ಜಮ್ಮು: ಕೇಂದ್ರದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಅಗ್ನಿವೀರ್ (Agniveer) ಯೋಜನೆಯನ್ನು ರದ್ದುಪಡಿಸುವುದರ ಜೊತೆಗೆ ಹಳೆಯ ಪಿಂಚಣಿ ಯೋಜನೆಯನ್ನು (OPS) ಜಾರಿ ಮಾಡಲಾಗುವುದು ಎಂದು ರಾಜ್ಯಸಭೆ ಸಂಸದ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಸೈಯದ್ ನಾಸಿರ್ ಹುಸೇನ್ ( Syed Naseer Hussain) ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ಜಮ್ಮುವಿನಲ್ಲಿ (Jammu) ಮಾತನಾಡಿದ ಅವರು, ಅಗ್ನಿವೀರ್ ಯೋಜನೆ ಅನುಷ್ಠಾನದಿಂದ ಅನೇಕ ರಾಜ್ಯಗಳ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಮತ್ತು ಲಡಾಖ್‌ನಂತಹ ಗುಡ್ಡಗಾಡು ಪ್ರದೇಶದ ಯುವಕರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನಾಲ್ಕು ವರ್ಷಗಳ ಸೈನಿಕ ಸೇವೆಯ ನಂತರ ಯುವಕರು ಮತ್ತೆ ನಿರುದ್ಯೋಗಿಗಳಾಗಲಿದ್ದಾರೆ ಎಂದರು. ಇದನ್ನೂ ಓದಿ: ಪಿತೃಪಕ್ಷದ ಊಟಕ್ಕೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಭೂಪ!
ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರ ಈ ಯೋಜನೆಯನ್ನು ಪರಿಚಯಿಸುವ ಮೂಲಕ ದೇಶದ ಭದ್ರತೆ, ಸಂರಕ್ಷಣೆಯೊಂದಿಗೆ ರಾಜಿ ಮಾಡಿಕೊಂಡಿದೆ. ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಘೋಷಣೆ ಮಾಡಿದ್ದಾರೆ. ಈ ಯುವ ವಿರೋಧಿ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಕಾಂಗ್ರೆಸ್ ದೇಶದ ಯುವಕರಿಗೆ ದೊಡ್ಡ ಪರಿಹಾರವನ್ನು ನೀಡುತ್ತದೆ ಎಂದರು. ಇದನ್ನೂ ಓದಿ: ನಿಮ್ಮಿಂದ ನಮ್ಮ ಸಿದ್ದರಾಮಯ್ಯಗೆ ಈ ಸ್ಥಿತಿ ಬಂತು – ಮುಡಾ ಅಧ್ಯಕ್ಷರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಘೇರಾವ್
ಕಾಂಗ್ರೆಸ್ ಪಕ್ಷವು ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಮಾಡಿದಂತೆ ಹಳೆಯ ಪಿಂಚಣಿ ಯೋಜನೆ ಪುನಶ್ಚೇತನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ, ರಾಜಸ್ಥಾನ (Rajasthan) ಮತ್ತು ಹಿಮಾಚಲ ಪ್ರದೇಶದಲ್ಲಿಯೂ (Himachal Pradesh) ಈಗಾಗಲೇ ಮಾಡಿದ್ದೇವೆ. ಇಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜಮ್ಮು ಕಾಶ್ಮೀರದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ತರಲು ಬದ್ಧವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ 91 ಲಕ್ಷ ರೂ. ಕಳೆದುಕೊಂಡ ಖಾಸಗಿ ಶಾಲಾ ಶಿಕ್ಷಕ
ಜಮ್ಮು ಮತ್ತು ಕಾಶ್ಮೀರದ (Kashmir) ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 60,000 ಕ್ಕೂ ಹೆಚ್ಚು ದಿನಗೂಲಿಗಳು, ಗುತ್ತಿಗೆದಾರರು ಮತ್ತು ಇತರ ಹಂಗಾಮಿ ಕಾರ್ಮಿಕರ ಅನಿಶ್ಚಿತ ಭವಿಷ್ಯದ ಬಗ್ಗೆ ಕಾಂಗ್ರೆಸ್ ಪಕ್ಷದ ಕೆಲವು ಯೋಜನೆಯನ್ನು ಪರಿಗಣಿಸಿದೆ. ನ್ಯಾಷನಲ್ ಕಾನ್ಫರೆನ್ಸ್ ಕೂಡ ತನ್ನ ಮೊದಲ ಆದ್ಯತೆಯಲ್ಲಿ ಇಟ್ಟುಕೊಂಡಿದೆ. ದೀರ್ಘಕಾಲದಿಂದ ಶೋಷಣೆಯನ್ನು ಎದುರಿಸುತ್ತಿರುವ ಈ ಕಾರ್ಮಿಕರ ಭವಿಷ್ಯವನ್ನು ಖಂಡಿತವಾಗಿಯೂ ನಿರ್ಧರಿಸುತ್ತದೆ. ಎಲ್ಲಾ ದಿನಗೂಲಿ ಕಾರ್ಮಿಕರನ್ನು ಕಾಯಂಗೊಳಿಸಲಾಗುವುದು ಮತ್ತು ಜೆ & ಕೆ ನಲ್ಲಿ ಕನಿಷ್ಠ ವೇತನ ಕಾಯ್ದೆಯ ಅಡಿಯಲ್ಲಿ ಕಾರ್ಮಿಕರಿಗೆ ಕೇಂದ್ರ ನಿಯಮಗಳ ಪ್ರಕಾರ ಸಾಕಷ್ಟು ವೇತನವನ್ನು ಒದಗಿಸಲಾಗುವುದು ಎಂದರು. ಇದನ್ನೂ ಓದಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸಿ: ಫ್ರಾನ್ಸ್ ಅಧ್ಯಕ್ಷ ಒತ್ತಾಯ
ಸತ್ಯಪಾಲ್ ಮಲಿಕ್ ಅವರನ್ನು ಬಿಜೆಪಿಯಿಂದ ನೇಮಿಸಲಾಗಿದೆಯೇ ಹೊರತು ಕಾಂಗ್ರೆಸ್ ಪಕ್ಷದಿಂದಲ್ಲ, ಅವರು ಪುಲ್ವಾಮದಂತಹ ಗಂಭೀರ ಆರೋಪಗಳನ್ನು ಎತ್ತಿದ್ದರೆ ಬಿಜೆಪಿ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ‘ಸಮಸ್ಯೆಯ ಬಗ್ಗೆ ಮೌನವಾಗಿರಿ’ ಎಂದು ಪಿಎಂಒ ಮತ್ತು ಗೃಹ ಸಚಿವಾಲಯವು ಅವರಿಗೆ ಸೂಚಿಸಿದೆ. ಇದರ ಬಗ್ಗೆ ನಾವು ಯೋಚಿಸಬೇಕಿದೆ ಎಂದರು. ಇದನ್ನೂ ಓದಿ: ಮಹಾಲಕ್ಷ್ಮಿ ಕೊಲೆ ಬಳಿಕ ಬೆಂಗಳೂರಿನಿಂದ ಒಡಿಶಾಗೆ ಬೈಕ್‌ನಲ್ಲೇ ಪ್ರಯಾಣ – ಮೂರು ದಿನ 1,550 ಕಿಮೀ ಬೈಕ್ ಓಡಿಸಿದ್ದ ಹಂತಕ!