Connect with us

Districts

ಕೊಡಗಿನಲ್ಲಿ ಮತ್ತೆ ಧಾರಾಕಾರ ಮಳೆ

Published

on

ಮಡಿಕೇರಿ: ಮಹಾಮಳೆಗೆ ತತ್ತರಿಸಿ ಹೋಗಿದ್ದ ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆರಾಯ ತನ್ನ ಆರ್ಭಟ ತೋರಿಸಲು ಮುಂದಾಗಿದ್ದಾನೆ.

ಹವಾಮಾನ ಇಲಾಖೆ ಮಾಹಿತಿ ನೀಡಿದ ಬೆನ್ನಲ್ಲೇ, ಕೊಡಗು ಜಿಲ್ಲೆಯಾದ್ಯಂತ ಮಳೆಯಾಗಿದೆ. ಮಡಿಕೇರಿ ಸೇರಿದಂತೆ ಸುತ್ತ-ಮುತ್ತ ಪ್ರದೇಶಗಳಲ್ಲಿ ಇಂದು ಸುರಿದ ದಿಢೀರ್ ಮಳೆಗೆ ಜನ ಮತ್ತಷ್ಟು ಭೀತಿಗೊಂಡಿದ್ದಾರೆ. ಸತತವಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಗಿದೆ.

ಮಳೆಯ ಜೊತೆಗೆ ಗುಡುಗು ಇದ್ದ ಕಾರಣ ಮನೆ-ಮಠ ಕಳೆದುಕೊಂಡಿರುವ ನಿರಾಶ್ರಿತರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಇದಲ್ಲದೇ ಕೆಲವು ದಿನಗಳಿಂದ ಕೇವಲ ರಾತ್ರಿ ಹೊತ್ತು ಗುಡುಗು ಮಿಂಚು ಸಹಿತ ಮಳೆ ಬರುತ್ತಿರುವುದರಿಂದ ಕೊಡಗಿನ ಜನ ಭಯದ ವಾತಾವರಣದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *