ಶ್ರೀನಗರ: ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ದೇಶದ ಮಿಲಿಟರಿಯಲ್ಲಿ ಸೇವೆ ಮಾಡಲು ಯುವ ಜನರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅಗ್ನಿಪಥ್ ಯೋಜನೆ ಆರಂಭಿಸಲಾಗಿದೆ. ಅಗ್ನಿಪಥ್ ದೇಶದ ಯುವಕರಿಗೆ ದೇಶ ಸೇವೆ ಮಾಡಲು ಒದಗಿ ಬಂದಿರುವ ಸುವರ್ಣ ಅವಕಾಶವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
Advertisement
ಅಗ್ನಿಪಥ್ ಯೋಜನೆ ಬಗ್ಗೆ ಜಮ್ಮು ಕಾಶ್ಮೀರದಲ್ಲಿ ಮಾತನಾಡಿರುವ ಅವರು, ಅಗ್ನಿಪಥ್ ಯೋಜನೆ ಆರಂಭಿಸಿರುವ ಕೇಂದ್ರ ಸರ್ಕಾರ ದೇಶದ ಯುವಕರಿಗೆ ದೇಶ ಸೇವೆ ಮಾಡಲು ನೀಡಿರುವ ಸುವರ್ಣ ಅವಕಾಶವಾಗಿದೆ. ಅಗ್ನಿವೀರರಾಗಿ 4 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿಕೊಡಲಾಗಿದೆ. ಅಗ್ನಿವೀರರ ಮೂಲಕ ದೇಶದ ಸೇನೆಯನ್ನು ಮತ್ತಷ್ಟು ಬಲಗೊಳಿಸುವ ಮತ್ತು ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಕ್ರಮ ವಹಿಸಿದ್ದೇವೆ ಎಂದರು. ಇದನ್ನೂ ಓದಿ: ಇಸ್ರೇಲ್ ಮಾದರಿಯ ʼಅಗ್ನಿಪಥ್ʼ- ಏನಿದು ಯೋಜನೆ, ಯಾಕಿಷ್ಟು ವಿರೋಧ?
Advertisement
Advertisement
ಕಳೆದ 2 ವರ್ಷಗಳಲ್ಲಿ ಹಲವು ಯುವಕರಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗದೆ ಇರುವುದನ್ನು ಗಮನಿಸಿ ಅಗ್ನಿಪಥ್ ಯೋಜನೆಯನ್ನು ಆರಂಭಿಸಿದ್ದೇವೆ. ದೇಶ ಸೇವೆ ಮಾಡಲು ಯುವಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಗ್ನಿವೀರರ ನೇಮಕದ ವಯೋಮಿತಿಯನ್ನು 21 ರಿಂದ 23ಕ್ಕೆ ಏರಿಸಲಾಗಿದೆ. ಈ ಮೂಲಕ ಯುವಜನರಿಗೆ ಸೇನೆ ಸೇರಲು ಉತ್ತಮವಾದ ಅವಕಾಶ ನೀಡಿದ್ದೇವೆ. ಕೂಡಲೇ ಈ ಬಗ್ಗೆ ಯುವಕರು ಗಮನ ಹರಿಸಿ ತಯಾರಿ ನಡೆಸಿ. ಕೆಲದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಯುವಕರಿಗೆ ಸೇನೆಯಲ್ಲಿ ಹೊಸ ಅವಕಾಶ – ಅಗ್ನಿಪಥ್ ನೇಮಕಾತಿ ಯೋಜನೆ ಪ್ರಾರಂಭ
Advertisement
ಇದೀಗ ಕೇಂದ್ರ ಅಗ್ನಿವೀರರ ಆಯ್ಕೆಗೆ ನಿಗದಿಪಡಿಸಿರುವ ವಯೋಮಿತಿ ಕುರಿತಾಗಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ಕೂಡಲೇ ಚರ್ಚಿಸಿ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.