ಗಾಂಧಿನಗರ: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೂತನ ಸಿಎಂ ಯಾರಾಗಲಿದ್ದಾರೆ ಎಂಬುದು ಕೂತುಹಲ ಮೂಡಿಸಿದೆ.
Advertisement
ಕರ್ನಾಟಕದಂತೆ ಗುಜರಾತ್‍ನಲ್ಲೂ ನಾಯಕತ್ವ ಬದಲಾವಣೆಯಾಗಿದ್ದು, ಇಂದು ಅಥವಾ ನಾಳೆ ನೂತನ ಸಿಎಂ ಆಯ್ಕೆ ಮಾಡವ ಸಾಧ್ಯತೆ ಇದೆ. ಮುಂದಿನ ಸಿಎಂ ಆಯ್ಕೆ ಮಾಡುವ ಬಗ್ಗೆ ಈಗಾಗಲೇ ಚರ್ಚೆ ನಡೆಯುತ್ತಿದ್ದು, ಪಟೇಲ್ ಸಮುದಾಯಕ್ಕೆ ಮಣೆ ಹಾಕಲು ಚಿಂತನೆ ನಡೆಸಲಾಗಿದೆ ಎಂದು ಅವರದಿಯಾಗಿದೆ. ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ರಾಜ್ಯ ಕೃಷಿ ಸಚಿವರಾದ ಆರ್.ಸಿ ಫಾಲ್ಡು, ಕೇಂದ್ರ ಸಚಿವರಾದ ಪುರುಷೋತ್ತಮ್ ರೂಪಾಲ, ಮನ್ಸುಖ್ ಮಾಂಡವೀಯ ಸೇರಿದಂತೆ ಕೆಲ ನಾಯಕರ ಹೆಸರುಗಳು ನೂತನ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ. ಇದನ್ನೂ ಓದಿ: ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ
Advertisement
Advertisement
ಗುಜರಾತ್‍ನಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಒಂದು ವರ್ಷವಷ್ಟೇ ಬಾಕಿ ಇದೆ. ಈ ನಡುವೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಯಾವುದೇ ಕಾರಣವನ್ನೂ ತಿಳಿಸದೇ ಸಿಎಂ ಬದಲಾವಣೆ ಮಾಡಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Advertisement
ಈ ಮಧ್ಯೆ ರಾಜೀನಾಮೆ ಬಳಿಕ ಮಾತನಾಡಿದ ವಿಜಯ್ ರೂಪಾನಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ನಾಯಕರಿಗೆ ಧನ್ಯವಾದ ತಿಳಿಸುತ್ತೇನೆ. ಗುಜರಾತ್ ಪ್ರಗತಿಗೆ ಹೊಸ ನಾಯಕತ್ವ ಬರಬೇಕೆಂದು ನಾನು ನಂಬುತ್ತೇನೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು. ಇದನ್ನೂ ಓದಿ: ನೈಟ್ ಕರ್ಫ್ಯೂ ಹೊತ್ತಲ್ಲಿ ಯುವಜನತೆಯ ಮೋಜು ಮಸ್ತಿ – ಪೊಲೀಸರ ಮುಂದೆಯೇ ಬಿಂದಾಸ್ ಸುತ್ತಾಟ
ಇದೀಗ ಹೊಸ ನಾಯಕರ ರೇಸ್ ನಲ್ಲಿ ಪಟೇಲ್, ಫಾಲ್ಡು, ರೂಪಾಲ, ಮಾಂಡವೀಯ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬುದನ್ನು ನಿರ್ಧರಿಸಿದ್ದಾರೆ ಹಾಗಾಗಿ ಅಚ್ಚರಿಯ ಹೆಸರು ಸೇರ್ಪಡೆಗೊಂಡರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಎಂಬ ಅಭಿಪ್ರಾಯವು ಕೇಳಿಬರುತ್ತಿದೆ.
2016 ರಲ್ಲಿ ಆನಂದಿ ಬೆನ್ ಪಟೇಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ, ನಿತಿನ್ ಪಟೇಲ್ ಮುಂದಿನ ಸಿಎಂ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಂತಿಮ ಕ್ಷಣದಲ್ಲಿ ರೂಪಾನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ನಿತಿನ್ ಪಟೇಲ್ ಅವರನ್ನೇ ಸಿಎಂ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಕೇಂದ್ರ ಹೈಕಮಾಂಡ್ ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ. ಇದನ್ನೂ ಓದಿ: ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್