ಆಂಧ್ರ ಪ್ರದೇಶದ (Andhra Pradesh) ವಿಧಾನಸಭೆ ಚುನಾವಣೆಯಲ್ಲಿ ನಟಿ ರೋಜಾ (Roja) ಸೋತಿದ್ದಾರೆ. ವೈಸಿಪಿ ಪಕ್ಷದಿಂದ ಸ್ಪರ್ಧಿಸಿದ್ದ ರೋಜಾ ಹೀನಾಯ ಸೋಲು ಕಂಡಿದ್ದಾರೆ. ಸಚಿವೆಯೂ ಆಗಿದ್ದ ನಟಿಯ ಈ ಸೋಲಿಗೆ ನಿರ್ಮಾಪಕ, ಉದ್ಯಮಿ ಬಂಡ್ಲ ಗಣೇಶ್ (Bandla Ganesh) ಸಖತ್ ಪ್ರತಿಕ್ರಿಯೆ ನೀಡಿದ್ದಾರೆ. ರೋಜಾ ಅವರನ್ನು ನಯವಾಗಿ ಕಾಲೆಳೆದಿದ್ದಾರೆ.
ರೋಜಾ ಸೋಲಿನ ಬೆನ್ನಲ್ಲೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಬಂಡ್ಲ ಗಣೇಶ್, ‘ಜಬರ್ದಸ್ತ್ ಕಾಯ್ತಿದೆ.. ಬೇಗ ಬಾ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಜಬರ್ದಸ್ತ್ ಅನ್ನೋದು ರೋಜಾ ನಡೆಸಿಕೊಡುತ್ತಿದ್ದ ಶೋ. ಈಗ ರೋಜಾ ಸೋತಿದ್ದರಿಂದ ಯಾವುದೇ ಕೆಲಸ ಇರುವುದಿಲ್ಲ. ಹಾಗಾಗಿ ಈ ಶೋ ನಡೆಸಿಕೊಂಡು ಹೋಗು ಎನ್ನುವ ಅರ್ಥದಲ್ಲಿ ಕಾಲೆಳೆದಿದ್ದಾರೆ.
ಪವನ್ ಕಲ್ಯಾಣ್ (Pawan Kalyan) ಅವರ ಆಪ್ತ ಬಂಡ್ಲೆ ಗಣೇಶ್, ಹಾಗಾಗಿ ರೋಜಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪವನ್ ಕಲ್ಯಾಣ್ ವಿರುದ್ಧ ರೋಜಾ ಸಿಡಿದೆದ್ದಾಗೆಲ್ಲ ಪವನ್ ಪರ ಬ್ಯಾಟ್ ಬೀಸಿದವರು ಗಣೇಶ್, ಪವನ್ ಗೆಲುವಿಗಾಗಿ ಸಾಕಷ್ಟು ಶ್ರಮ ವಹಿಸಿದವರು. ಈಗ ಪವನ್ ಗೆದ್ದಿದ್ದಾರೆ. ಅಧಿಕಾರ ಚುಕ್ಕಾಣೆಯನ್ನೂ ಹಿಡಿಯಲಿದ್ದಾರೆ. ಈ ವೇಳೆಯಲ್ಲಿ ಬಂಡ್ಲ ಬರೆದಿರೊ ಪೋಸ್ಟ್ ವೈರಲ್ ಆಗಿದೆ.