ನವದೆಹಲಿ: ಜಾಗತಿಕ ಬೆಲೆ ಇಳಿಕೆಯ ಲಾಭವನ್ನು ಸಾಮಾನ್ಯ ಜನರಿಗೂ ವರ್ಗಾಯಿಸಲು ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ಸಚಿವಾಲಯ ಸಭೆ ನಡೆಸಿ, ಅಡುಗೆ ಎಣ್ಣೆಯ ಬೆಲೆಯನ್ನು 10-12 ರೂ. ವರೆಗೆ ಕಡಿತಗೊಳಿಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ.
ಹೌದು, ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಏಕೆಂದರೆ ಅಡುಗೆ ಎಣ್ಣೆ ತಯಾರಕ ಕಂಪನಿಗಳು ಜಾಗತಿಕ ಬೆಲೆಗಳೊಂದಿಗೆ ಸರಿದೂಗಿಸಿ, ಸಾಮಾನ್ಯ ಜನರು ಬಳಸುವ ಅಡುಗೆ ಎಣ್ಣೆಯ ದರವನ್ನು ಕಡಿತಗೊಳಿಸಲು ಒಪ್ಪಿಕೊಂಡಿವೆ. ಇದನ್ನೂ ಓದಿ: ಸತತ 3ನೇ ಬಾರಿ ಆರ್‌ಬಿಐ ರೆಪೊ ದರ ಹೆಚ್ಚಳ
ಭಾರತ ತನ್ನ ಎರಡನೇ ಮೂರು ಭಾಗದಷ್ಟು ಅಡುಗೆ ಎಣ್ಣೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಈ ಮೂಲಕ ಭಾರತ ಅಡುಗೆ ಎಣ್ಣೆಯ ಪ್ರಮುಖ ಆಮದುದಾರನಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆ ಇಂಡೋನೇಷ್ಯಾ ತಾಳೆ ಎಣ್ಣೆಯ ರಫ್ತನ್ನು ನಿಷೇಧಿಸಿದ್ದು, ಭಾರೀ ಬೆಲೆ ಏರಿಕೆಗೆ ಕಾರಣವಾಗಿತ್ತು. ಇದನ್ನೂ ಓದಿ: ನವೆಂಬರ್ 1ಕ್ಕೆ ಪುನೀತ್ ರಾಜ್ ಕುಮಾರ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ
ಇತ್ತೀಚಿನ ಬೆಳವಣಿಗೆಯಲ್ಲಿ ಇಂಡೋನೇಷ್ಯಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆಯನ್ನು ಸಮತೋಲನಕ್ಕೆ ತರುವಲ್ಲಿ ಸಹಾಯ ಮಾಡಲು ತನ್ನ ರಫ್ತಿನ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದೆ. ಇದರಿಂದಾಗಿ ಅಡುಗೆ ಎಣ್ಣೆಯ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.