ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ರಾತ್ರಿ ಕೂಡ ಬೆಂಕಿ ಬಿದ್ದಿದ್ದು ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ.
ಸಂಗಮ ಅರಣ್ಯ ವ್ಯಾಪ್ತಿಯ ಸೊಲಿಗೇರಿ, ಸಂಬಾಪುರ ಅರಣ್ಯ ಪ್ರದೇಶದ ಬಳಿ ರಾತ್ರಿಯ ವೇಳೆ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಸೊಲಿಗೇರಿ, ಹಾಗೂ ಸಂಬಾಪುರ ಅರಣ್ಯದಲ್ಲಿ ಬೆಂಕಿಯ ಆರ್ಭಟ ರಾತ್ರಿ ಜೋರಾಗಿದ್ದು, ಅಪಾರ ಪ್ರಮಾಣದ ವನ್ಯ ಸಂಪತ್ತು ನಾಶವಾಗಿದೆ.
ಇನ್ನೂ ಇದೀಗ ಬೆಳಗ್ಗಿನ ಜಾವ ಬೆಂಕಿಯ ನರ್ತನ ಶಾಂತವಾಗಿದ್ದು, ಮತ್ತೆ ಮಧ್ಯಾಹ್ನದ ವೇಳೆಗೆ ಕಾಣಿಸಿಕೊಳ್ಳುವ ಸಂಭವವಿದೆ. ಕಾವೇರಿ ವನ್ಯಜೀವಿಧಾಮದಲ್ಲಿ ಹೊತ್ತಿರುವ ಬೆಂಕಿ ನಂದಿಸಲು ಕಳೆದ ಎರಡು ದಿನಗಳಿಂದ ಅರಣ್ಯ ಸಿಬ್ಬಂದಿ ಜೊತೆ ಸ್ಥಳೀಯ ಸ್ವಯಂ ಸೇವಕರು ಕೈ ಜೋಡಿಸಿದ್ದು ಹರಸಾಹಸಪಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv