ಬೆಂಗಳೂರು: ಅಮೆರಿಕದ ವಾಲ್‍ಮಾರ್ಟ್ ಖರೀದಿಯಿಂದಾಗಿ ಫ್ಲಿಪ್ ಕಾರ್ಟ್ ನಲ್ಲಿರುವ ಕೆಲ ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಲಿದ್ದಾರೆ.
ಫ್ಲಿಪ್‍ಕಾರ್ಟ್ ನ ಸಂಸ್ಥಾಪಕ ಸಚಿನ್ ಬನ್ಸಾಲ್ 5.5%, ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್ 5% ಷೇರುಗಳನ್ನು ಹೊಂದಿದ್ದಾರೆ. ಇವರ ಜೊತೆ ಫ್ಲಿಪ್‍ಕಾರ್ಟ್ ನ ಉದ್ಯೋಗಿಗಳಾದ ಸಮೀರ್ ನಿಗಮ್, ಅಮೋದ್ ಮಾಳವಿಯಾ, ಸುಜೀತ್ ಕುಮಾರ್, ಅಂಕಿತ್ ನಗೋರಿ, ಮೇಕಿನ್ ಮಹೇಶ್ವರಿ, ಫೌನ್ಹಾವ್ ಗುಪ್ತಾ, ಅನಂತ ನಾರಾಯಣನ್ ಬಳಿ ಹೆಚ್ಚು ಷೇರುಗಳಿರುವ ಕಾರಣ ಅವರು ಕೋಟ್ಯಾಧಿಪತಿಗಳಾಗಲಿದ್ದಾರೆ.
Advertisement
ಸುಮಾರು 10 ಸಾವಿರ ಉದ್ಯೋಗಿಗಳು ಫ್ಲಿಪ್‍ಕಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದು, 3 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಹಾಗೂ ಮಾಜಿ ಉದ್ಯೋಗಿಗಳು ಷೇರುಗಳನ್ನು ಹೊಂದಿದ್ದಾರೆ. ಪ್ರತಿಯೊಂದು ಷೇರಿಗೆ 150 ಡಾಲರ್ (ಅಂದಾಜು 10 ಸಾವಿರ ರೂ.) ಮೌಲ್ಯವನ್ನು ನಿಗದಿ ಮಾಡಿದ ಪರಿಣಾಮ ಕೆಲ ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಖರೀದಿ ಬಳಿಕ ಷೇರುಗಳನ್ನು ವಾಪಸ್ ಕೊಂಡುಕೊಳ್ಳಲಾಗುವುದು ಎಂದು ಫ್ಲಿಪ್‍ಕಾರ್ಟ್ ಗ್ರೂಪ್ ಸಿಇಒ ಬಿನ್ನಿ ಬನ್ಸಾಲ್ ಘೋಷಿಸಿದ್ದಾರೆ.
Advertisement
ಫ್ಲಿಪ್‍ಕಾರ್ಟ್ ಕಂಪೆನಿಯ ನಿಯಮದ ಪ್ರಕಾರ 4 ವರ್ಷಗಳ ಮುಂಚಿತವಾಗಿ ಷೇರುಗಳನ್ನು ಮಾರಾಟ ಮಾಡುವಂತಿಲ್ಲ. ಹಾಗಾಗಿ ವಾಲ್‍ಮಾರ್ಟ್ ಜೊತೆಗಿನ ಒಪ್ಪಂದದ ಬಗ್ಗೆ ಹೊರಗೆ ಎಲ್ಲೂ ಮಾತನಾಡದಂತೆ ಫ್ಲಿಪ್‍ಕಾರ್ಟ್ ಕಂಪೆನಿ ನಿರ್ದೇಶಿಸಿದೆ.
Advertisement
ಫ್ಲಿಪ್‍ಕಾರ್ಟ್ ನ ಶೇ. 77 ಷೇರುಗಳನ್ನು ವಾಲ್‍ಮಾರ್ಟ್ ಖರೀದಿ ಮಾಡಿದ್ದು, ಉಳಿದ ಶೇ. 23 ಷೇರುಗಳು ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್, ಚೀನಾದ ಟೆನ್‍ಸೆಂಟ್ ಹೋಲ್ಡಿಂಗ್ಸ್, ಟೈಗರ್ ಗ್ಲೋಬಲ್ ಮ್ಯಾನೇಜ್‍ಮೆಂಟ್ ಮತ್ತು ಮೈಕ್ರೋಸಾಫ್ಟ್ ಕಾರ್ಪೋರೇಷನ್ ಮತ್ತು ಫ್ಲಿಪ್‍ಕಾರ್ಟ್ ಉದ್ಯೋಗಿಗಳ ಬಳಿಯಿದೆ.