– 9 ತಿಂಗಳಲ್ಲಿ ಮೊದಲ ಬಾರಿಗೆ ತರಕಾರಿ ಹಣದುಬ್ಬರ 9.24ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಮಳೆ (Rain) ಬೆನ್ನಲ್ಲೇ ತರಕಾರಿ ಬೆಲೆ (Vegetable Price) ಏರಿಕೆಯಾಗಿದೆ. ಹಿಂಗಾರು ಮಳೆ ಎಫೆಕ್ಟ್‌ಗೆ ಗ್ರಾಹಕರು ಹೈರಾಣಾಗಿದ್ದಾರೆ.
Advertisement
ದೀಪಾವಳಿ (Deepavali) ಹಬ್ಬ ಸಮೀಪಿಸುತ್ತಿದ್ದಂತೆ ತರಕಾರಿಗಳಿಗೆ ಬೇಡಿಕೆ ಹೆಚ್ಚಿದೆ. ಬೇಡಿಕೆಯಷ್ಟು ತರಕಾರಿ ಪೂರೈಕೆಯಾಗದ ಹಿನ್ನೆಲೆ ಹಾಗೂ ಮಳೆಯಿಂದಾಗಿ ಸಾಕಷ್ಟು ತರಕಾರಿಗಳು ನಷ್ಟವಾದ ಹಿನ್ನೆಲೆ 9 ತಿಂಗಳಲ್ಲಿ ಮೊದಲ ಬಾರಿಗೆ ತರಕಾರಿ ಹಣದುಬ್ಬರ 9.24ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: Public TV Impact | ಕಲಬುರಗಿ ಸೆಂಟ್ರಲ್ ಜೈಲ್‌ನ ಇಬ್ಬರು ಅಧಿಕಾರಿಗಳು ಅಮಾನತು
Advertisement
Advertisement
ದೈನಂದಿನ ಅಡುಗೆಗೆ ಬೇಕಾದ ಈರುಳ್ಳಿ, ಆಲುಗೆಡ್ಡೆ, ಟೊಮಾಟೊ ದರಗಳ ಏರಿಕೆಯಿಂದ ಗ್ರಾಹಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬೆಳ್ಳುಳ್ಳಿ ಕೆಜಿಯೊಂದಕ್ಕೆ 320 ರೂ. ಇಂದ 440 ರೂ. ದರ ಏರಿಕೆ ಆಗಿದ್ದು, ಈರುಳ್ಳಿ ದರ 80ರ ಆಸುಪಾಸಿನಲ್ಲಿದೆ. ತರಕಾರಿ ದರ ಇನ್ನೂ ಹೆಚ್ಚುವ ಆತಂಕ ಗ್ರಾಹಕರಲ್ಲಿ ಮನೆ ಮಾಡಿದೆ. ಇದನ್ನೂ ಓದಿ: ಮತ್ತೆ 3 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ – ಬೆಂಗಳೂರಿಂದ ಮುಂಬೈಗೆ ಹೊರಟಿದ್ದ ಫ್ಲೈಟ್‌ಗೂ ಥ್ರೆಟ್ ಕಾಲ್
Advertisement
ಯಾವ ತರಕಾರಿ ದರ ಎಷ್ಟಿತ್ತು? ಎಷ್ಟಾಗಿದೆ?
ದಪ್ಪ ಈರುಳ್ಳಿ: 58 – 79 ರೂ.
ಸಾಂಬಾರ್ ಈರುಳ್ಳಿ: 60 – 85 ರೂ.
ಟೊಮಾಟೊ: 60- 85 ರೂ.
ಹಸಿ ಮೆಣಸಿನಕಾಯಿ: 50 – 70 ರೂ.
ಬೀಟ್‌ರೂಟ್: 45 – 60 ರೂ.
ಆಲುಗೆಡ್ಡೆ: 50 – 70 ರೂ.
ಕ್ಯಾಪ್ಸಿಕಮ್: 50 – 65 ರೂ.
ಹಾಗಲಕಾಯಿ: 45- 65 ರೂ.
ಬೀನ್ಸ್: 60 – 80 ರೂ.
ಡಬಲ್ ಬೀನ್ಸ್: 65 – 90 ರೂ.
ಕ್ಯಾಬೇಜ್: 35- 50 ರೂ.
ಸೌತೆಕಾಯಿ: 45 – 55 ರೂ.
ಬದನೆಕಾಯಿ: 40 – 55 ರೂ.
ಸುವರ್ಣಗೆಡ್ಡೆ: 50 – 70 ರೂ.
ಶುಂಠಿ: 75- 100 ರೂ.
ಬೆಂಡೆಕಾಯಿ: 35- 50 ರೂ.
ಕ್ಯಾರೆಟ್: 50- 65 ರೂ.