ನವದೆಹಲಿ: ಕೇಂದ್ರ ಸರ್ಕಾರ ಎಲ್‍ಪಿಜಿ ಸಿಲಿಂಡರಿನ ಮೇಲೆ 2 ರೂಪಾಯಿ ಏರಿಸುವ ಮೂಲಕ ಜನಸಾಮಾನ್ಯರಿಗೆ ಮತ್ತೊಮ್ಮೆ ಬರೆ ಹಾಕಿದೆ.
ಎಲ್‍ಪಿಜಿ ಗೃಹಬಳಕೆ ಸಿಲಿಂಡರ್ ದರ ಏರಿಕೆ ಕುರಿತು ಕೇಂದ್ರ ತೈಲ ಸಚಿವಾಲಯ ಅಧಿಕೃತ ಆದೇಶ ಪ್ರಕಟಿಸಿದೆ. 14.2 ಕೆಜಿ ಹಾಗೂ 5 ಕೆಜಿಗಳ ಮೇಲೆ 2 ರೂಪಾಯಿ ಹೆಚ್ಚಳ ಮಾಡಿದೆ. ಹೀಗಾಗಿ ಸಬ್ಸಿಡಿ ಸಹಿತ 14.2 ಕೆಜಿ ಸಿಲಿಂಡರಿನ ಬೆಲೆ ಈ ಮೊದಲು ದೆಹಲಿಯಲ್ಲಿ 505.34 ಆಗಿದ್ದರೆ, ಈಗ 507.42ಕ್ಕೆ ಏರಿಕೆಯಾಗಿದೆ. ನವೆಂಬರ್ 1ರಂದು ಪ್ರತಿ ಸಿಲಿಂಡರಿನ ಮೇಲೆ 2.94 ರೂಪಾಯಿಯನ್ನು ಏರಿಕೆ ಮಾಡಿತ್ತು.
Advertisement
Advertisement
ಹೆಚ್ಚಳ ಏಕೆ?
ಕೇಂದ್ರ ಸರ್ಕಾರ ಎಲ್ಲಾ ಗ್ಯಾಸ್ ಏಜೆನ್ಸಿಗಳಿಗೆ 2017 ರಿಂದಲೂ 14.2 ಕೆಜಿ ಸಿಲಿಂಡರಿಗೆ 48.89 ರೂಪಾಯಿ ಹಾಗೂ 5 ಕೆಜಿ ಸಿಲಿಂಡರಿಗೆ 24.20 ರೂಪಾಯಿ ಕಮಿಷನ್ ನೀಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಾರಿಗೆ ಮತ್ತು ಕಾರ್ಮಿಕ ಭತ್ಯೆ ಹೆಚ್ಚಳದಿಂದಾಗಿ ಗ್ಯಾಸ್ ಏಜೆನ್ಸಿಗಳು ಕಮಿಷನ್ ದರವನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದವು. ಹೀಗಾಗಿ ಕೇಂದ್ರ ಸರ್ಕಾರ 2 ರೂಪಾಯಿಯನ್ನು ಹೆಚ್ಚಳ ಮಾಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/