ಬೆಂಗಳೂರು: ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಶುರುವಾಗಿದೆ. ರಾಜಕೀಯ ಧ್ರುವೀಕರಣದ ಹೆಸರಲ್ಲಿ ಆಪರೇಶನ್ ಕಮಲ-2 ಸದ್ದಿಲ್ಲದೇ ಆರಂಭವಾಗಿದೆ.
ಹೌದು, ಈಗಾಗಲೇ ಬಂಡಾಯ ಶಾಸಕರನ್ನು ಸೆಳೆದು ದೋಸ್ತಿ ಸರ್ಕಾರವನ್ನು ಉರುಳಿಸಿ ಅಧಿಕಾರವನ್ನು ಏರಿದ ಬಿಜೆಪಿ ಈಗ ಮತ್ತೊಂದು ಸುತ್ತಿನ ಆಪರೇಷನ್ ಕಮಲ ನಡೆಸಲು ಸಿದ್ಧತೆ ನಡೆಸುತ್ತಿದೆ. ಒಂದು ಪ್ರಮುಖ ಅಂಶವನ್ನು ಮಾತ್ರ ಮಾನದಂಡವನ್ನಾಗಿಟ್ಟುಕೊಂಡು ಈ ಬಾರಿ ಆಪರೇಷನ್ ನಡೆಸಲು ಬಿಜೆಪಿ ಕೈ ಹಾಕಿದೆ.
ಜೆಡಿಎಸ್, ಕಾಂಗ್ರೆಸ್ ಪೈಕಿ ಈ ಬಾರಿ ಸ್ಟಾರ್ ಶಾಸಕರಿಗೆ ಮಾತ್ರ ಗಾಳ ಹಾಕುತ್ತಿದೆ. ಡೈನಾಮಿಕ್ ಶಾಸಕರೇ ಬಿಜೆಪಿ ಟಾರ್ಗೆಟ್ ಆಗಿದ್ದು ಯಾವಾಗ ಪಕ್ಷ ಬಿಟ್ಟು ಬಂದರೂ ಆ ಶಾಸಕರು ಗೆಲ್ಲಬೇಕು. ವೈಯಕ್ತಿಕ ವರ್ಚಸ್ಸು, ಜಾತಿ ಹಿಡಿತ ಹೆಚ್ಚಾಗಿರಬೇಕು. ಅಂತಹ ಶಾಸಕರಿಗೆ ಮಾತ್ರ ಬಿಜೆಪಿ ಡೋರ್ ಓಪನ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.
ಜೆಡಿಎಸ್‍ನ 5, ಕಾಂಗ್ರೆಸ್ 4 ಜನ ಶಾಸಕರ ಮೇಲೆ ಬಿಜೆಪಿ ಕಣ್ಣು ಹಾಕಿದೆ. ಈಗಾಗಲೇ ಜಿಟಿ ದೇವೇಗೌಡರ ಜೊತೆ ಮಾತುಕತೆ ನಡೆಸಿರುವ ಬಿಜೆಪಿ ನಾಯಕರು ಬಳ್ಳಾರಿ ಕಾಂಗ್ರೆಸ್ ಶಾಸಕ ನಾಗೇಂದ್ರ ಬಗ್ಗೆಯೂ ಮೃದುಧೋರಣೆ ತೋರುತ್ತಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಳಿಕ ಉಪಚುನಾವಣೆಗೆ ಸ್ಪರ್ಧಿಸಿದವರ ಪೈಕಿ ಎಂಟಿಬಿ ನಾಗರಾಜ್ ಮತ್ತು ಎಚ್ ವಿಶ್ವನಾಥ್ ಮಾತ್ರ ಸೋತಿದ್ದಾರೆ. ಹೀಗಾಗಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ರಾಜ್ಯ ಬಿಜಪಿ ನಾಯಕರು ಮತ್ತೊಮ್ಮೆ ಆಪರೇಷನ್ ಕಮಲ ಮಾಡಲು ಮುಂದಾಗುತ್ತಿದ್ದಾರೆ.