ವೃತ್ತಿ ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಬಂದವರು ಹೆಚ್ಚು. ಆದರೆ, ಸಿನಿಮಾ ಮತ್ತು ಕಿರುತೆರೆಯಲ್ಲಿ ಪಾಪ್ಯುಲರ್ ಆದವರು ಮತ್ತೆ ವೃತ್ತಿ ರಂಗಭೂಮಿಯತ್ತ ಮುಖವೆತ್ತಿ ಕೂಡ ನೋಡುವುದಿಲ್ಲ. ಆದರೆ, ಅಗ್ನಿಸಾಕ್ಷಿ, ಸತ್ಯ ಸೇರಿದಂತೆ ಹಲವು ಪಾಪ್ಯುಲರ್ ಧಾರಾವಾಹಿಯಲ್ಲಿ ನಟಿಸಿದ ಚಂದ್ರಿಕಾ ಇದೀಗ ವೃತ್ತಿ ರಂಗಭೂಮಿಯತ್ತ ಮುಖ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿರುವ ‘ಖಾನಾವಳಿ ಚೆನ್ನಿ’ ನಾಟಕದಲ್ಲಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
Advertisement
ರಾಣೇಬೆನ್ನೂರು ಮಂಜುನಾಥ ನಾಟ್ಯ ಸಂಘವು ರೋಣ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿರುವ ‘ಖಾನಾವಳಿ ಚೆನ್ನಿ’ ನಾಟಕವು ಜೂನ್ 11 ಮತ್ತು 12 ರಂದು ಎರಡೆರಡು ಪ್ರದರ್ಶನಗಳನ್ನು ಆಯೋಜನೆ ಮಾಡಲಾಗಿದೆ. ಇದು ಈ ನಾಟಕದ ಹಾಸ್ಯ ಪಾತ್ರಧಾರಿ ಶ್ರೀದೇವಿ ಅವರ ಮದುವೆ ಸಹಾರ್ಥವಾಗಿ ನಡೆಯಲಿದೆ. ಹಾಗಾಗಿ ಚಂದ್ರಿಕಾ ಪ್ರಮುಖ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್
Advertisement
Advertisement
ನಾಟಕದ ಕುರಿತು ಮಾತನಾಡಿರುವ ಸಂಘದ ಮಾಲೀಕರಾದ ನಾಗರತ್ನ ಚಿಕ್ಕಮಠ ಮಾತನಾಡಿ, “ಕವಿ ಬಿ.ಆರ್. ಅರಶಿನಗೋಡೆ ಅವರು ಬರೆದಿರುವ ಖಾನಾವಳಿ ಚೆನ್ನಿ ಹೆಸರಾಂತ ಹಾಸ್ಯ ನಾಟಕ. ಈ ನಾಟಕವನ್ನು ರೋಣದಲ್ಲಿ ಆಯೋಜನೆ ಮಾಡಲಾಗಿದೆ. ಖ್ಯಾತ ಧಾರಾವಾಹಿ ಕಲಾವಿದೆ ಚಂದ್ರಿಕಾ ಅವರು ಪ್ರಧಾನ ಪಾತ್ರ ಮಾಡುತ್ತಿದ್ದರೆ, ಜ್ಯೂನಿಯರ್ ಯಶ್ ಕೂಡ ಈ ನಾಟಕದಲ್ಲಿ ಮತ್ತೊಂದು ಪಾತ್ರ ಮಾಡುತ್ತಿದ್ದಾರೆ. ಸಂಘದ ಕಲಾವಿದೆ ಶ್ರೀದೇವಿ ಅವರ ಮದುವೆಗಾಗಿ ಇದನ್ನು ಆಯೋಜನೆ ಮಾಡಲಾಗಿದೆ’ ಎಂದರು.
Advertisement
ಖಾನಾವಳಿ ಚೆನ್ನಿ ನಾಟಕದಲ್ಲಿ ಹಾಸ್ಯದ ಜೊತೆ ಡಬಲ್ ಮೀನಿಂಗ್ ಡೈಲಾಗ್ ಕೂಡ ಇವೆ. ಚೆನ್ನಿಯ ಪಾತ್ರದ ಸುತ್ತ ಇಡೀ ನಾಟಕ ಕಟ್ಟಲಾಗಿದೆ. ಈಗಾಗಲೇ ಈ ನಾಟಕ ಉತ್ತರ ಕರ್ನಾಟಕದಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡಿದೆ. ಹೆಸರಾಂತ ಕಲಾವಿದೆಯರು ಈಗಾಗಲೇ ಚೆನ್ನಿ ಪಾತ್ರವನ್ನು ಮಾಡಿದ್ದಾರೆ. ಪ್ರತಿ ಪ್ರಯೋಗವೂ ಯಶಸ್ಸು ಕಂಡಿರುವುದು ನಾಟಕದ ಹೆಗ್ಗಳಿಕೆ ಕೂಡ.