ಮುಂಬೈ: ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಕಥೆ ಆಧರಿಸಿ ಬಾಲಿವುಡ್‍ನಲ್ಲಿ ಉರಿ ಅನ್ನೋ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಇದೀಗ, ಪುಲ್ವಾಮಾದ ದಾಳಿಯ ನಂತರದ ಘಟನಾವಳಿ ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ಕಥೆ ಆಧರಿಸಿಯೂ ಚಿತ್ರ ನಿರ್ಮಿಸಲು ಬಾಲಿವುಡ್ ನಿರ್ಮಾಪಕರು ಹಾಗೂ ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ, ಮೇಜರ್ ಸಂದೀಪ್ ಉನ್ನೀಕೃಷ್ಣನ್ ಚಿತ್ರ ನಿರ್ಮಿಸಲು ತೆಲುಗು ನಟ ಮಹೇಶ್ ಬಾಬು ಹಣ ಹೂಡ್ತಿದ್ದಾರೆ.
Advertisement
ನಮ್ಮ ಧೀರ ಯೋಧರ ಬಗ್ಗೆ ದೇಶದ ಹಲವು ಭಾಷೆಗಳಲ್ಲಿ ಈಗಾಗಲೇ ಹಲವು ಚಿತ್ರಗಳು ಮೂಡಿ ಬಂದಿವೆ. ಅದರಲ್ಲಿ ಮ್ಯಾನ್ಮಾರ್ ಹಾಗೂ ಪಾಕಿಸ್ತಾನಕ್ಕೆ ನುಗ್ಗಿ ಮಾಡಿದ ಸರ್ಜಿಕಲ್ ಸ್ಟ್ರೈಕ್ ಮುಖ್ಯ. ಪಾಕ್ ಮೇಲೆ ಮಾಡಿದ ಸರ್ಜಿಕಲ್ ಸ್ಟ್ರೈಕ್ ಮಾತ್ರ ಭಾರೀ ಚರ್ಚೆಗೀಡಾಗಿತ್ತು. ಈ ಕುರಿತು ರೆಡಿಯಾದ ಚಿತ್ರವೇ `ಉರಿ – ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರ. ಚಿತ್ರಕ್ಕೆ ರಾಷ್ಟ್ರವ್ಯಾಪಿ ಮೆಚ್ಚುಗೆ ಪ್ರಶಂಸೆ ಸಿಕ್ಕಿದ್ದು, ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸಿದೆ.
Advertisement
Advertisement
ಫೆಬ್ರವರಿ 14ರಂದು ಪುಲ್ವಾಮಾದ ಅವಂತಿಪೋರ್‍ನಲ್ಲಿ ಜೈಶ್ ಉಗ್ರರು ಆತ್ಮಾಹುತಿ ದಾಳಿಯಲ್ಲಿ 40 ಯೋಧರನ್ನು ಕೊಂದಿದ್ದು, ಆನಂತರ ಬೆಳವಣಿಗೆಯಾದ ಪಾಕಿಸ್ತಾನದ ಜೈಶ್ ಉಗ್ರರ ಕಾರಾಸ್ಥಾನ ಬಾಲಕೋಟ್, ಚಕೋಟಿ, ಮುಜಾಫರ್‍ಬಾದ್ ಉಗ್ರರ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್, 300ಕ್ಕೂ ಅಧಿಕ ಉಗ್ರರನ್ನು ಸದೆಬಡೆದಿರುವ ಘಟನೆ ಹಾಗೂ ಅದರ ಬೆನ್ನಲ್ಲೇ ಐಎಎಫ್ ಪೈಲಟ್ ಅಭಿನಂದನ್ ಈಗ ಪಾಕ್ ಮುಷ್ಟಿಯಲ್ಲಿ ಸಿಲುಕಿರೋದು ಎಲ್ಲವೂ ಬೆಳ್ಳಿತೆರೆ ಮೇಲೆ ಮೂಡಿ ಬರಲಿದೆ.
Advertisement
ಈ ಕಥೆಯಾಧರಿಸಿ ಬಾಲಿವುಡ್ ನಿರ್ಮಾಪಕರ ನಡುವೆಯೇ ಪೈಪೋಟಿ ಶುರುವಾಗಿದೆ. ನಿರ್ದೇಶಕರಾದ ಪ್ರತೀಶ್ ನಂದಿ ಹಾಗೂ ಅನುರಾಗ್ ಕಶ್ಯಪ್ ಅವರು ಮೊದಲ ಸಾಲಿನಲ್ಲಿದ್ದಾರೆ. ಆದ್ರೆ, ಚಿತ್ರ ನಿರ್ಮಾಣಕ್ಕೆ ಅನುಮತಿ ಸಿಗುತ್ತಾ ಅನ್ನುವ ಪ್ರಶ್ನೆಯೂ ಮೂಡಿದೆ.
ಟಾಲಿವುಡ್ ಖ್ಯಾತ ನಟ ಮಹೇಶ್ ಬಾಬು ಸಹ ಯೋಧರ ಕಥೆ ಆಧರಿಸಿ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. 26/11ನ ಮುಂಬೈ ದಾಳಿಯಲ್ಲಿ ಹುತಾತ್ಮರಾದ ಕನ್ನಡಿಗ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬಲಿದಾನದ ಚಿತ್ರವನ್ನು ನಿರ್ಮಾಪಕನಾಗಿ ತೆರೆಗೆ ತರಲು ಮಹೇಶ್ ಮುಂದಾಗಿದ್ದಾರೆ. ಶೇಷ ಅಡಿವಿ ನಾಯಕನಾಗಿರೋ ಈ ಚಿತ್ರ ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv