Connect with us

Latest

ಗುಜರಾತ್ ಚುನಾವಣೆ ಆರೋಪ-ಪ್ರತ್ಯಾರೋಪ ಬಳಿಕ ಮುಖಾಮುಖಿಯಾದ್ರು ಮೋದಿ, ಮನಮೋಹನ್ ಸಿಂಗ್

Published

on

ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇಬ್ಬರು ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡಿದ್ರು. ಆದರೆ ಇಂದು ಸಂಸತ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ವೀರಮರಣ ಹೊಂದಿದ ಪೊಲೀಸರಿಗೆ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮದಲ್ಲಿ ಇವರಿಬ್ಬರು ಮುಖಾಮುಖಿ ಆಗಿದ್ದಾರೆ.

ಈ ವೇಳೆ ಭೇಟಿಯಾದ ನಾಯಕರು ಪರಸ್ಪರ ಕೈ ಮುಗಿದು ಹಸ್ತಲಾಘವ ಮಾಡಿದ್ದಾರೆ. ಈ ಬಳಿಕ ಕುಶಲೋಪಚರಿ ವಿಚಾರಿಸಿದ ನಂತರ ಇಬ್ಬರು ಮುಂದೆ ನಡೆದಿದ್ದಾರೆ.

ಮೋದಿ ಆರೋಪವೇನು?: ಗುಜರಾತ್ ಜನತೆಗೆ ಅನಮಾನ ಮಾಡಿದ ಅದೇ ಮಣಿಶಂಕರ್ ಅಯ್ಯರ್, ಪಾಕಿಸ್ತಾನದ ಹೈಕಮೀಷನರ್, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ, ಭಾರತದ ಮಾಜಿ ಉಪರಾಷ್ಟ್ರಪತಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುಪ್ತ ಸಭೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ಸಿಂಗ್ ತಿರುಗೇಟು: ಮಣಿಶಂಕರ್ ಅಯ್ಯರ್ ನಿವಾಸದಲ್ಲಿ ಸಭೆ ನಡೆದಿದ್ದು ನಿಜ. ಆದರೆ, ಗುಜರಾತ್ ಚುನಾವಣೆ ಬಗ್ಗೆ ಚರ್ಚೆ ನಡೆಸಿಲ್ಲ. ಪಾಕಿಸ್ತಾನದ ಜೊತೆ ರಾಜತಾಂತ್ರಿಕವಾಗಿ ಚರ್ಚೆ ನಡೆಸಿದ್ದೇವೆ. ಅಂದು ನಿವೃತ್ತ ಸೇನಾಧಿಕಾರಿಯೂ ಇದ್ದರು. ಮೋದಿ ಇಂತಹ ಹೇಳಿಕೆ ನೀಡಿ ಮಾಜಿ ಪ್ರಧಾನಿಗೆ ಅವಮಾನ ಮಾಡಿದ್ದಾರೆ. ಇದು ಸೋಲಿನ ಹತಾಶೆಯಲ್ಲಿ ಮಾಡಿರೋ ಸುಳ್ಳಿನ ಆರೋಪ. ಅವರು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಮನಮೋಹನ್ ಸಿಂಗ್ ಖಡಕ್ ತಿರುಗೇಟು ನೀಡಿದ್ದರು.

ಡಿಸೆಂಬರ್ 13, 2001ರಂದು ಐವರು ಉಗ್ರವಾದಿಗಳು ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ದೆಹಲಿಯ 6 ಜನ ಪೊಲೀಸರು ಮತ್ತು ಸಂಸತ್ ನ ಇಬ್ಬರು ರಕ್ಷಣಾ ಸಿಬ್ಬಂದಿ ವೀರ ಮರಣ ಅಪ್ಪಿದ್ದರು. ಅಂದಿನ ಆ ಕರಾಳ ದಿನ ನಡೆದು 16 ವರ್ಷಗಳು ಕಳೆದಿವೆ. ಹಾಗಾಗಿ ಅಂದು ವೀರಮರಣ ಹೊಂದಿದ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸಲು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಎಲ್ಲ ರಾಜಕೀಯ ಗಣ್ಯರು ವೀರ ಮರಣಹೊಂದಿದ ಎಲ್ಲರಿಗೂ ಭಾವಪೂರ್ಣ ನಮನಗಳನ್ನು ಸಲ್ಲಿಸಿದರು.

ಇನ್ನೂ ಸಂಸತ್ ಭವನದ ದಾಳಿಯ ರೂವಾರಿ ಅಫ್ಜಲ್‍ಗುರುವಿಗೆ ಫೆಬ್ರವರಿ 9, 2013ರಂದು ಗಲ್ಲು ಶಿಕ್ಷೆ ನೀಡಲಾಗಿತ್ತು.

Click to comment

Leave a Reply

Your email address will not be published. Required fields are marked *