ಬೆಂಗಳೂರು: ರವಿಕಿರಣ್ ನಿರ್ದೇಶನದ ಗಿರ್ ಗಿಟ್ಲೆ ಈಗ ಎಲ್ಲಾ ವರ್ಗದ ಪ್ರೇಕ್ಷಕರ ಆಸಕ್ತಿಯ ಕೇಂದ್ರಬಿಂದು. ಟ್ರೈಲರ್, ಹಾಡುಗಳು ಮತ್ತು ಒಂದಕ್ಕಿಂತ ಒಂದು ಭಿನ್ನವಾದ ಪೋಸ್ಟರ್ ಗಳ ಮೂಲಕವೇ ಈ ಚಿತ್ರವೀಗ ಎಲ್ಲ ವರ್ಗದ ಪ್ರೇಕ್ಷಕರನ್ನೂ ತುದಿಗಾಲಲ್ಲಿ ನಿಲ್ಲಿಸಿದೆ. ಹೀಗೆ ಗಿರ್ ಗಿಟ್ಲೆ ಬಗ್ಗೆ ಎಲ್ಲೆಡೆ ಸೃಷ್ಟಿಯಾಗಿರೋ ಕ್ರೇಜ್ ಗೆ ತಕ್ಕುದಾದ ಹೊಸತನಗಳೇ ಅದೊರಳಗೂ ಇರೋದು ಸುಳ್ಳಲ್ಲ!
ಗಿರ್ ಗಿಟ್ಲೆಯೊಳಗೆ ಹೆಸರಿಸಲಾಗದಷ್ಟು ಪ್ರಮಾಣದಲ್ಲಿ ವಿಶೇಷತೆಗಳಿವೆ. ಸಾಕಷ್ಟು ವಿಚಾರಗಳಲ್ಲಿ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಮೊದಲಾಗೋ ಲಕ್ಷಣಗಳೂ ಇವೆ. ಅದರಲ್ಲಿಯೂ ಈ ಸಿನೆಮಾ ಮೂಲಕ ಸೀರಿಯಲ್ ಸ್ಟಾರ್ ವೈಷ್ಣವಿ ಗೌಡ ನಾಯಕಿಯಾಗಿ ಹಿರಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಇಲ್ಲಿ ಅವರ ಪಾತ್ರ ಕೂಡಾ ಒಟ್ಟಾರೆ ವಿಶೇಷತೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ! ಇದನ್ನೂ ಓದಿ: ನೋಡುಗರನ್ನೆಲ್ಲ ಗಿರಕಿ ಹೊಡೆಸಲು ರೆಡಿಯಾಯ್ತು ಗಿರ್ ಗಿಟ್ಲೆ!
ವೈಷ್ಣವಿ ಗೌಡ ಅಂದರೆ ತಕ್ಷಣಕ್ಕೆ ಗೊತ್ತಾಗೋದು ಕಷ್ಟ. ಆದರೆ ಅಗ್ನಿಸಾಕ್ಷಿ ಸನ್ನಿಧಿ ಅಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಕಿರುತೆರೆಯ ಪ್ರಸಿದ್ಧ ಧಾರಾವಾಹಿ ಅಗ್ನಿಸಾಕ್ಷಿಯ ಮೂಲಕ ಸನ್ನಿಧಿಯಾಗಿ ವೈಷ್ಣವಿ ಗೌಡ ಮಾಡಿರೋ ಮೋಡಿಯೇ ಅಂಥಾದ್ದು. ತನ್ನ ಸುತ್ತ ಎಂಥಾದ್ದೇ ಪಿತೂರಿಗಳು ನಡೆದರೂ ಬಂಧಗಳೇ ಬದುಕೆಂದುಕೊಳ್ಳೋ ಹುಡುಗಿಯಾಗಿ ನಟಿಸುತ್ತಿರೋ ವೈಷ್ಣವಿ ಕಿರುತೆರೆ ಪ್ರೇಕ್ಷಕರ ಪಾಲಿಗೆ ಮನೆ ಮಗಳಾಗಿ ಹೋಗಿದ್ದಾರೆ. ಇದನ್ನೂ ಓದಿ: ಗಿರ್ ಗಿಟ್ಲೆ ನಿರ್ದೇಶಕರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ!
ಇಂಥಾ ವೈಷ್ಣವಿ ಗಿರ್ ಗಿಟ್ಲೆ ಚಿತ್ರದ ಮೂಲಕ ಹಿರಿತೆರೆಗೂ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ವೈಷ್ಣವಿ ಅಭಿಮಾನಿ ಬಳಗವೂ ಕಾತರದಿಂದಿದೆ. ಈ ಚಿತ್ರದಲ್ಲಿಯೂ ವೈಷ್ಣವಿ ಅಗ್ನಿಸಾಕ್ಷಿಯಂಥಾದ್ದೇ ಮುಗ್ಧ ಪಾತ್ರದಲ್ಲಿ ನಟಿಸಿದ್ದಾರಾ ಎಂಬಂಥಾ ಕುತೂಹಲವೂ ಇದೆ. ಆದ್ರೆ ಗಿರ್ ಗಿಟ್ಲೆಯಲ್ಲಿನ ವೈಷ್ಣವಿ ಪಾತ್ರ ಎಲ್ಲರನ್ನೂ ಬೆರಗಾಗಿಸಲಿದೆ ಅನ್ನೋದು ಚಿತ್ರತಂಡದ ಕಡೆಯಿಂದ ಹೊರ ಬಿದ್ದಿರೋ ಮಾಹಿತಿ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv