ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.
2013ರಿಂದ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿ ಮುಕ್ತಾಯವಾಗಲಿದೆ. ಅಗ್ನಿಸಾಕ್ಷಿ ಇಲ್ಲಿಯವರೆಗೂ 1500ಕ್ಕೂ ಹೆಚ್ಚು ಸಂಚಿಕೆ ಪ್ರಸಾರವಾಗಿದ್ದು, ಶೀಘ್ರದಲ್ಲೇ ಧಾರಾವಾಹಿ ಕೊನೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಡಿಸೆಂಬರ್ 30ರಿಂದ ಜನವರಿ 4ರವರೆಗೂ ಅಗ್ನಿಸಾಕ್ಷಿ ಧಾರಾವಾಹಿಯ ಅಂತಿಮ ಸಂಚಿಕೆ ಪ್ರಸಾರವಾಗಲಿದೆ. ಆದರೆ ಸೀರಿಯಲ್ ಕೊನೆ ಆಗುತ್ತಿದೆ ಎಂಬುದರ ಬಗ್ಗೆ ಖಾಸಗಿ ವಾಹಿನಿ ಆಗಲಿ, ಧಾರಾವಾಹಿ ತಂಡ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಈ ಮೊದಲು ಅಗ್ನಿಸಾಕ್ಷಿಯಲ್ಲಿ ಸಿದ್ಧಾರ್ಥ್ ಪಾತ್ರದಲ್ಲಿ ನಟಿಸುತ್ತಿದ್ದ ವಿಜಯ್ ಸೂರ್ಯ ಧಾರಾವಾಹಿಯಿಂದ ಹೊರ ನಡೆದಿದ್ದರು. ವಿಜಯ್ ಧಾರಾವಾಹಿಗಾಗಿ 5 ವರ್ಷ ಒಪ್ಪಂದ ಮಾಡಿಕೊಂಡಿದ್ದರು. ಆ ಅಗ್ರಿಮೆಂಟ್ ಅವಧಿ ಮುಗಿದಿರುವ ಕಾರಣ ವಿಜಯ್ ಧಾರಾವಾಹಿಯಿಂದ ಹೊರ ನಡೆದಿದ್ದರು.
ಇನ್ನೂ ಖಳನಟಿ ಚಂದ್ರಿಕಾ ಪಾತ್ರದಲ್ಲಿ ನಟಿಸಿದ ಪ್ರಿಯಾಂಕಾ ಕೂಡ ಆ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಪ್ರಿಯಾಂಕಾ ಬಿಗ್ ಬಾಸ್‍ಗೆ ಎಂಟ್ರಿ ಕೊಟ್ಟ ಕಾರಣ ಅವರು ಕೂಡ ಆ ಸೀರಿಯಲ್‍ನಿಂದ ಹೊರ ಬಂದಿದ್ದರು.