ಕಿರುತೆರೆಯ ಚಾಕ್‌ಲೇಟ್ ಹೀರೋ ವಿಜಯ್ ಸೂರ್ಯ (Vijay Suriya) ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಗ್ನಿಸಾಕ್ಷಿ (Agnisakshi) , ನಮ್ಮ ಲಚ್ಚಿ ಸೀರಿಯಲ್ ಹೀರೋ ವಿಜಯ್ ಸೂರ್ಯ ಅವರು ಮತ್ತೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಪತ್ನಿ ಚೈತ್ರಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.
ಲಕ್ಷ್ಮಿ ಬಾರಮ್ಮ, ಅಗ್ನಿಸಾಕ್ಷಿ, ಖ್ಯಾತಿ ವಿಜಯ್ ಸೂರ್ಯ ಸದ್ಯ ‘ನಮ್ಮ ಲಚ್ಚಿ’ (Namma Lacchi) ಮತ್ತು ತೆಲುಗಿನ ‘ಕೃಷ್ಣಮ್ಮ ಕಲ್ಪಿಂಡಿ’ ಸೀರಿಯಲ್‌ನಲ್ಲಿ ಹೀರೋ ಆಗಿ ಮಿಂಚ್ತಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್ ಅಂತಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ತಮನ್ನಾ ಭಾರತೀಯ ಚಿತ್ರರಂಗದ ಶಕೀರಾ: ಸೆಕ್ಸಿ ಸ್ಟೆಪ್ ಹಾಕಿದ್ದಕ್ಕೆ ಬಿರುದು
ವಿಜಯ್ ಸೂರ್ಯ- ಚೈತ್ರಾ ಶೀನಿವಾಸ್ (Chaithra Srinivas) ಅವರದ್ದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಮ್ಮನ ಆಸೆಯಂತೆ ಸಾಫ್ಟ್‌ವೇರ್ ಇಂಜಿನಿಯರ್ ಚೈತ್ರಾ ಅವರನ್ನ ವಿಜಯ್ ಮದುವೆಯಾದರು. 2020ರಲ್ಲಿ ಮೊದಲ ಮಗುವನ್ನು ಬರಮಾಡಿಕೊಂಡರು. ಈಗ ಜೂನ್ 2ರಂದು ಎರಡನೇ ಗಂಡು ಮಗುವನ್ನ ಬರಮಾಡಿಕೊಂಡಿದ್ದಾರೆ. ಕಳೆದ ತಿಂಗಳು ಜೂನ್‌ನಲ್ಲಿ ಎರಡನೇ ಮಗುವಿನ ಆಗಮನವಾಗಿದೆ.
ಮೊದಲ ಮಗನಿಗೆ ಸೋಹೆನ್ (Sohan) ಎಂದು ಹೆಸರಿಟ್ಟಿದ್ದರೆ, ಎರಡನೇ ಪುತ್ರನಿಗೆ ಕಾರ್ತಿಕೇಯ ಸೂರ್ಯ ಎಂದು ನಾಮಕರಣ ಮಾಡಿದ್ದಾರೆ. ಒಟ್ನಲ್ಲಿ ಮುದ್ದು ಮಗನ ಆಗಮನದಿಂದ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಎರಡನೇ ಮಗು ಹುಟ್ಟಿದ ಸಂದರ್ಭದಲ್ಲಿ ವಿಜಯ್, ಹೈದರಾಬಾದ್ ಶೂಟಿಂಗ್‌ನಲ್ಲಿ ಬ್ಯುಸಿಯಿದ್ದರು. ಈಗ ಬೆಂಗಳೂರಿಗೆ ವಾಪಾಸ್ ಆಗಿದ್ದು, ಮೊದಲ ಮಗನ ಜೊತೆಗಿದ್ದಾರೆ. ಪತ್ನಿ ಚೈತ್ರಾ ಎರಡನೇ ಕೂಸು ಕಾರ್ತಿಕೇಯ ಜೊತೆ ತವರು ಮನೆಯಲ್ಲಿದ್ದಾರೆ.
ವಿಜಯ್ ಸೂರ್ಯ ಅವರು ಕನ್ನಡ ಸಿನಿಮಾಗಳ ಜೊತೆ ಜೊತೆಗೆ ಕಿರುತೆರೆಯ ಸೀರಿಯಲ್‌ನಲ್ಲೂ ಆಕ್ಟೀವ್ ಆಗಿದ್ದಾರೆ. ಈಗಾಗಲೇ ಕ್ರೇಜಿ ಲೋಕ, ಇಷ್ಟಕಾಮ್ಯ, ಸಾ, ಕದ್ದುಮುಚ್ಚಿ, ಗಾಳಿಪಟ 2 ಸಿನಿಮಾಗಳಲ್ಲಿ ಹೀರೋ ವಿಜಯ್ ನಟಿಸಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]