ನವದೆಹಲಿ: ಟೊಮೆಟೊ (Tomato) ಜೊತೆಗೆ ಈಗ ಹೂಕೋಸು (Cauliflower), ಶುಂಠಿ (Ginger), ಹಸಿರು ಮೆಣಸಿನಕಾಯಿ (Green Chilli) ಬೆಲೆಯೂ ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.
ಭಾರೀ ಮಳೆ, ಪೂರೈಕೆಯಲ್ಲಿ ಉಂಟಾಗಿರುವ ಅಡೆತಡೆ ಕಾರಣಕ್ಕೆ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ. ಒಂದಿಲ್ಲೊಂದು ತರಕಾರಿ ಬೆಲೆ ಹೆಚ್ಚುತ್ತಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಕೆಜಿ ಟೊಮೆಟೊಗೆ 60 ರೂ.: ಅರ್ಧ ಬೆಲೆಗೆ ಪಡಿತರ ಕೇಂದ್ರಗಳಲ್ಲೇ ತಮಿಳುನಾಡು ಸರ್ಕಾರದಿಂದ ಮಾರಾಟ
Advertisement
Advertisement
ಟೊಮೆಟೊ ಬೆಲೆ ನೂರರ ಗಡಿ ದಾಟಿದೆ. ಪ್ರಸ್ತುತ ದೆಹಲಿಯಲ್ಲಿ ಟೊಮೆಟೋ ಕೆಜಿಗೆ 145 ರೂ.ಗೆ ಮಾರಾಟವಾಗುತ್ತಿದೆ. ಒಂದು ಹೂಕೋಸು ಬೆಲೆ 80 ರೂ., ಕೆಜಿ ಶುಂಠಿಗೆ 380 ರೂ. (100 ಗ್ರಾಂಗೆ 38 ರೂ.) ಮತ್ತು ಹಸಿರು ಮೆಣಸಿನಕಾಯಿ ಕೆಜಿಗೆ 170 ರೂ.ಗೆ ಮಾರಾಟವಾಗುತ್ತಿದೆ.
Advertisement
ದೇಶವು ಹಣದುಬ್ಬರ ಕಡಿಮೆಯಾಗಬಹುದೆಂದು ನಿರೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಬೆಲೆ ಏರಿಕೆ ಬಿಕ್ಕಟ್ಟು ತಲೆದೋರಿದೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಏಪ್ರಿಲ್‌ನಲ್ಲಿ 4.7% ರಿಂದ ಮೇ ತಿಂಗಳಲ್ಲಿ 4.25% ಕ್ಕೆ ಇಳಿದಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕೆ.ಜಿ ಟೊಮೆಟೋಗೆ 129 ರೂ., ಯುಪಿಯಲ್ಲಿ 150 ರೂ.!
Advertisement
ತರಕಾರಿ ಬೆಲೆ ಸಾಕಷ್ಟು ಏರಿಕೆಯಾಗಿದೆ. ಕೆಲ ದಿನಗಳ ಹಿಂದೆ ಕೆಜಿಗೆ 20 ರೂ. ಇದ್ದ ವಸ್ತುಗಳು ಈಗ ದುಪ್ಪಟ್ಟಾಗಿವೆ. ಟೊಮೆಟೊ ಹೆಚ್ಚು ದುಬಾರಿಯಾಗಿದೆ ಎಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ.
ಬೆಲೆ ಏರಿಕೆ ತಾತ್ಕಾಲಿಕ ವಿದ್ಯಮಾನ ಎಂದು ಸರ್ಕಾರ ಹೇಳುತ್ತಿದ್ದರೆ, ಪ್ರತಿಪಕ್ಷಗಳು ಈ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿವೆ. ಮಂಗಳವಾರ, ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರಿನಾಟೆ ಅವರು ಟೊಮೆಟೊ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿಗಳ ಬುಟ್ಟಿಯಿಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸಿದರು. ಇದನ್ನೂ ಓದಿ: ಸೇಬಿಗಿಂತ ಟೊಮೆಟೊ ರೇಟೇ ಜಾಸ್ತಿ!
ಬೆಲೆ ಏರಿಕೆಯ ನಡುವೆ ಮಂಗಳವಾರ ರಾತ್ರಿ ಕರ್ನಾಟಕದ ಹಾಸನದಲ್ಲಿ ಮಹಿಳೆಯೊಬ್ಬರ ಜಮೀನಿನಲ್ಲಿ 2.5 ಲಕ್ಷ ರೂ. ಮೌಲ್ಯದ ಟೊಮೆಟೊ ಕಳ್ಳತನವಾಗಿದೆ. ಹಾಸನ ಜಿಲ್ಲೆಯ ಹಳ್ಳಿಯೊಂದರ ಜಮೀನಿನಲ್ಲಿದ್ದ ಸುಮಾರು 60 ಚೀಲ ಟೊಮೆಟೊಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
Web Stories