ಬೆಂಗಳೂರು: ಹಾಡಹಗಲೇ ಖಾಸಗಿ ಕಂಪನಿಯ ಸಿಇಒ ಹಾಗೂ ಎಂಡಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಮೂವರು ಕಿರಾತಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಡಬಲ್ ಮರ್ಡರ್ (Double Murder) ಬಳಿಕ ಆರೋಪಿಗಳು ಎಣ್ಣೆ ಪಾರ್ಟ್ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.
ಮಂಗಳವಾರ ಬೆಂಗಳೂರಿನ (ಭೆನಗಾಲುರು) ಅಮೃತಹಳ್ಳಿ (Amruthahalli) ಠಾಣಾ ವ್ಯಾಪ್ತಿಯಲ್ಲಿ ಭೀಕರ ಡಬಲ್ ಮರ್ಡರ್ ನಡೆದಿತ್ತು. ಆರೋಪಿ ಜೋಕರ್ ಫೆಲಿಕ್ಸ್ (Joker Felix) ತನ್ನಿಬ್ಬರು ಸಹಚರರೊಂದಿಗೆ ಸೇರಿ ಏರೋನಾಟಿಕಲ್ಸ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಸಿಇಒ ವಿನುಕುಮಾರ್‌ನ ಹತ್ಯೆ ನಡೆಸಿದ್ದರು.
ಕೊಲೆ ಮಾಡಿದ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಹೋದ ಹಂತಕರು ಕುಣಿಗಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಫೆಲಿಕ್ಸ್, ವಿನಯ್ ರೆಡ್ಡಿ ಹಾಗೂ ಶಿವು ಬಂಧಿತ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ಡಬಲ್ ಮರ್ಡರ್ ಬಳಿಕ ಪಬ್ಲಿಕ್ ಟಿವಿ ಸುದ್ದಿಯ ಸ್ಟೇಟಸ್ – ವೃತ್ತಿ ವೈಷಮ್ಯವೇ ಕೊಲೆಗೆ ಕಾರಣ?
ಆರೋಪಿಗಳು ಸ್ಥಳದಿಂದ ಕ್ಯಾಬ್‌ನಲ್ಲಿ ಎಸ್ಕೇಪ್ ಆದ ಬಳಿಕ ಮೆಜೆಸ್ಟಿಕ್ ತೆರಳಿ ಅಲ್ಲಿ ರೈಲು ಹತ್ತಿದ್ದರು. ಅಲ್ಲಿಂದ ಕುಣಿಗಲ್ ಹೋಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿದ್ದರು. ಬೆಳಗ್ಗೆ ಎದ್ದು ವಕೀಲರ ಮೂಲಕ ಕೋರ್ಟ್‌ಗೆ ಶರಣಾಗುವ ಪ್ಲಾನ್ ಅನ್ನು ಆರೋಪಿಗಳು ಮಾಡಿದ್ದರು. ಅಷ್ಟರಲ್ಲಾಗಲೇ ಪೊಲೀಸರು ಬಂದು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರು ಅವರ ರೂಂಗೆ ಎಂಟ್ರಿ ಕೊಟ್ಟಾಗ ಆರೋಪಿಗಳು ತಣ್ಣಗೆ ಎಣ್ಣೆ ಹೊಡೆಯುತ್ತಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಡಬಲ್ ಮರ್ಡರ್: ನಂಬಿಕೆ ದ್ರೋಹಿಗಳನ್ನ ಮುಗಿಸ್ತೀನಿ ಅಂತಾ ಸ್ಟೇಟಸ್ ಹಾಕಿದ್ದ ಹಂತಕ!
Web Stories