ಮುಂಬೈ: ರಾಜ್ಯಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಶಾಕ್ ನೀಡಿದ್ದ ಬಿಜೆಪಿ ಈಗ ವಿಧಾನ ಪರಿಷತ್ ಚುನಾವಣೆಯಲ್ಲೂ ಶಾಕ್ ನೀಡಿದೆ. ಬಿಜೆಪಿ ತನ್ನ 5ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದರಿಂದ ಮಹಾರಾಷ್ಟ್ರದಲ್ಲಿ ಈಗ ರಾಜಕೀಯ ಚಟುವಟಿಕೆ ಬಿರುಸಾಗಿದೆ.
ಶಿವಸೇನೆಯ 56 ಶಾಸಕರ ಪೈಕಿ 4 ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಸದಸ್ಯರ ಪೈಕಿ 285 ಶಾಸಕರು ಮತದಾನ ಮಾಡಲು ಅರ್ಹತೆ ಪಡೆದಿದ್ದರು. ವಿಧಾನ ಸಭೆಯಲ್ಲಿ ಬಿಜೆಪಿ 106 ಶಾಸಕರ ಬಲವನ್ನು ಹೊಂದಿದೆ. ಆದರೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ 133 ಮತಗಳು ಬಿದ್ದಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಯೋಗ ದಿನ: ನಾಡಿನ ಜನತೆಗೆ ಯೋಗದ ಪ್ರಾಮುಖ್ಯತೆ ಸಾರಿದ ಗಣ್ಯರು
Advertisement
Advertisement
ಶಿವಸೇನೆ 56 ಶಾಸಕರ ಬೆಂಬಲವನ್ನು ಹೊಂದಿದ್ದು 52 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ 44 ಶಾಸಕರ ಬಲವನ್ನು ಹೊಂದಿದ್ದು 41 ಮತಗಳನ್ನು ಪಡೆದಿದೆ. ಆದರೆ ಎನ್‌ಸಿಪಿ 53 ಶಾಸಕರ ಬಲವನ್ನು ಹೊಂದಿದ್ದು 57 ಮಂದಿ ವೋಟ್ ಹಾಕಿದ್ದಾರೆ.
Advertisement
ಬಿಜೆಪಿ ಪರವಾಗಿ ಶಿವಸೇನೆ ಮತ್ತು ಪಕ್ಷೇತರರು ಮತ ಚಲಾಯಿಸಿದ್ದರಿಂದ ಐವರು ಪರಿಷತ್‌ಗೆ ಆಯ್ಕೆ ಆಗಿದ್ದಾರೆ. ಶಿವಸೇನೆ ಮತ್ತು ಎನ್‌ಸಿಪಿಯ ಇಬ್ಬರು ಮತ್ತು ಕಾಂಗ್ರೆಸ್‌ನ ಒಬ್ಬರು ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. ಇದನ್ನೂ ಓದಿ: ಚುನಾವಣೆ ಪ್ರಚಾರಕ್ಕೆ ಮಕ್ಕಳ ಬಳಕೆ – ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಪತ್ರ ಬರೆದ ಎನ್‌ಸಿಪಿಸಿಆರ್
Advertisement
ಪರಿಷತ್‌ಗೆ ಆಯ್ಕೆಯಾಗಲು ಅಭ್ಯರ್ಥಿ ಕನಿಷ್ಠ 26 ಮತಗಳನ್ನು ಪಡೆಯಬೇಕಿತ್ತು. ಬಿಜೆಪಿ ತನಗೆ ಬಹುಮತ ಇಲ್ಲದೇ ಇದ್ದರೂ 5ನೇ ಅಭ್ಯರ್ಥಿಯನ್ನು ಇಳಿಸಿದ್ದರೆ ಎಂವಿಎ ಸರ್ಕಾರ 6ನೇ ಅಭ್ಯರ್ಥಿಯನ್ನು ಇಳಿಸಿತ್ತು. ಹೀಗಿದ್ದರೂ ಬಿಜೆಪಿ ಅಡ್ಡ ಮತದಾನ ಮತ್ತು ಪಕ್ಷೇತರ ಶಾಸಕರನ್ನು ಸೆಳೆಯುವ ಮೂಲಕ 5 ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿತ್ತು.