ಬೆಂಗಳೂರು: ಜೆಡಿಎಸ್ ನಿಂದ ಹೊರಬಂದ ನಂತರ ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಶಾಸಕ ಜಮೀರ್ ಅಹ್ಮದ್ ಹಾಗು ಹೆಚ್.ಡಿ.ಕುಮಾರಸ್ವಾಮಿ ಮುಖಾಮುಖಿ ಆಗಿದ್ದಾರೆ. ರಾಜ್ಯದಲ್ಲಿ ಚುನಾವಣಾ ಫಲಿತಾಂಶದ ಬಳಿಕ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರಿಂದ ಕಾಂಗ್ರೆಸ್ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಬೆಂಬಲ ನೀಡಿದೆ.
ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣ ಮುಂದುವರೆದಿದ್ದು, ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ರಾಮನಗರ ಜಿಲ್ಲೆಯ ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಇರಿಸಲಾಗಿದೆ. ಈ ವೇಳೆಯಲ್ಲಿ ಕುಮಾರಸ್ವಾವಿ ಮತ್ತು ಜಮೀರ್ ಅಹ್ಮದ್ ಮುಖಾಮುಖಿ ಆಗಿದ್ದಾರೆ.
Advertisement
Advertisement
ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ಕುಮಾರಸ್ವಾಮಿ ಅವರನ್ನು ರಾಜಕೀಯದಲ್ಲಿ ನಾನು ಅವರನ್ನ ವಿರೋಧ ಮಾಡಿದ್ದೆ, ಅವರು ನನ್ನನ್ನು ವಿರೋಧ ಮಾಡಿದ್ದರು ಅಷ್ಟೇ. ಈಗ ಜೆಡಿಎಸ್ ಜೊತೆಗೆ ಸರ್ಕಾರ ರಚಿಸಲು ಪಕ್ಷ ತೀರ್ಮಾನಿಸಿದೆ. ನಾವು ಅದಕ್ಕೆ ಒಪ್ಪಿಕೊಂಡಿದ್ದೇವೆ. ವೇಳೆ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಲ್ಲ. ಇದೇ ಪಕ್ಷದಲ್ಲೇ ಇರುತ್ತೇನೆ ಅಂತ ಜಮೀರ್ ಸ್ಪಷ್ಟಪಡಿಸಿದ್ರು.
Advertisement
ಚುನಾವಣಾ ಫಲಿತಾಂಶದ ದಿನದಂದು ಗೆಲುವಿನ ಬಳಿಕ ಜಮೀರ್ ಅಹ್ಮದ್, ನಾನು ಇಂದು ಜೆಡಿಎಸ್ ಬಿಟ್ಟು ಬಂದಿದ್ದರ ಬಗ್ಗೆ ಸಮರ್ಥಿಸಿಕೊಳ್ಳುತ್ತೇನೆ. ಕ್ಷೇತ್ರದ ಜನ ನನ್ನನ್ನು ರಾಜಕೀಯ ವ್ಯಕ್ತಿಯಾಗಿ ನೋಡಿಲ್ಲ, ಮನೆಯ ಮಗನಂತೆ ನೋಡಿ ಆಶೀರ್ವದಿಸಿ ಗೆಲ್ಲಿಸಿದ್ದಾರೆ ಅಂತಾ ಹೇಳಿದ್ರು.