ನವದೆಹಲಿ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಇನ್ಮುಂದೆ ಆಹಾರ ಮಳಿಗೆ, ಹೊಟೇಲ್ ಹಾಗೂ ಬೀದಿ ವ್ಯಾಪಾರಿಗಳ ಮಳಿಗೆಗಳ ಹೆಸರು ಪದರ್ಶನ ಕಡ್ಡಾಯ ಎಂದು ಇಲ್ಲಿನ ನಗರಾಭಿವೃದ್ಧಿ ಸಚಿವ ವಿಕ್ರಮಾದಿತ್ಯ ಸಿಂಗ್ (Vikramaditya Singh) ಆದೇಶ ಹೊರಡಿಸಿದ್ದಾರೆ.
ಇತ್ತೀಚಿಗಷ್ಟೇ ಉತ್ತರ ಪ್ರದೇಶ (Uttara Pradesh) ಸರ್ಕಾರವು ಬೀದಿ ಬದಿಯ ವ್ಯಾಪಾರಿಗಳು ತಮ್ಮ ಹೆಸರು ಹಾಗೂ ವ್ಯಾಪಾರದ ಗುರುತನ್ನು ಅಳವಡಿಸುವುದು ಕಡ್ಡಾಯವೆಂದು ಕಟ್ಟುನಿಟ್ಟಾದ ಆದೇಶವನ್ನು ಹೊರಡಿಸಿತ್ತು.ಇದನ್ನೂ ಓದಿ: ಸೆ.27ರಂದು ತುಮಕೂರು- ಯಶವಂತಪುರ ಮೆಮು ರೈಲಿಗೆ ಚಾಲನೆ
ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ವಿಕ್ರಮಾದಿತ್ಯ ಸಿಂಗ್ ಮಾತಾನಾಡಿ, ಇತ್ತೀಚಿಗೆ ರಾಜಾದ್ಯಂತ ಜನರು ಇದಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ವ್ಯಕ್ತಪಡಿಸಿದ್ದರು. ಅವುಗಳನ್ನು ಗಮನದಲ್ಲಿಟ್ಟುಕೊಂಡು ಮಂಗಳವಾರ ನಡೆದ ನಗರಾಭಿವೃದ್ಧಿ ಇಲಾಖೆ (Urban Development Department) ಹಾಗೂ ಶಿಮ್ಲಾ ಮಹಾನಗರ ಪಾಲಿಕೆ (Shimla Municipal Corporation) ಸಭೆಯಲ್ಲಿ ನಿರ್ಧಾರಿಸಿದೆ. ಸರಕು ಸಾಮಗ್ರಿಗಳ ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಆಹಾರ ಪದಾರ್ಥ ಮಾರಾಟಗಾರರು ತಮ್ಮ ಗುರುತನ್ನು ಪ್ರದರ್ಶಿಸಬೇಕೆಂದು ಸಚಿವರು ಆದೇಶದಲ್ಲಿ ತಿಳಿಸಿದ್ದಾರೆ.
ತಿನ್ನುವ ಆಹಾರವು ಶುಚಿಯಾಗಿದೆಯಾ? ಗುಣಮಟ್ಟವಾಗಿದೆಯಾ? ಎನ್ನುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳುತ್ತದೆ. ಜೊತೆಗೆ ಇದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food and Civil Supplies Department) ಪರಿಶೀಲಿಸುತ್ತದೆ ಎಂದು ತಿಳಿಸಿದ್ದಾರೆ.
ತಮ್ಮ ಗುರುತನ್ನು ಪ್ರದರ್ಶಿಸುವಾಗ ನೋಂದಣಿ ಸಂಖ್ಯೆ ಹಾಗೂ ವ್ಯಾಪಾರಿಯ ಭಾವಚಿತ್ರವನ್ನು ಪದರ್ಶಿಸಬೇಕೆಂದು ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾದಾಗ ಕ್ರಮ ಕೈಗೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.ಇದನ್ನೂ ಓದಿ: ಸಿಎಂ, ಪುತ್ರ ಯತೀಂದ್ರ, ಪತ್ನಿ ಪಾರ್ವತಿ ಮೇಲೆ ಎಫ್‌ಐಆರ್ ದಾಖಲಿಸಿ: ಪ್ರದೀಪ್ ಕುಮಾರ್ ದೂರು