ನವದೆಹಲಿ: ಉಕ್ರೇನ್ ರಷ್ಯಾ ಯುದ್ಧದಲ್ಲಿ ಯಾರ ಪರವು ನಿಲ್ಲದ ತಟಸ್ಥ ಧೋರಣೆ ಅನುಸರಿಸಿದ ಭಾರತ ಜೊತೆ ಯುರೋಪಿಯನ್ ಒಕ್ಕೂಟ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಯುರೋಪಿಯನ್ ಒಕ್ಕೂಟ ಹಾಗೂ ಭಾರತ ತಮ್ಮ ವ್ಯಾಪಾರವನ್ನು ವಿಸ್ತರಿಸಲು ವ್ಯಾಪಾರ ಹಾಗೂ ತಂತ್ರಜ್ಞಾನ ಮಂಡಳಿಯನ್ನು ಸ್ಥಾಪಿಸಲು ಒಪ್ಪಿಕೊಂಡಿವೆ.
ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ಸುರ್ಸುಲಾ ವಾನ್ ಡೆರ್ ಲೇಯೆನ್ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷಿಯ ಮಾತುಕತೆಯಲ್ಲಿ ವ್ಯಾಪಾರ, ಹವಾಮಾನ, ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರಗಳನ್ನು ಹೆಚ್ಚಿಸಿಕೊಳ್ಳುವುದಾಗಿ ಉಭಯ ರಾಷ್ಟ್ರಗಳು ಒಪ್ಪಂದಗಳನ್ನು ಮಾಡಿಕೊಂಡವು.
Advertisement
Energy security is one of the most pressing topics for India and Europe.
The EU will diversify away from Russian fossil fuels and will invest heavily in clean renewable energy.
So ???????????????? cooperation on solar and green hydrogen is key.#GlobalGateway can play a crucial role here. pic.twitter.com/StsFj7T5UV
— Ursula von der Leyen (@vonderleyen) April 25, 2022
Advertisement
ಈ ಮೊದಲು ಯುರೋಪಿಯನ್ ಒಕ್ಕೂಟ ವ್ಯಾಪಾರ, ತಂತ್ರಜ್ಞಾನ ಮಂಡಳಿಯನ್ನು ಅಮೆರಿಕದ ಜೊತೆ ಮಾಡಿಕೊಂಡಿತ್ತು. ಈಗ ಈ ರೀತಿ ಒಪ್ಪಂದ ಮಾಡಿಕೊಂಡ ಎರಡನೇ ದೇಶ ಭಾರತವಾಗಿರುವುದು ವಿಶೇಷ. ಅದರಲ್ಲೂ ರಷ್ಯಾ ವಿರೋಧಿ ನಿಲುವು ತೆಗೆದುಕೊಳ್ಳದೇ ಇರುವ ಸಮಯದಲ್ಲೇ ಈ ಮಹತ್ವದ ಒಪ್ಪಂದ ನಡೆದಿರುವುದು ಇನ್ನೊಂದು ವಿಶೇಷ. ಸೋಮವಾರ ಭಾರತದ ಈ ನಿರ್ಧಾರವನ್ನು ಯುರೋಪಿಯನ್ ಯೂನಿಯನ್ ಒಪ್ಪಿಕೊಂಡಿದೆ.
Advertisement
ಡೆರ್ ಲೇಯೆನ್ ಹೇಳಿದ್ದೇನು?
ಈ ವೇಳೆ ಮಾತನಾಡಿದ ವಾನ್ ಡೆರ್ ಲೇಯೆನ್, ಯುಇ ಇಲ್ಲಿವರೆಗೆ ಅಮೆರಿಕದೊಂದಿಗೆ ವ್ಯಾಪಾರ ಹಾಗೂ ತಂತ್ರಜ್ಞಾನಗಳಲ್ಲಿ ಒಕ್ಕೂಟವನ್ನು ಏರ್ಪಡಿಸಿಕೊಂಡಿತ್ತು. ಇದೀಗ ಬಹು ಮುಖ್ಯವಾದ ಹಾಗೂ ನಮ್ಮ ಎರಡನೇ ಒಕ್ಕೂಟವನ್ನು ಭಾರತದೊಂದಿಗೆ ಸ್ಥಾಪಿಸುವ ಸಮಯ ಎಂದರು. ಭಾರತ ಹಾಗೂ ಯುರೋಪಿಯನ್ ಯೂನಿಯನ್‌ನ ಅಂತರಾಷ್ಟ್ರೀಯ ಸಂಬಂಧದ 60ನೇ ವಾರ್ಷಿಕೋತ್ಸವದ ಸಮಯದಲ್ಲಿ ಈ ಹೊಸ ಒಕ್ಕೂಟ ಬಹು ಮುಖ್ಯವಾದುದು ಎಂದು ಹೇಳಿದರು. ಇದನ್ನೂ ಓದಿ: ಮುಗಿಯದ ವಿಚಾರಣೆ – BBMP ಚುನಾವಣೆ ಮತ್ತಷ್ಟು ವಿಳಂಬ
Advertisement
The EU is India’s 3rd most important trade partner and one of its main investors. And we can do so much more.
Our teams will soon begin negotiations on trade and investment agreements.@narendramodi pic.twitter.com/zGSKsfxGmh
— Ursula von der Leyen (@vonderleyen) April 25, 2022
ಭಾರತ ಹಾಗೂ ಯುರೋಪ್ ರಾಷ್ಟ್ರಗಳಿಗೆ ಶಕ್ತಿ ಸುರಕ್ಷತೆ ಒಂದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಯುರೋಪ್ ಈ ಹಿಂದೆ ರಷ್ಯಾದಿಂದ ಪಡೆಯುತ್ತಿದ್ದ ಇಂಧನಗಳಿಂದ ದೂರ ಉಳಿಯಲು ಇಷ್ಟಪಡುತ್ತಿದ್ದು, ಇದೀಗ ಹೊಸ, ಶುದ್ಧ ಹಾಗೂ ನವೀಕರಿಸಬಹುದಾದ ಶಕ್ತಿಗಳೆಡೆ ಗಮನ ಹರಿಸುತ್ತಿದ್ದೇವೆ. ಇದರಲ್ಲಿ ಸೌರ ಹಾಗೂ ಜಲಜನಕದ ಮೇಲೆ ಭಾರತ ಹಾಗೂ ಯುರೋಪ್‌ನ ಸಹಕಾರ ಪ್ರಮುಖವಾಗಿದೆ.
ಈ ಸಹಕಾರದಲ್ಲಿ #GlobalGateway ನಿರ್ಣಾಯಕ ಪಾತ್ರ ವಹಿಸಲಿದೆ. ಯುರೋಪ್ ಭಾರತದ 3ನೇ ಪ್ರಮುಖ ವ್ಯಾಪಾರ ಪಾಲುದಾರ ಹಾಗೂ ಅದರ ಪ್ರಮುಖ ಹೂಡಿಕೆದಾರರಲ್ಲಿ ಒಂದಾಗಿದೆ. ನಾವು ಶೀಘ್ರದಲ್ಲೇ ಭಾರತದೊಂದಿಗೆ ವ್ಯಾಪಾರ ಹಾಗೂ ಹೂಡಿಕೆ ಒಪ್ಪಂದಗಳ ಕುರಿತು ಮಾತುಕತೆ ಪ್ರಾರಂಭಿಸಲಿದ್ದೇವೆ. ಇದನ್ನೂ ಓದಿ: ಬುಧವಾರ ಎಲ್ಲ ರಾಜ್ಯಗಳ ಸಿಎಂ ಜೊತೆ ಮೋದಿ ತುರ್ತು ಸಭೆ
Strengthening the ???????????????? partnership is a key priority for this decade.
We will step up cooperation in trade, technology and security.
This is why I’m pleased that @narendramodi and I will establish an ???????????????? Trade and Technology Council.
— Ursula von der Leyen (@vonderleyen) April 25, 2022
ಭಾರತ ಹಾಗೂ ಯುರೋಪ್‌ನ ಪಾಲುದಾರಿಕೆಯನ್ನು ಬಲಪಡಿಸುವುದು ಈ ದಶಕದ ಪ್ರಮುಖ ಆದ್ಯತೆಯಾಗಿದೆ. ನಾವು ವ್ಯಾಪಾರ, ತಂತ್ರಜ್ಞಾನ ಹಾಗೂ ಭದ್ರತೆಯಲ್ಲಿ ಸಹಕಾರವನ್ನು ಹೆಚ್ಚಿಸುತ್ತೇವೆ. ಈ ವಿಚಾರವಾಗಿ ನಾನು ಅತ್ಯಂತ ಸಂತಸಗೊಂಡಿದ್ದೇನೆ ಹಾಗೂ ಭಾರತ-ಯುರೋಪ್‌ನ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯನ್ನು ಸ್ಥಾಪಿಸುತ್ತೇನೆ.
ಕಳೆದ ವಾರವಷ್ಟೇ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಆಗಮಿಸಿದ್ದರು. ಇವರು ಮರಳಿದ ಎರಡು ದಿನದಲ್ಲಿ ವಾನ್ ಡೆರ್ ಲೇಯೆನ್ ಭಾರತಕ್ಕೆ ಆಗಮಿಸಿ ಮಹತ್ವದ ಒಪ್ಪಂದ ಮಾಡಿದ್ದಾರೆ.