ನವದೆಹಲಿ: ದೇಶ ಸೇವೆಯ ವೇಳೆ ತಮ್ಮ ಜೀವ ಬಲಿದಾನ ಮಾಡಿದರೆ ಅಗ್ನಿವೀರರಿಗೆ 1 ಕೋಟಿ ರೂ. ಪರಿಹಾರ ಸಿಗಲಿದೆ. ಅಲ್ಲದೆ ಭವಿಷ್ಯದಲ್ಲಿ ಇದರ ಸಂಖ್ಯೆಯೂ 1.25 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ರಕ್ಷಣಾ ಸಚಿವಾಲಯದ ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ತಿಳಿಸಿದ್ದಾರೆ.
Advertisement
ಅಗ್ನಿಪಥ್ ಯೋಜನೆ ವಿರುದ್ಧ ಸೇನಾ ಆಕಾಂಕ್ಷಿಗಳು ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆ ಮಧ್ಯೆ, ಯೋಜನೆ ಕುರಿತು ಮನವರಿಕೆ ಮಾಡಿಕೊಡಲು ಕೇಂದ್ರ ಸರ್ಕಾರ ಪ್ರಯತ್ನಿಸಿದೆ. ಕೆಲವು ವಿನಾಯಿತಿ ಮತ್ತು ಸವಲತ್ತುಗಳನ್ನು ಘೋಷಿಸಿದ್ದ ಗೃಹ ಸಚಿವಾಲಯ, ಪ್ರತಿಭಟನಾಕಾರರ ಆಕ್ರೋಶವನ್ನು ತಣ್ಣಗಾಗಿಸಲು ಪ್ರಯತ್ನಿಸಿದೆ. ಆದರೆ ಪ್ರತಿಭಟನೆಯ ಕಿಚ್ಚು ಕಡಿಮೆಯಾಗಿಲ್ಲ ಈ ಹಿನ್ನೆಲೆಯಲ್ಲಿ ಯೋಜನೆಯಲ್ಲಿರುವ ವಿವಿಧ ಸೌಲಭ್ಯ ಹಾಗೂ ಮೀಸಲಾತಿ ಬಗೆಗೆ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಅಗ್ನಿಫಥ್‌ನಿಂದ ಹೆಚ್ಚಿದ ಕಿಚ್ಚು- ನಾಲ್ಕೇ ದಿನಗಳಲ್ಲಿ 200 ಕೋಟಿ ಆಸ್ತಿ ನಷ್ಟ
Advertisement
Advertisement
ಈ ಕುರಿತು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನ್ನಪ್ಪ, ಜುಲೈ 24 ರಂದು ಪರೀಕ್ಷೆ ನಡೆಯಲಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಅಗ್ನಿವೀರರ ಮೊದಲ ಬ್ಯಾಚ್ ನೇಮಕವಾಗಲಿದೆ. ಇದರಲ್ಲಿ 25,000 ಯುವಕರನ್ನು ಅಯ್ಕೆ ಮಾಡಲಾಗುವುದು. 2023ರ ಫೆಬ್ರವರಿಯಲ್ಲಿ 2ನೇ ಬ್ಯಾಚ್ ನೇಮಕವಾಗಲಿದ್ದು ಇದರಲ್ಲಿ 40,000 ಜನರನ್ನು ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
Advertisement
ಇದಕ್ಕೂ ಮುನ್ನ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, ಅಗ್ನಿವೀರರಿಗೆ ಘೋಷಣೆ ಮಾಡುತ್ತಿರುವ ಮೀಸಲಾತಿಗಳನ್ನು ಈ ಮೊದಲೇ ಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ʼಅಗ್ನಿಪಥʼ ಹಿಂಸಾಚಾರ – ಪ್ರತಿಭಟನಾಕಾರರಿಗೆ ಆಸ್ಪತ್ರೆಯಿಂದಲೇ ಸೋನಿಯಾ ಗಾಂಧಿ ಮನವಿ
#WATCH No rollback of #Agnipath scheme, says Lt General Anil Puri, Additional Secy, Dept of Military Affairs, MoD pic.twitter.com/d4raPk9IjN
— ANI (@ANI) June 19, 2022
ಇಂದು ಅತಿಹೆಚ್ಚು ಸೈನಿಕರು 30ರ ವಯೋಮಾನದಲ್ಲಿದ್ದಾರೆ. ಆದರೆ ಸೇನೆಯ ಮೂರೂ ವಿಭಾಗಗಳಿಂದ ಪ್ರತಿ ವರ್ಷವೂ ಸುಮಾರು 17,600 ಮಂದಿ ಅವಧಿಗೆ ಮುನ್ನವೇ ನಿವೃತ್ತಿ ಪಡೆಯುತ್ತಿದ್ದಾರೆ. ನಿವೃತ್ತಿ ಬಳಿಕ ಏನು ಮಾಡುತ್ತೀರಿ? ಎಂದು ಯಾರೂ ಕೂಡ ಅವರನ್ನು ಕೇಳಲು ಹೋಗಿಲ್ಲ. ಅಗ್ನಿವೀರರು ಕೂಡ ಹಾಲಿ ಸೇವೆಯಲ್ಲಿರುವ ಸಾಮಾನ್ಯ ಸೈನಿಕರಂತೆಯೇ ಸಿಯಾಚಿನ್ ಹಾಗೂ ಇತರೆ ಕೆಲವು ಪ್ರದೇಶಗಳಲ್ಲಿ ಅದೇ ಭತ್ಯೆ ಪಡೆಯಲಿದ್ದಾರೆ. ಸೇವಾ ಪರಿಸ್ಥಿತಿಗಳಲ್ಲಿ ಅವರ ನಡುವೆ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ನೇಮಕಾತಿ ಪ್ರಮಾಣದಲ್ಲಿ ಹೆಚ್ಚಳ: 4-5 ವರ್ಷಗಳಲ್ಲಿ ತಮ್ಮ ಸೈನಿಕರ ನೇಮಕಾತಿ 50 – 60,000 ಆಗಲಿದೆ. ಕ್ರಮೇಣ 90,000 ದಿಂದ 1 ಲಕ್ಷಕ್ಕೆ ಏರಿಕೆಯಾಗಲಿದೆ. ಯೋಜನೆಯನ್ನು ವಿಶ್ಲೇಷಣೆಗೆ ಒಳಪಡಿಸಲು ಸಣ್ಣ ಪ್ರಮಾಣದಲ್ಲಿ ಆರಂಭ ಮಾಡುತ್ತಿದೆ ಎಂದು ವಿವರಿಸಿದ್ದಾರೆ.