆ. ಅಲ್ಲಿ ಮಹಿಳೆ ಶವವಾಗಿ ಬಿದ್ದಿದ್ದಳು. ಅಷ್ಟೇ ಅಲ್ಲದೇ ಲಿವ್ ಇನ್ ರಿಲೇಶನ್‍ನಲ್ಲಿದ್ದ ವ್ಯಕ್ತಿ ನಾಪತ್ತೆ ಆಗಿದ್ದ.
Advertisement
ಘಟನೆಗೆ ಸಂಬಂಧಿಸಿ ಕೂಡಲೇ ರೋಹಿಣಿ ದಕ್ಷಿಣ ಪೊಲೀಸ್ ಠಾಣೆಗೆ ಮನೆ ಮಾಲೀಕ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶವವನ್ನು ವಶಕ್ಕೆ ಪಡೆದು, ಪೋಸ್ಟ್ ಮಾರ್ಟಂಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲದೇ ಮಹಿಳೆಯ ಶವದ ಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ.
Advertisement
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಿವ್ ಇನ್ ರಿಲೇಶನ್‍ನಲ್ಲಿದ್ದ ವ್ಯಕ್ತಿಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಆತನ ಫೋನ್ ಸ್ವಿಚ್ ಆಫ್ ಆಗಿದ್ದು, ಮನೆಯಿಂದ ನಾಪತ್ತೆ ಆಗಿದ್ದಾನೆ.
ಈ ಹಿನ್ನೆಲೆಯಲ್ಲಿ ಆಕೆಯ ಪತಿ ಶಹದಾರ ನಿವಾಸಿಗೆ ಸಂಪರ್ಕಿಸಿದ್ದಾರೆ. ಈ ವೇಳೆ ಆಕೆಗೆ 2011 ರಲ್ಲಿ ವಿವಾಹವಾಗಿದ್ದು, ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ವೋಟರ್ ಐಡಿ ಗೋಲ್ಮಾಲ್ – ಸ್ಥಳೀಯ ಶಾಸಕರ ಮೇಲೆ ಕಾಂಗ್ರೆಸ್ ಆರೋಪ
ಮಹಿಳೆಯ ಪತಿ (Husband) ಪಂಜಾಬ್‍ನ ಜಿರಾಕ್‍ಪುರದಲ್ಲಿ ಕೆಲಸ ಮಾಡುತ್ತಿದ್ದು, ಆದರೆ ಆಕೆ ಚಿಕಿತ್ಸೆಗಾಗಿ ದೆಹಲಿಗೆ ತೆರಳಿದ್ದಳು. ಅಲ್ಲಿ ಓರ್ವ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನೂ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್ ಆಯ್ತು, ಈಗ ಜೆಡಿಎಸ್ ಮುಖಂಡ ಆರ್. ಉಗ್ರೇಶ್‍ರಿಂದ ಬಾಳೆ ಹಣ್ಣು ಭಾಗ್ಯ