ಮಂಗಳೂರು: ವಿವಿ ಬಳಿಕ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಯಲ್ಲಿ ಹಿಜಬ್ ವಿವಾದ ಆರಂಭವಾಗಿದೆ.
ಒಂದು ಕೋಮಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ವರದಿ ಮಾಡಲು ಬಂದ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳ ಮೇಲೆ ಕೂಡ ವಿದ್ಯಾರ್ಥಿಗಳು ಹಲ್ಲೆ ನಡೆಸಲು ಯತ್ನಿಸಿದ್ದಾರೆ.
Advertisement
Advertisement
ವರದಿಗಾಗಿ ಮಾಡಿದ ವೀಡಿಯೋವನ್ನು ವಿದ್ಯಾರ್ಥಿಗಳು ಬಲತ್ಕಾರವಾಗಿ ಡಿಲೀಟ್ ಮಾಡಿಸಿದ್ದಾರೆ. ಅಲ್ಲದೆ ಕಾಲೇಜಿನ ಘಟನೆಯನ್ನು ವರದಿ ಮಾಡದಂತೆ ವಿದ್ಯಾರ್ಥಿಗಳು ತಾಕೀತು ಮಾಡಿದ್ದಾರೆ. ಈ ಮೂಲಕ ಮಾಧ್ಯಮಗಳ ಮೇಲೆ ವಿದ್ಯಾರ್ಥಿಗಳು ಗೂಂಡಾಂಗಿರಿ ನಡೆಸಿದ ಪ್ರಸಂಗ ನಡೆದಿದೆ. ಇದನ್ನೂ ಓದಿ: ತನ್ನನ್ನು ತಾನೇ ಮದುವೆಯಾಗುತ್ತಿದ್ದಾಳೆ ಭಾರತದ ಮೊದಲ ಯುವತಿ – ಗೋವಾದಲ್ಲಿ ಹನಿಮೂನ್
Advertisement
Advertisement
ಇತ್ತ ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ಹಿಜಾಬ್ ವಿವಾದ ಸಂಬಂಧ ನಿರ್ಬಂಧದ ಮಧ್ಯೆ ಮತ್ತೆ ಇಂದು ಹಿಜಬ್ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿದ್ದಾರೆ. ವಿವಿ ಘಟಕ ಕಾಲೇಜಿಗೆ ಆಗಮಿಸಿದ 16 ಮಂದಿ ವಿದ್ಯಾರ್ಥಿನಿಯರು ಆಗಮಿಸಿದ್ದಾರೆ. ಈ ವೇಳೆ ಪ್ರಾಂಶುಪಾಲೆ ಡಾ.ಅನುಸೂಯ ರೈ ಮತ್ತೆ ತರಗತಿ ಎಂಟ್ರಿಗೆ ಪ್ರವೇಶ ನಿರಾಕರಿಸಿದ್ದಾರೆ.
ಪ್ರಾಂಶುಪಾಲೆ ನಿರಾಕರಿಸಿದ ಹಿನ್ನೆಲೆ ಕಾಲೇಜು ಲೈಬ್ರರಿ ಬಳಿ ವಿದ್ಯಾರ್ಥಿನಿಯರು ಕುಳಿತಿದ್ದಾರೆ. ಸೋಮವಾರ ಡಿಸಿ ಜೊತೆ ಸಭೆ ಬಳಿಕ ವಿದ್ಯಾರ್ಥಿನಿಯರು ಕಾಲೇಜಿನತ್ತ ಬಂದಿರಲಿಲ್ಲ. ಆದರೆ ಇಂದು ಮತ್ತೆ ಕಾಲೇಜಿಗೆ ಆಗಮಿಸಿ ಹೈಡ್ರಾಮಾ ನಡೆಸಿದ್ದಾರೆ.