ನಿಂತಿಲ್ಲ ದುನಿಯಾ ವಿಜಿ ಫ್ಯಾಮಿಲಿ ವಾರ್ – ಮನೆಗಾಗಿ ಪತಿಯ ವಿರುದ್ಧ ಮತ್ತೆ ದೂರು!

Public TV
1 Min Read
duniya vijay collage

ಬೆಂಗಳೂರು: ದುನಿಯಾ ವಿಜಯ್ ಅವರು ಮೊದಲ ಪತ್ನಿ ನಾಗರತ್ನ ಮನೆಗಾಗಿ ತಮ್ಮ ಪತಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

ನಾಗರತ್ನ ಮನೆಗಾಗಿ ವಿಜಿ ವಿರುದ್ಧ ದೂರು ನೀಡಲು ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಲಿದ್ದಾರೆ. ನಾಗರತ್ನ ಅವರು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷೀ ಬಾಯಿಯನ್ನು ಭೇಟಿಯಾಗಿ ತಮ್ಮ ಪತಿ ವಿಜಿ ವಿರುದ್ಧ ದೂರು ನೀಡಲಿದ್ದಾರೆ.

ವಿಜಿ ತನಗೆ ಹೇಳದೇ ತಮ್ಮ ಮನೆಯನ್ನು ಸ್ನೇಹಿತ, ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರಿಗೆ ಮಾರಿದ್ದಾರೆ ಎಂದು ನಾಗರತ್ನ ಆರೋಪಿಸುತ್ತಿದ್ದಾರೆ. ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯ ಹಿಂಭಾಗದಲ್ಲಿರೋ ದುನಿಯಾ ವಿಜಿ ಮನೆಯಿದ್ದು, ಈಗಾಗಲೇ ವಿಜಿ ತನ್ನ ಸ್ನೇಹಿತ ಸುಂದರ್ ಗೌಡಗೆ 4 ವರ್ಷದ ಹಿಂದೆ ಮನೆ ಮಾರಿದ್ದಾರೆ.

duniya vijay 2

ಸುಂದರ್ ಗೌಡಗೆ ವಿಜಿ ಮನೆ ಮಾರಿರುವ ವಿಚಾರ ತಿಳಿಯುತ್ತಿದ್ದಂತೆ ವಿಜಿ ವಿರುದ್ಧ ನಾಗರತ್ನ ಗರಂ ಆಗಿದ್ದಾರೆ. ನನ್ನ ಅನುಮತಿಯಿಲ್ಲದೆ ವಿಜಿ ಮನೆ ಮಾರಿದ್ದಾರೆ ಎಂದು ನಾಗರತ್ನ ಆರೋಪ ಮಾಡುತ್ತಿದ್ದಾರೆ. ನನಗೆ ಸರಿಯಾಗಿ ಜೀವನಾಂಶ ತಲುಪಿಲ್ಲ ಎಂದು ನಾಗರತ್ನ ಮಹಿಳಾ ಆಯೋಗದ ಮೋರೆ ಹೋಗಲು ಮುಂದಾಗಿದ್ದಾರೆ.

ನಾಗರತ್ನ ಇಂದು ಮಧ್ಯಾಹ್ನ 12 ಗಂಟೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷೀ ಬಾಯಿ ಭೇಟಿ ಮಾಡಲಿದ್ದಾರೆ. ಈಗಾಗಲೇ ನಾಗಲಕ್ಷೀ ಬಾಯಿ ಅವರಲ್ಲಿ ಮೌಖಿಕವಾಗಿ ನಾಗರತ್ನ ದೂರು ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article