ಕೊಪ್ಪಳ: ಗಂಗಾವತಿ ತಾಲೂಕಿನ ಸೋಮನಾಳ ಬಳಿ ಇರುವ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡು ರೈತರಲ್ಲಿ ಆತಂಕ ಮೂಡಿಸಿದೆ.
ಕಳೆದ 2 ದಿನಗಳ ಹಿಂದೆ ಸೋಮನಾಳ ಬಳಿಯಿರುವ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಾಲುವೆ ದುರಸ್ತಿಮಾಡಲಾಗಿತ್ತು. ಆದರೆ ಈಗ ಮತ್ತೊಂದು ಕಡೆ ಕಾಲುವೆಯಲ್ಲಿ ಬಿರುಕು ಮೂಡಿರುವುದು ಸುತ್ತಮುತ್ತಲಿನ ರೈತರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಅಲ್ಲದೇ ಕಾಲುವೆಗೆ ನೀರು ಬಿಡುವ ಮುನ್ನ ಅಧಿಕಾರಿಗಳು ಸರಿಯಾದ ನಿರ್ವಹಣೆ ಮಾಡದೇ ಇರುವುದು ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮೇಲಿಂದ ಮೇಲೆ ಕಾಲುವೆ ಬಿರುಕು ಬಿಡುತ್ತಿರುವುದರಿಂದ ರೈತರು ಕಳಪೆ ಕಾಮಗಾರಿಯ ಕುರಿತು ದನಿ ಎತ್ತಿದ್ದಾರೆ.