ಮದ್ಯ ಪ್ರಿಯರಿಗೆ ಶಾಕ್ – ರಾಜ್ಯದಲ್ಲಿ ಮತ್ತೆ ಬಿಯರ್ ದರ ಏರಿಕೆ

Public TV
1 Min Read
Liquor Party 2 e1682567560961

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದಲೇ (ಫೆ.1) ಮದ್ಯದ ದರ ಏರಿಕೆಯಾಗಿದ್ದು (Liquor Price Hike), ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಂತಾಗಿದೆ.

ಅಬಕಾರಿ (Excise Department) ಸುಂಕವನ್ನು 185% ರಿಂದ 195%ಗೆ ಹೆಚ್ಚಿಸಿರುವ ಹಿನ್ನೆಲೆ, ಬಿಯರ್ ಬಾಟಲಿಗೆ 5 ರಿಂದ 12 ರೂ. ವರೆಗೂ ಬೆಲೆ ಏರಿಕೆಯಾಗಿದೆ. ಇದರಿಂದ ಕಳೆದ 6 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು 40 ರೂ.ಗಳಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

Liquor Party 1

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ (Congress) ನೇನೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಯರ್ ಮೇಲೆ ಶೇ.20 ರಷ್ಟು ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು. ಬಳಿಕ ಬಿಯರ್ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಪ್ರತಿ ಬಾಟಲ್ ಮೇಲೆ ಕನಿಷ್ಠ 10 ರೂ.ವರೆಗೆ ದರ ಏರಿಕೆ ಮಾಡಿದ್ದವು. ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ: ನಿಖಿಲ್ ಕುಮಾರಸ್ವಾಮಿ

ಇದೀಗ ಮತ್ತೆ ಸರ್ಕಾರ ಅಬಕಾರಿ ಸುಂಕ ಹೆಚ್ಚಿಸಿದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಬಿಯರ್ ದರ ಹೆಚ್ಚಳವಾಗಿದೆ. ಇದನ್ನೂ ಓದಿ: ಇಂಥದ್ದೇ ಡ್ರೆಸ್‌ ಹಾಕೊಳ್ಳಿ, ಬಟ್ಟೆ ಬಿಚ್ಚಾಕ್ಕೊಂಡು ಹೋಗಿ ಹೇಳಲ್ಲ- ದೇಗುಲಗಳಲ್ಲಿನ ಡ್ರೆಸ್‌ ಕೋಡ್‌ಗೆ ಸಿಎಂ ವಿರೋಧ

Share This Article