ಕಲ್ಯಾಣ ಕರ್ನಾಟಕದ ಅತಿದೊಡ್ಡ ಅಗ್ನಿಪಥ ರ‍್ಯಾಲಿ ಇಂದಿನಿಂದ ಬೀದರ್‌ನಲ್ಲಿ ಆರಂಭ

Public TV
1 Min Read
Agnipath Rally in Bidar agniveer indian army 1

ಬೀದರ್: ಈ ವರ್ಷದ ಕೊನೆಯ ಮತ್ತು ಕಲ್ಯಾಣ ಕರ್ನಾಟಕದ ಅತಿದೊಡ್ಡ ಅಗ್ನಿಪಥ ರ‍್ಯಾಲಿ(Agnipath Rally) ಇಂದಿನಿಂದ ಬೀದರ್‌ನಲ್ಲಿ(Bidar)ಆರಂಭವಾಗಿದೆ.

Agnipath Rally in Bidar agniveer indian army 3

ನೆಹರು ಮೈದಾನದಲ್ಲಿ ಡಿ. 22ರವರೆಗೆ ರ‍್ಯಾಲಿ ನಡೆಯಲಿದ್ದು, ಬೆಳಗಾವಿ, ಬೀದರ್‌, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ 70 ಸಾವಿರಕ್ಕೂ ಅಧಿಕ ಮಂದಿ ರ‍್ಯಾಲಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೊಡಗಿನ ಹೋಂಸ್ಟೇಯಲ್ಲಿ ಇಬ್ಬರು ಮಹಿಳೆಯರೊಂದಿಗೆ ತಂಗಿದ್ದ ಶಾರೀಕ್!

Agnipath Rally in Bidar agniveer indian army 2

ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಬಳಿಕ ಸಾಮಾನ್ಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ.

ಅಭ್ಯರ್ಥಿಗಳು ಒಂದು ವಿಭಾಗದಲ್ಲಿ ಮಾತ್ರ ಭಾಗವಹಿಸಬಹುದು. ಒಂದು ವೇಳೆ ಒಂದಕ್ಕಿಂತ ಹೆಚ್ಚು ವಿಭಾಗದಲ್ಲಿ ನೋಂದಾಯಿಸಿಕೊಂಡಿದ್ದರೆ ಅವರನ್ನು ಅನರ್ಹಗೊಳಿಸಲಾಗುತ್ತದೆ. ಅಭ್ಯರ್ಥಿಗಳು ದಾಖಲೆಗಳ ಮೂಲ ಪ್ರತಿಯೊಂದಿಗೆ ಎರಡು ಪ್ರಮಾಣಿಕರಿಸಿದ ಪೋಟೋ ಕಾಪಿಗಳನ್ನು ರ‍್ಯಾಲಿ ನಡೆಯುವಲ್ಲಿಗೆ ತರಬೇಕು ಎಂದು ಸೂಚಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article