ನವದೆಹಲಿ: ದೇಶಾದ್ಯಂತ ಸ್ಯಾನಿಟರಿ ನ್ಯಾಪ್‍ಕಿನ್ ಮೇಲಿನ ತೆರಿಗೆ ವಿಧಿಸಿರುವ ಕುರಿತು ವ್ಯಾಪಕ ಟೀಕೆ ಕೇಳಿ ಬಂದ ಬೆನ್ನಲ್ಲಿ ಜಿಎಸ್‍ಟಿ ತೆರಿಗೆಯಿಂದ ಸ್ಯಾನಿಟರಿ ನ್ಯಾಪ್‍ಕಿನನ್ನು ಹೊರಗಿಡಲಾಗಿದೆ.
ಕಳೆದ ಒಂದು ವರ್ಷದಿಂದಲೂ ಸ್ಯಾನಿಟಿರಿ ನ್ಯಾಪ್‍ಕಿನ್ ಮೇಲಿನ ತೆರವು ಮಾಡಲು ಹಲವರು ಆಗ್ರಹಿಸಿದ್ದರು. ಅದ್ದರಿಂದ ಈ ಹಿಂದೆ ವಿಧಿಸಲಾಗಿದ್ದ ಸ್ಯಾನಿಟರಿ ನ್ಯಾಪ್‍ಕಿನ್ಸ್ ಮೇಲಿನ ಶೇ.12ರಷ್ಟು ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಇದರೊಂದಿಗೆ ರಾಖಿ, ಪಾಶ್ಚರೀಕರಿಸಿದ ಹಾಲು, ಮಾರ್ಬಲ್ಸ್, ಕಟ್ಟಡ ಕಲ್ಲು & ಮರಮಟ್ಟುಗಳು ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರ ನೇತೃತ್ವದಲ್ಲಿ ನಡೆದ 28ನೇ ಜಿಎಸ್‍ಟಿ ಕೌನ್ಸಿಲ್ ಮಂಡಳಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
Advertisement
GST Council Decisions for the welfare of Consumers #TransformingIndia #GoodandSimpleGST pic.twitter.com/cbWQaWw4rU
— #TransformingIndia (@transformIndia) July 21, 2018
Advertisement
ಇನ್ನು 5% ರಷ್ಟು ತೆರಿಗೆಯನ್ನು 1 ಸಾವಿರ ರೂ.ವರೆಗಿನ ಪಾದರಕ್ಷೆ, ಆಮದಿತ ಯೂರಿಯಾ ಮೇಲೆ ವಿಧಿಸಲಾಗಿದೆ. ಬಿದಿರು, ಕರಕುಶಲ ವಸ್ತುಗಳು, ಹ್ಯಾಂಡ್ ಬ್ಯಾಗ್, ಕೈಯಿಂದ ಮಾಡಲಾದ ಲ್ಯಾಂಪ್‍ಗಳು, ಜ್ಯುವೆಲ್ಲರಿ ಬ್ಯಾಗ್ಸ್, ಬಣ್ಣಲೇಪಿತ ಮರದ ಬಾಕ್ಸ್ ಗಳು, ಗಾಜಿನ ಕಲಾಕೃತಿಗಳು, ಕಲ್ಲಿನ ಶಿಲೆಗಳು, ಅಲಂಕಾರಿಕ ಚೌಕಟ್ಟಿನ ಕನ್ನಡಿಗಳು ಇವುಗಳ ಮೇಲೆ ವಿಧಿಸಲಾಗಿದ್ದ 28% ರಷ್ಟು ತೆರಿಯನ್ನು 12% ಕ್ಕೆ ಇಳಿಕೆ ಮಾಡಲಾಗಿದೆ.
Advertisement
ಟಿವಿ, ಎಸಿ, ವಾಷಿಂಗ್ ಮಷೀನ್, ರೆಫ್ರಿಜಿರೇಟರ್, ವೀಡಿಯೋ ಗೇಮ್ಸ್, ವ್ಯಾಕ್ಯೂಮ್ ಕ್ಲೀನರ್ಸ್, ಜ್ಯೂಸ್ ಮಿಕ್ಸರ್, ಗ್ರೈಂಡರ್ಸ್, ಶೇವರ್& ಹೇರ್ ಡ್ರೈಯರ್ಸ್, ವಾಟರ್ ಕೂಲರ್ಸ್-ಹೀಟರ್ಸ್, ಲಿಥಿಯಂ ಬ್ಯಾಟರಿಗಳು, ಸೆಂಟ್, ಟಾಯ್ಲೆಟ್ ಸ್ಪ್ರೇ, ಚರ್ಮೋತ್ಪನ್ನಗಳು, ಪೇಂಟ್ಸ್, ವಾಲ್‍ಪುಟ್ಟಿ, ವಿಶೇಷ ಉದ್ದೇಶದ ವಾಹನಗಳು, ಟ್ರಕ್, ಟ್ರೈಲರ್ಸ್ ವಸುಗಳ ಮೇಲೆ 18% ರಷ್ಟು ತೆರಿಗೆಯನ್ನು ವಿಧಿಸಲಾಗಿದೆ. ಇನ್ನು 68 ಸೆಂಟಿ ಮೀಟರ್ ಅಂದರೆ 27 ಇಂಚಿನ ಟಿವಿ ಮೇಲೆ ವಿಧಿಸಲಾಗಿದ್ದ 28% ತೆರಿಗೆಯನ್ನು 18 % ಗೆ ಇಳಿಕೆ ಮಾಡಲಾಗಿದೆ.
Advertisement
ಮುಂದಿನ ಜಿಎಸ್‍ಟಿ ಕೌನ್ಸಿಲ್ ಸಭೆ ಆಗಸ್ಟ್ 4 ರಂದು ನಡೆಯಲಿದ್ದು, ಸಕ್ಕರೆ ಮೇಲಿನ ಸೆಸ್ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧಾರವಾರುವ ಇದೆ ಎನ್ನಲಾಗಿದೆ.
Today, in the GST Council Meeting, Govt. has provided multiple reliefs from GST taxation to services in various sectors, making it simpler, effective & efficient for the betterment of people of the country. #GoodandSimpleGST pic.twitter.com/i41234moid
— NarendraModi App (@NamoApp) July 21, 2018
Thankful to GST Council and Minister @PiyushGoyal for exempting Sanitary Napkins from GST; a welcome step towards encouraging menstrual hygiene among young girls and women. #GoodandSimpleGST pic.twitter.com/1jFsyTdsC4
— Smriti Z Irani (@smritiirani) July 21, 2018
Briefing media about the decisions taken at the 28th Meeting of GST Council, at a press conference in New Delhi
Watch #LIVE https://t.co/gFRZN59vYk
— Piyush Goyal (@PiyushGoyal) July 21, 2018
GST Council has exempted the GST on supply of services by an old age home which was 18% earlier. pic.twitter.com/7B4L0jwRuh
— BJP (@BJP4India) July 21, 2018